ಕೀರ್ತಿ ಹಳೆ ನೆನಪು ವಾಪಸ್‌? – ವೈಷ್ಣವ್‌ ಗೆ ಮತ್ತೊಂದು ಮದುವೆ
ಲಕ್ಷ್ಮೀ ಸವತಿ ಇವಳೇನಾ?

ಕೀರ್ತಿ ಹಳೆ ನೆನಪು ವಾಪಸ್‌? – ವೈಷ್ಣವ್‌ ಗೆ ಮತ್ತೊಂದು ಮದುವೆಲಕ್ಷ್ಮೀ ಸವತಿ ಇವಳೇನಾ?

ಕಾವೇರಿ ಜೈಲಿಗೆ ಹೋಗಿ ಬಂದ್ರೂ ಆಕೆಗೆ ಬುದ್ಧಿ ಬರೋತರ ಕಾಣ್ತಿಲ್ಲ.. ಮಗನ ಲೈಫ್‌ ಹಾಳಾದ್ರೂ ಪರವಾಗಿಲ್ಲ.. ತಾನು ಖುಷಿಯಾಗಿರ್ಬೇಕು ಅನ್ನೋ ಸ್ವಾರ್ಧಿ.. ಕಾವೇರಿ ಕೀರ್ತಿ, ವೈಷ್ಣವ್‌, ಲಕ್ಷ್ಮೀ ಲೈಫ್‌ ಹಾಳು ಮಾಡಿದ್ದಾಗಿದೆ.. ಇದೀಗ ತನ್ನ ಹುಚ್ಚಾಟಕ್ಕೆ ಮತ್ತೊಬ್ಬಳ ಲೈಫ್‌ ಹಾಳು ಮಾಡೋದಿಕ್ಕೆ ಸ್ಕೆಚ್‌ ಹಾಕಿದ್ದಾಳೆ.. ವೈಷ್ಣವ್‌ ಗೆ ಎರಡನೇ ಮದುವೆ ಮಾಡಿಸೋ ಮೂಲಕ ಲಕ್ಷ್ಮೀ ಮೇಲಿನ ಸೇಡನ್ನ ತೀರಿಸಿಕೊಳ್ಳೋಕೆ ಮುಂದಾಗಿದ್ದಾಳೆ.. ಹಾಗಾದ್ರೆ ವೈಷ್ಣವ್‌ ಗೆ ಯಾರ ಜೊತೆ ಕಾವೇರಿ ಮದುವೆ ಮಾಡಿಸ್ತಾಳೆ? ವೈಷ್ಣವ್‌ ಮದುವೆ ಒಪ್ಪಿಕೊಳ್ತಾನಾ? ಕೀರ್ತಿಗೆ ಮತ್ತೆ ಹಳೇ ನೆನಪು ವಾಪಸ್‌ ಬರುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತವರಿನಲ್ಲೇ ಮಣ್ಣು ಮುಕ್ಕಿದ ಪಾಕಿಸ್ತಾನ – ತ್ರಿಕೋನ ಸರಣಿಯಲ್ಲಿ ಹೀನಾಯ ಸೋಲು

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಾವೇರಿ ಜೈಲಿಗೆ ಬರ್ತಿದ್ದಂತೆ ಲಕ್ಷ್ಮೀ ವಿರುದ್ಧ ರಿವೇಂಜ್‌ ತೆಗೆದುಕೊಳ್ತಿದ್ದಾಳೆ.. ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿ ಸಂಭ್ರಮಿಸ್ತಿದ್ದಾಳೆ. ಇದೀಗ ಕಾವೇರಿ ಲಕ್ಷ್ಮೀ ಮೇಲೆ ಸೇಡು ತೀರಿಸಿಕೊಳ್ಳಲು ಹೊಸ ಪ್ಲ್ಯಾನ್‌ ಮಾಡಿದ್ದಾಳೆ. ವೈಷ್ಣವ್‌ ಗೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಹೌದು ಲವ್‌ ಮಾಡ್ತಿದ್ದಾಳೆ.. ಅವಳ ಬಾಯ್‌ ಫ್ರೆಂಡ್‌ ಮನೆಯಲ್ಲಿ ಹುಡುಗಿ ಹುಡುಕ್ತಿದ್ದಾರೆ. ಆದಷ್ಟು ಬೇಗ ಮನೆಯಲ್ಲಿ ತಿಳಿಸು ಅಂತಾ ಹೇಳಿದ್ದಾನೆ.. ಬಳಿಕ ವಿಧಿ ಕಾವೇರಿ ಬಳಿ ಬಂದು.. ಮನೆ ವಾತಾವರಣ ಚೇಂಜ್‌ ಆಗಿದೆ.. ಎಲ್ಲವೂ ತಿಳಿಯಾಗ್ಬೇಕು ಅಂತಾ ಸಂಭ್ರಮ ನಡಿಬೇಕು.. ಅಂದ್ರೆ ಮನೆಯಲ್ಲಿ ಮದುವೆ ಆಗ್ಬೇಕು ಅಂತಾ ಇನ್‌ಡೈರೆಕ್ಟ್‌ ಆಗಿ ತನ್ನ ಮದುವೆ ಮಾಡಿಸು ಅಂತಾ ಹೇಳಿದ್ದಾಳೆ.. ಆದ್ರೆ ಕಾವೇರಿಗೆ ಬೇರೆಯೇ ಐಡಿಯಾ ಬಂದಿದೆ. ವಿಧಿ ಮದುವೆ ಮಾಡಿಸೋ ಬದಲು ಕಾವೇರಿ ವೈಷ್ಣವ್‌ಗೆ ಮತ್ತೊಂದು ಮದುವೆ ಮಾಡಿಸೋದಿಕ್ಕೆ ಮುಂದಾಗಿದ್ದಾಳೆ. ಈ ವಿಚಾರವನ್ನ ಮನೆಯವರ ಮುಂದೆ ಹೇಳಿದ್ದಾನೆ.. ಸೊಸೆ ಇಲ್ಲದೆ ಮನೆ ಬಿಕೋ ಅಂತಿದೆ.. ನನಗೆ ಸೊಸೆ ಬೇಕು.. ವೈಷ್ಣವ್‌ ಗೆ ಮತ್ತೊಂದು ಮದುವೆ ಮಾಡಿಸ್ತೇನೆ ಅಂತಾ ಹೇಳಿದ್ದಾರೆ. ಇದ್ರಿಂದ ಮನೆಯವರು ಶಾಕ್‌ ಆಗಿದ್ದಾರೆ.

