ಕೀರ್ತಿ ಡ್ರಾಮಾ ಕಡೆಗೂ ಬಯಲು! – ಲಕ್ಷ್ಮೀ ವೈಷ್ ಮಧ್ಯೆ ಕಾವೇರಿಗಿಲ್ಲ ಜಾಗ
ಅಮ್ಮನ ಕುತಂತ್ರಕ್ಕೆ ವೈಷ್ಣವ್ ತಂತ್ರ

ಕೀರ್ತಿ ಡ್ರಾಮಾ ಕಡೆಗೂ ಬಯಲು! – ಲಕ್ಷ್ಮೀ ವೈಷ್ ಮಧ್ಯೆ ಕಾವೇರಿಗಿಲ್ಲ ಜಾಗಅಮ್ಮನ ಕುತಂತ್ರಕ್ಕೆ ವೈಷ್ಣವ್ ತಂತ್ರ

ಲಕ್ಷ್ಮೀಯನ್ನ ಮನೆಯಿಂದ ಓಡ್ಸಿದ್ರೂ ಕಾವೇರಿಗೆ ಅದ್ಯಾಕೋ ನೆಮ್ಮದಿಯೇ ಇಲ್ಲ. ಆಕೆಯನ್ನ ಮಟ್ಟ ಹಾಕ್ಬೇಕು ಅಂತಾ ಸದಾ ಒಂದಲ್ಲ ಒಂದು ಕುತಂತ್ರ ಮಾಡ್ತಾ ಬಂದಿದ್ದಾಳೆ. ಆದ್ರೀಗ ಕಾವೇರಿಗೆ ಆಕೆಯ ಕುತಂತ್ರ ಆಕೆಗೆ ಉಲ್ಟಾ ಹೊಡಿತಿದೆ. ಇದೀಗ ವೈಷ್ಣವ್‌ ಲಕ್ಷ್ಮೀ ಮಧ್ಯೆ ಕಾವೇರಿಗೆ ಜಾಗ ಇಲ್ಲ ಅನ್ನೋದು ಮತ್ತೊಂದ್ಸಲ ಫ್ರೂವ್‌ ಆಗಿದೆ.. ಅಷ್ಟೇ ಅಲ್ಲ ಕೀರ್ತಿಗೆ ಎಲ್ಲವೂ ನೆನಪಿದೆ. ಅವಳು ಡ್ರಾಮಾ ಮಾಡ್ತಿದ್ದಾಳಾ ಅನ್ನೋ ಅನುಮಾನ ಕಾಡ್ತಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಚೇತರಿಕೆ  – ಮಂತ್ರಾಲಯಕ್ಕೆ ಭೇಟಿ ಕೊಟ್ಟ ಶಿವರಾಜ್‌ ಕುಮಾರ್‌ ಕುಟುಂಬ

ಲಕ್ಷ್ಮೀ ಬಾರಮ್ಮ ಸೀರಿಯಲ್‌ ರೋಚಕ ಘಟ್ಟ ತಲುಪಿದೆ. ಕಾವೇರಿ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿದ್ಮೇಲೆ ಕಾವೇರಿ ಹುಚ್ಚಾಟ ನಿಂತಿಲ್ಲ. ವೈಷ್ಣವ್‌ ಹಾಗೂ ಲಕ್ಷ್ಮೀ ಮಧ್ಯೆ ಮತಷ್ಟು ಅಂತರ ತರ್ಬೇಕು. ಅವರಿಬ್ಬರ ಮಧ್ಯೆ ಮನಸ್ತಾಪ ಜಾಸ್ತಿ ಮಾಡ್ಬೇಕು ಅಂತ ಒಂದಲ್ಲ ಒಂದು ಕುತಂತ್ರ ಮಾಡ್ತಿದ್ದಾಳೆ. ವೈಷ್ಣವ್‌ ಎರಡನೇ ಮದುವೆ ಮಾಡಿಲು ಮುಂದಾಗಿದ್ದಾಳೆ. ವೈಷ್ಣವ್‌ ಕೂಡ ಅಮ್ಮ ಏನ್‌ ಹೇಳ್ತಾರೋ ಅದನ್ನೇ ಮಾಡ್ತೀನಿ ಅಂತಾ ಹೇಳಿದ್ದಾನೆ. ಈ ಮಾತು ಕೇಳಿದ ಲಕ್ಷ್ಮೀ ಶಾಕ್‌ ಆಗಿದ್ದಾಳೆ. ಇದೀಗ ವೈಷ್ಣವ್‌ನ ಸಾಮೂಹಿಕ ವಿವಾಹಕ್ಕೆ ಗೆಸ್ಟ್‌ ಆಗಿ ಕರ್ದಿದ್ದಾರೆ. ಇಲ್ಲಿಗೆ ಲಕ್ಷ್ಮೀ ಜೊತೆ ಹೋಗ್ತೇನೆ ಅಂತಾ ಹೇಳಿದ್ದಾನೆ. ಆದ್ರೆ ಕಾವೇರಿ ತಾನೂ ನಿಮ್ಮ ಜೊತೆ ಬರ್ತೀನಿ ಅಂತಾ ಹೇಳಿದ್ದಾನೆ.

