ಒಂದಾದ ಲಕ್ಷ್ಮೀ ವೈಷ್ಣವ್.. ಕೀರ್ತಿ ಮಿಸ್ಸಿಂಗ್ ಸತ್ಯ ರಿವೀಲ್!
ಕಾವೇರಿ ಕುತಂತ್ರ ಫಲಿಸುತ್ತಾ?

ವೈಷ್ಣವ್ ಗೆ ಲಕ್ಷ್ಮೀ ಮೇಲಿನ ಮನಸ್ತಾಪ ಇನ್ನು ಕಡಿಮೆಯಾಗಿಲ್ಲ.. ಹೀಗಾಗಿ ಆಕೆಯ ಮೇಲೆ ಸದಾ ರೇಗ್ತಾನೆ ಇದ್ದಾನೆ. ಕಾವೇರಿ ಕೂಡ ಅವರಿಬ್ಬರನ್ನ ದೂರ ಮಾಡ್ಬೇಕು ಅಂತಾ ಪ್ರಯತ್ನಿಸ್ತಿದ್ದಾಳೆ. ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಹೋದ ಲಕ್ಷ್ಮೀ ಹಾಗೂ ವೈಷ್ಣವ್ ಮೇಲೆ ಒಂದು ಕಣ್ಣಿಟ್ಟಿದ್ದಾಳೆ. ಚಿಂಗಾರಿಯನ್ನ ಅಲ್ಲಿಗೆ ಕಳ್ಸಿದ್ದಾಳೆ. ಆದ್ರೀಗ ಇವರಿಬ್ಬರು ಒಂದಾದ್ರಾ? ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ. ಅದ್ರ ಜೊತೆಗೆ ಕೀರ್ತಿ ಎಲ್ಲಿ? ಮಿಸ್ಸಿಂಗ್ ಆಗಿದ್ಯಾಕೆ ಅಂತಾ ಸೀರಿಯಲ್ ಫ್ಯಾನ್ಸ್ ಕೇಳ್ತಿದ್ದಾರೆ. ಅಷ್ಟಕ್ಕೂ ಕೀರ್ತಿ ಯಾಕೆ ಸೀರಿಯಲ್ ನಲ್ಲಿ ಮಿಸ್ಸಿಂಗ್? ವೈಷ್ಣವ್ ಲಕ್ಷ್ಮೀ ಒಂದಾಗ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು! – ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಟೀಮ್ ಇಂಡಿಯಾ
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಈಗ ಲಕ್ಷ್ಮೀ ವೈಷ್ಣವ್ ಸುತ್ತವೇ ಸಾಗ್ತಾ ಇದೆ. ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿದ್ರೂ ಆಕೆಯ ವಿರುದ್ಧ ಒಂದಲ್ಲ ಒಂದು ಕುತಂತ್ರ ಮಾಡ್ತಿದ್ದಾಳೆ. ಇದೀಗ ಲಕ್ಷ್ಮೀ ಹಾಗೂ ವೈಷ್ಣವ್ ಸಾಮೂಹಿಕ ಮದುವೆಗೆ ಗೆಸ್ಟ್ ಆಗಿ ಹೋಗಿದ್ದಾರೆ. ಅವರಿಬ್ರ ಮಧ್ಯೆ ವೈಮನಸ್ಸು ಇದ್ರೂ ತೋರಿಸಿಕೊಳ್ಳದೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಆದ್ರೆ ಮನೆಯಲ್ಲಿ ಕೂತಿರೋ ಕಾವೇರಿ ಮಾತ್ರ ಇಂಗು ತಿಂದ ಮಂಗನ ತರ ಆಡ್ತಿದ್ದಾಳೆ. ಮಗ ಸೊಸೆ ಏನ್ ಮಾಡ್ತಿದ್ದಾರೆ ಅನ್ನೋದು ಆಕೆಯನ್ನ ಕಾಡ್ತಿದೆ. ಹೀಗಾಗೆ ಆಕೆ ಮದುವೆ ಮನೆಗೆ ಚಿಂಗಾರಿಯನ್ನ ಕಳುಹಿಸಿದ್ದಾಳೆ. ಅಲ್ಲೂ ಕೂಡ ತೊಂದರೆ ಲಕ್ಷ್ಮೀಗೆ ತೊಂದರೆ ಕೊಡುವಂತೆ ಹೇಳಿದ್ದಾಳೆ. ಇವೆಲ್ಲದ್ರ ಮಧ್ಯೆ ವೈಷ್ಣವ್ ಲಕ್ಷ್ಮೀಯನ್ನ ಬಾಯ್ತುಂಬ ಹೊಗಳಿದ್ದಾನೆ.