ಕಾವೇರಿ ವೈಷ್ಣವ್‌ ಗೆ ಇನ್ನೊಂದು ಮದುವೆ ಅಂತಾ ಹೇಳ್ತಿದ್ದಂತೆ ಯಾರ ಜೊತೆ ಮದುವೆ ಮಾಡಿಸ್ತಾಳೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಕೀರ್ತಿ ಈಗ ಲಕ್ಷ್ಮೀ ಪರ.. ಕೀರ್ತಿಗೆ ಕಾವೇರಿಯನ್ನ ಕಂಡ್ರೆನೇ ಆಗಲ್ಲ.. ಹೀಗಾಗಿ ಕೀರ್ತಿಯನ್ನ ಕಾವೇರಿ ಸೊಸೆ ಮಾಡಿಕೊಳ್ಳಲ್ಲ.. ಅನ್ನೋದು ವೀಕ್ಷಕರ ಲೆಕ್ಕಾಚಾರ ಇದೀಗ ವೈಷ್ಣವ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದ ಅನನ್ಯ ಜೊತೆ ಕಾವೇರಿ ಕೈಜೋಡಿಸ್ಬೋದು.. ಆಕೆಯ ಜೊತೆ ವೈಷ್ಣವ್‌ ಮದುವೆ ಮಾಡಿಸ್ಬೋದು ಅಂತಾ ವೀಕ್ಷಕರು ಹೇಳ್ತಿದ್ದಾರೆ..

ಇನ್ನು ಕೀರ್ತಿಗೆ ಹಳೆಯದ್ದೆಲ್ಲಾ ಒಂದೊಂದಾಗೇ ನೆನಪಿಗೆ ಬರ್ತಿದೆ. ಕಾವೇರಿಯನ್ನ ನೋಡಿದ ತಕ್ಷಣ ಆಕೆಯನ್ನ ಬೆಟ್ಟದಿಂದ ದೂಡಿ ಹಾಕಿದ ಸೀನ್‌ ಆಕೆಗೆ ಪದೇ ಪದೇ ನೆನಪಿಗೆ ಬರ್ತಿದೆ.. ಕಾವೇರಿಯನ್ನ ನೋಡಿದ್ರಂತೂ ಕೊಲೆಗಾರ್ತಿ ಅನ್ನುತ್ತಿದ್ದ ಕೀರ್ತಿ ಮೊನ್ನೆ ಸಾಯಿಸಲು ಹೋಗಿದ್ಲು.. ಇದೀಗ ಕೀರ್ತಿ ಕೈಗೆ ಲಕ್ಷ್ಮೀ ತಾಳಿ ಸಿಕ್ಕಿಹಾಕಿಕೊಂಡಿದೆ.. ಇದ್ರಿಂದಾಗಿ ಕೀರ್ತಿಗೆ ಹಳೆಯದ್ದೆಲ್ಲಾ ನೆನಪಾಗಿದೆ.. ಕೀರ್ತಿ ಲಕ್ಷ್ಮೀಗೆ ಅವಾಜ್‌ ಹಾಕಿದ್ದು.. ತಾಳಿ ವಿಚಾರಕ್ಕೆ ಜಗಳ ಆಡಿದ್ದು ಎಲ್ಲವೂ ನೆನಪಾಗಿದೆ. ಇದೀಗ ಕೀರ್ತಿಗೆ ಹಳೇ ನೆನಪು ವಾಪಸ್‌ ಬಂದ್ರೆ ಲಕ್ಷ್ಮೀಯನ್ನ ದೇಷ ಮಾಡ್ತಾಳಾ? ವೈಷ್ಣವ್‌ ನ ಪಡೆಯಲು ಕಾವೇರಿ ಜೊತೆ ಸೇರ್ತಾಳಾ ಅನ್ನೋದು ಈಗಿರುವ ಕುತೂಹಲ.

Shwetha M

Leave a Reply

Your email address will not be published. Required fields are marked *