ಹೌದು ಲಕ್ಷ್ಮೀ ಜೊತೆ  ಕಾರ್ಯಕ್ರಮಕ್ಕೆ ಹೋಗಲು ವೈಷ್ಣವ್‌ ರೆಡಿಯಾಗಿದ್ದಾನೆ. ಈ ವೇಳೆ ಕಾವೇರಿ ತಾನೂ ನಿಮ್ಮ ಜೊತೆ ಬರ್ತೇನೆ ಅಂತಾ ಹೇಳಿದ್ದಾಳೆ. ಆದ್ರೆ ವೈಷ್ಣವ್‌ ಕಾವೇರಿಯನ್ನ ಬರೋದು ಬೇಡ ಎಂದು ಹೇಳಿದ್ದಾನೆ. ನನ್ನ ಜೊತೆ ನೀನು ಬರೋದು ಬೇಡ ಎಂದಿದ್ದಾಳೆ. ನಾನು ಬರೋದ್ರಿಂದ ನಿಮಗೆ ಏನ್‌ ತೊಂದ್ರೆ ಅಂತಾ ಕೇಳಿದ್ದಾಳೆ. ತೊಂದ್ರೆ ನಮಿಗಲ್ಲ.. ನಿಮಿಗೆ.. ಲಕ್ಷ್ಮೀ ಕೂಡ ಬರ್ತಾಳೆ. ನೀವಿಬ್ರು ಒಟ್ಟಿಗೆ ಇದ್ರೆ ಜಗಳ ಆಗುತ್ತೆ.. ಇದ್ರಿಂದ ನಿಮ್ಮ ಮನಸಿಗೆ ಬೇಜಾರು ಆಗುತ್ತೆ. ನೀನು ನನಗೆ ನೀನು ಖುಷಿಯಾಗಿರೋದು ಮುಖ್ಯ ಅಂತಾ ನೈಸ್‌ ಹಾಗೇ ಕಾವೇರಿನಾ ಹ್ಯಾಂಡಲ್‌ ಮಾಡಿದ್ದಾನೆ.