ಹೌದು, ವೈಷ್ಣವ್ ಸಾಮೂಹಿಕ ಮದುವೆಯಲ್ಲಿ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾನೆ. ಮದುವೆ ಆದ್ಮೇಲೆ ಜೀವನ ಬದಲಾಗುತ್ತೆ. ಆ ಬದಲಾವಣೆ ಚೆನ್ನಾಗಿರುತ್ತೆ. ಅಂತಾ ಬದಲಾವಣೆ ನನ್ನ ಲೈಫ್ ನಲ್ಲಿ ತಂದಿದ್ದು ನನ್ನ ಹೆಂಡ್ತಿ ಮಹಾಲಕ್ಷ್ಮೀ.. ಹೆಂಡ್ತಿ ಸಪೋರ್ಟ್ ಇದ್ರೆ ಗಂಡ ಏನ್ ಬೇಕಾದ್ರೂ ಸಾಧನೆ ಮಾಡ್ಬೋದು. ನಾನ್ ಮದ್ವೆ ಆದ್ಮೇಲೆ ನನ್ನ ಎಲ್ಲಾ ಕೆಲಸಗಳಿಗೂ ಸಪೋರ್ಟಿವ್ ಆಗಿರೋದು ನನ್ನ ಹೆಂಡ್ತಿ ಮಹಾಲಕ್ಷ್ಮೀ. ಸೋತು ಗೆಲ್ಲೋದೇ ಸುಖ ಸಂಸಾರದ ಗುಟ್ಟು ಅಂತಾ ಹೇಳಿದ್ದಾನೆ. ವೈಷ್ಣವ್ ಮಾತು ಕೇಳಿದ ಲಕ್ಷ್ಮೀ ಭಾವುಕಳಾಗಿದ್ದಾಳೆ.
ಮತ್ತೊಂದ್ಕಡೆ ವೈಷ್ಣವ್ ಲಕ್ಷ್ಮೀ ಹೋದ ಕಾರ್ಯಕ್ರಮದಲ್ಲೇ ವಿಧಿ ಕೂಡ ಮದುವೆ ಆಗ್ತಿದ್ದಾಳೆ. ಆದ್ರೆ ವೈಷ್ಣವ್ ತಂದೆ ಆಕೆಗೆ ಬೇರೆ ಸಂಬಂಧ ನೋಡ್ತಿದ್ದಾರೆ. ಬಿಸಿನೆಸ್ ಪಾಟ್ನರ್ ಜೊತೆ ಮದುವೆ ಬಗ್ಗೆ ಮಾತಾಡ್ತಿರುವಾಗಲೇ ಟಿವಿಯಲ್ಲಿ ವಿಧಿಯನ್ನ ನೋಡಿದ್ದಾರೆ. ಇದ್ರಿಂದಾಗಿ ಇಬ್ಬರು ಶಾಕ್ ಆಗಿದ್ದಾರೆ. ಇನ್ನು ಲಕ್ಷ್ಮೀ ಕೂಡ ವೈಷ್ಣವ್ ಬಳಿ ವಿಧಿ ಲವ್ ಬಗ್ಗೆ ಮಾತನಾಡಿದ್ಲು.. ಆದ್ರೆ ಆಕೆಯ ಮೇಲಿನ ಕೋಪಕ್ಕೆ ಈ ವಿಚಾರವನ್ನ ವೈಷ್ ತಲೆಗೆ ಹಾಕಿಕೊಂಡಿರ್ಲಿಲ್ಲ. ಇದೀಗ ವಿಧಿ ವಿಚಾರ ಗೊತ್ತಾದ ವೈಷ್ಣವ್ ಆಕೆಗೆ ಅಲ್ಲೇ ಮದುವೆ ಮಾಡ್ತಾನಾ ಅನ್ನೋ ಕುತೂಹಲ ಕಾಡ್ತಿದೆ. ಒಂದ್ವೇಳೆ ವಿಧಿಗೆ ವೈಷ್ಣವ್ ಲಕ್ಷ್ಮೀ ಮದುವೆ ಮಾಡ್ಸಿದ್ರೆ ಕಾವೇರಿಗೆ ದೊಡ್ಡ ಸೋಲಾಗುತ್ತೆ. ಕಾವೇರಿ ಪರ ಇದ್ದ ವಿಧಿ ಕೂಡ ಲಕ್ಷ್ಮೀ ಪರ ಹೋಗ್ತಾಳೆ. ಆದಾದ್ಮೇಲೆ ಕಾವೇರಿ ಕುತಂತ್ರವನ್ನೆಲ್ಲಾ ವಿಧಿ ವೈಷ್ಣವ್ ಮುಂದೆ ಹೇಳೋ ಸಾಧ್ಯತೆ ಇರುತ್ತೆ.. ಹೀಗಾಗಿ ವೈಷ್ಣವ್ ಗೆ ಲಕ್ಷ್ಮೀ ಮೇಲೆ ಕೋಪ ಹೋಗಿ ಅವರಿಬ್ರು ಒಂದಾಗ್ತಾರೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಇನ್ನು ಸೀರಿಯಲ್ ನಲ್ಲಿ ಕೀರ್ತಿ ಪಾತ್ರ ಸಖತ್ ಹೈಲೈಟ್.. ಎಲ್ಲಾ ಸೀನ್ ಗಳಲ್ಲಿ ಆಕೆಯನ್ನ ತೋರಿಸಲಾಗ್ತಿತ್ತು. ಆದ್ರೀಗ ಕೀರ್ತಿ ಪಾತ್ರ ಕಾಣ್ತಿಲ್ಲ.. ಕೀರ್ತಿ ಎಲ್ಲಿ ಹೋದ್ರು ಅಂತಾ ವೀಕ್ಷಕರು ಕೇಳ್ತಿದ್ರು.. ಸೀರಿಯಲ್ ನಲ್ಲಿ ವಿಧಿ ಮದುವೆ, ಲಕ್ಷ್ಮೀ ವೈಷ್ಣವ್, ಕಾವೇರಿ ಸುತ್ತವೇ ಕತೆ ಸಾಗ್ತಿದೆ. ಹೀಗಾಗಿ ಆಕೆಯನ್ನ ಸೀರಿಯಲ್ ನಲ್ಲಿ ತೋರಿಸಿರ್ಲಿಲ್ಲ. ಇದೀಗ ಕೀರ್ತಿಯನ್ನ ಮತ್ತೆ ತೋರಿಸಲಾಗಿದೆ. ಸುಪ್ರಿತಾ ಕೀರ್ತಿ ಮನೆಗೆ ಬಂದಿದ್ದು. ಲಕ್ಷ್ಮೀ ಯಾಕೆ ಇಷ್ಟ ಅಂತಾ ಕೇಳಿದ್ದಾಳೆ. ಅದಕ್ಕೆ ಲಚ್ಚಿ ಯಾವತ್ತು ಯಾರಿಗೂ ಬ್ಯಾಡ್ ಆಗ್ಬೇಕು ಅಂತಾ ಅಂದ್ಕೋಳಲ್ಲ.. ಎಲ್ಲರೂ ಹ್ಯಾಪಿ ಆಗಿರ್ಬೇಕು ಅಂತಾ ಬಯಸ್ತಾಳೆ ಅಂತಾ ಹೇಳಿದ್ದಾಳೆ. ಇದೀಗ ಲಕ್ಷ್ಮೀ ವೈಷ್ಣವ್ ಕೀರ್ತಿಯಿಂದ ಒಂದಾಗ್ತಾರಾ ಅಂತಾ ಕಾದು ನೋಡ್ಬೇಕು.