ಮತ್ತೊಂದ್ಕಡೆ ಕೀರ್ತಿ ಡ್ರಾಮಾ ಮಾಡ್ತಿದ್ದಾಳಾ ಅನ್ನೋ ಅನುಮಾನ ಎಲ್ಲರನ್ನ ಕಾಡ್ತಿದೆ. ಯಾಕ್ರಂದ್ರೆ ಯಾರು ಇಲ್ಲದೇ ಇರೋವಾಗ ಒಂದತರ ಮಾಡ್ತಾಳೆ.. ಎಲ್ಲರೂ ಇದ್ದಾಗ ಒಳ್ಳೆ ಚೈಲ್ಡ್‌ ತರ ಆಡ್ತಾಳೆ.. ಮೊನ್ನೆಯಷ್ಟೇ ಲಕ್ಷ್ಮೀ ರೂಮ್‌ ನಲ್ಲಿ ಅಳ್ತಿದ್ದಾಗ ಕೀರ್ತಿ ಅಲ್ಲ ಲಚ್ಚಿ ಅಳ್ತಿದ್ದಾಳೆ. ಸಮಧಾನ ಮಾಡು ಅಂತಾ ಹೇಳಿದ್ಲು.. ಆಗ ಲಕ್ಷ್ಮೀ ಅಳ್ಬೇಕು.. ಆಗ ಅವಳು ಸ್ಟ್ರಾಂಗ್‌ ಆಗ್ತಾಳೆ ಅಂತಾ ಹೇಳಿದ್ದಾಳೆ. ಕೀರ್ತಿ ಮಾತನ್ನ ಕೇಳಿದ ಅವಳ ತಾಯಿ, ನಿನಗೆ ಹಳೆಯದ್ದೆಲ್ಲಾ ನೆನಪಾಯ್ತಾ ಅಂತಾ ಕೇಳಿದ್ದಾಳೆ. ಆಗ ಕೀರ್ತಿ ಇಲ್ಲ ಆಂಟಿ ಲಚ್ಚಿ ಯಾವಾಗ್ಲೂ ಸ್ಟ್ರಾಂಗ್‌ ಅಂತಾ ಡ್ರಾಮಾ ಮಾಡಿದ್ದಾಳೆ. ಇದೀಗ ಕೀರ್ತಿ ವರ್ತನೆ ನೋಡಿದ್ರೆ ಆಕೆಗೆ ಏನು ಮರೆತು ಹೋಗಿಲ್ಲ.. ಏನೋ ಸ್ಕೆಚ್‌ ಹಾಕಿದ ತರ ಕಾಣ್ತಿದೆ. ಅದಕ್ಕೆ ಡ್ರಾಮಾ ಮಾಡ್ತಿದ್ದಾಳೆ ಅನ್ನೋದು ಗೊತ್ತಾಗ್ತಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ಕಾವೇರಿಯನ್ನು ಕಾರ್ಯಕ್ರಮಕ್ಕೆ ಬರೋದು ಬೇಡ ಅಂತಾ ವೈಷ್ಣವ್‌ ಹೇಳಿದ್ದಾನೆ. ಇಲ್ಲಿ ಏನೋ twist ಇದೆ. ವೈಷ್ಣವ ಗೆ  ಎಲ್ಲ ಗೊತ್ತಿದೆ. ಎಲ್ಲ ವಿಷ್ಯ ಹೇಳ್ಕೊಂಡ, ಬಳಿಕ ತನ್ನ ಪ್ರೀತಿ ಹೇಳ್ಕೊಳ್ತಾನೆ.. ಪ್ರೋಗ್ರಾಂ ಮುಗಿಸ್ಕೊಂಡು ಜೊತೆಯಲ್ಲೇ ಬರುವ ಸಾಧ್ಯತೆ ಇದೆ ಅನ್ಸುತ್ತೆ. ಕಾವೇರಿ ಇಲ್ಲು ಏನಾದ್ರೂ ಕಿತಾಪತಿ ಮಾಡ್ತಾಳೆ ಅನೋದನ್ನ ನೋಡಲು ಪ್ಲ್ಯಾನ್‌ ಮಾಡಿದ್ದಾನೆ ಅನ್ಸುತ್ತೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಪುಟ್ಟ ಪುಟ್ಟ ಅಂತಾ ಹೇಳ್ಕೊಂಡು ಕಾವೇರಿ ವೈಷ್ಣವ್ ಗೆ ಚಟ್ಟ ಕಟ್ಟುವ ಪ್ಲ್ಯಾನ್‌ ಮಾಡಿದ್ದಾಳೆ. ಆಕೆಗೆ ಮಗನ ಲೈಫ್‌ ಗಿಂತ ಸೇಡು, ದ್ವೇಷವೇ ಮುಖ್ಯ. ಕಾವೇರಿಯ ಕೃತ್ಯ ಕೊನೆಗೊಳ್ಳುವುದು ಯಾವಾಗ.. ಸೀರಿಯಲ್‌ ನಲ್ಲಿ ಬರೋ ದೃಶಗಳು ಮನಸಿನ ಮೇಲೆ ತುಂಬಾ ಪ್ರಭಾವ ಬೀರ್ತಿದೆ. ಆದಷ್ಟು ಉತ್ತಮ ಸನ್ನಿವೇಶಗಳನ್ನೇ ನೋಡಿ.. ಟಿಆರ್‌ಪಿಗಾಗಿ ಸಮಾಜಕ್ಕೆ ಕೆಟ್ಟ ಸಂದೇಶಗಳನ್ನ ಕೊಡ್ಬೇಡಿ ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M