ಗೆದ್ದ ಕೀರ್ತಿ, ಸಿಕ್ಕಿ ಬಿದ್ದ ಕಾವೇರಿ! – ಅಮ್ಮನ ಕ್ಷಮಿಸ್ತಾನಾ ವೈಷ್ಣವ್?
ಮನೆಗೆ ಮತ್ತೆ ಬಂದ ಲಕ್ಷ್ಮೀ?

ಲಕ್ಷ್ಮೀ ವೈಷ್ಣವ್ ನ ದೂರ ಮಾಡ್ಬೇಕು ಕಾವೇರಿ ಏನೇನೋ ಮಾಡ್ತಿದ್ದಾಳೆ.. ಆದ್ರೆ ಕಾವೇರಿಗೆ ಕೀರ್ತಿ ಅಡ್ಡಿ ಆಗ್ತಿದ್ದಾಳೆ.. ಲಕ್ಷ್ಮೀ ವೈಷ್ಣವ್ ನ ಒಂದೇ ಕಡೆ ಸೇರಿಸಿದ ಕೀರ್ತಿ, ಮತ್ತೊಂದ್ಕಡೆ ಕಾವೇರಿಯನ್ನ ಕುತ್ತಿಗೆ ಹಿಡಿದಿದ್ಲು.. ಆದ್ರೆ ಕಾವೇರಿ ಕೀರ್ತಿಯಿಂದ ತಪ್ಪಿಸಿಕೊಂಡು ಆಕೆಯನ್ನೇ ಮುಗಿಸಲು ಹೊರಟಿದ್ದಾಳೆ.. ಇದೀಗ ಕಾವೇರಿ ಮನೆಯವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.. ಹಾಗಾದ್ರೆ ಕಾವೇರಿ ಕೆಟ್ಟವಳು ಅಂತಾ ಮನೆಯವರೆಲ್ಲರಿಗೂ ಗೊತ್ತಾಯ್ತಾ? ಲಕ್ಷ್ಮೀ ಇರೋ ವಿಷ್ಯ ಹೇಳಿ ವೈಷ್ಣವ್ ಕೋಪನಾ ತಣ್ಣಗಾಗಿಸ್ತಾಳಾ? ವೈಷ್ಣವ್ ಈಗ ಯಾರ ಪರ? ಕಾವೇರಿ ವಿಷ್ಯಾ ವೈಷ್ಣವ್ ಗೆ ಗೊತ್ತಾದ್ರೆ ಆತ ಕ್ಷಮಿಸ್ತಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕರು ನಿಧನ – ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸಾ*ವು
ಕೀರ್ತಿಗೆ ಅದ್ಯಾವಾಗ ನೆನಪಿನ ಶಕ್ತಿ ಬರುತ್ತೆ.. ಹೋಗುತ್ತೆ ಅಂತಾ ಹೇಳೋದಿಕ್ಕೆ ಆಗಲ್ಲ.. ಆದ್ರೆ ಕಾವೇರಿನ ನೋಡಿದಾಗಂತೂ ಆಕೆಯ ರಕ್ತ ಕೊತ ಕೊತ ಅಂತಾ ಕುದಿಯುತ್ತೆ.. ಕೊಲೆಗಾರ್ತಿ.. ಕೊಲೆಗಾರ್ತಿ ಅಂತಾ ಕಿರುಚಾಡ್ತಾಳೆ.. ಅದಾದ್ಮೇಲೆ ಸುಮ್ಮನಾಗುತ್ತಾಳೆ.. ಆದ್ರೀಗ ಲಕ್ಷ್ಮೀ ಮೇಲಿನ ಕೋಪ ವೈಷ್ಣವ್ ಗೆ ಕಡಿಮೆ ಆಗಲಿ.. ಅವರಿಬ್ಬರು ಒಂದಾಗಲಿ ಅಂತಾ ಕೀರ್ತಿ ಅಂಕಿತ್ ಜೊತೆ ಸೇರ್ಕೊಂಡು ಪ್ಲ್ಯಾನ್ ಮಾಡಿದ್ದಾಳೆ.. ಅವರಿಬ್ಬರನ ಒಂದೇ ಕಡೆ ಸೇರಿಸಿದ್ದಾಳೆ.. ಆದ್ರೆ ಇತ್ತ, ಕೀರ್ತಿಗೆ ಅಚಾನಕ್ ಆಗಿ ಹಳೇದೆಲ್ಲಾ ನೆನಪಾಗಿದೆ. ಕಾವೇರಿ ವಿರುದ್ಧ ಕೀರ್ತಿ ಅಕ್ಷರಶಃ ರೊಚ್ಚಿಗೆದ್ದಿದ್ದಾಳೆ. ಎಷ್ಟರಮಟ್ಟಿಗೆ ಅಂದ್ರೆ, ಕಾವೇರಿಯನ್ನೇ ಸಾಯಿಸೋಕೆ ಮುಂದಾಗಿದ್ದಾಳೆ ಕೀರ್ತಿ.
ಹೌದು, ಬಾಲ್ಕನಿಯಲ್ಲಿ ಕಾವೇರಿಯನ್ನ ನೋಡುತ್ತಿದ್ದ ಹಾಗೇ ಕೀರ್ತಿಗೆ ತಾನು ಬೆಟ್ಟದ ಮೇಲಿಂದ ಬಿದ್ದ ಘಟನೆ ನೆನಪಾಗಿದೆ. ತನ್ನನ್ನ ಬೆಟ್ಟದ ಮೇಲಿಂದ ತಳ್ಳಿದ್ದು ಕಾವೇರಿ ಅಂತ ಕೀರ್ತಿಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ, ಕೀರ್ತಿ ಕೆರಳಿದ್ದಾಳೆ. ನೇರವಾಗಿ ಕಾವೇರಿಯ ಕೋಣೆಗೆ ಕೀರ್ತಿ ನುಗ್ಗಿದ್ದಾಳೆ. ನಿದ್ದೆ ಮಾಡುತ್ತಿದ್ದ ಕಾವೇರಿಯನ್ನ ಎಬ್ಬಿಸಿದ ಕೀರ್ತಿ, ಏಯ್ ಕಾವೇರಿ ಆಂಟಿ.. ಇವತ್ತೇ ನಿಮ್ ಕೊನೆ ರಾತ್ರಿ ಅಂತ್ಹೇಳಿ ಕತ್ತು ಹಿಸುಕಿದ್ದಾಳೆ. ಆದ್ರೆ ಕಾವೇರಿ ಆಕೆಯನ್ನ ತಳ್ಳಿ ಅವಳನ್ನೇ ಸಾಯಿಸಲು ಮುಂದಾಗಿದ್ದಾಳೆ.. ಅಲ್ಲೇ ಇದ್ದ ಲ್ಯಾಂಪ್ ನಲ್ಲಿ ಹೊಡೆದಿದ್ದಾಳೆ.. ಬಳಿಕ ಮನೆಯವರ ಮುಂದೆ ಕೀರ್ತಿ ನನ್ನನ್ನ ಸಾಯಿಸಲು ಬಂದ್ಲು.. ನನ್ನನ್ನ ಪ್ರೊಟೆಕ್ಟ್ ಮಾಡಿಕೊಳ್ಳಲು ಆಕೆಯನ್ನ ಸಾಯಿಸಿದೆ ಅಂತಾ ಹೇಳ್ತೇನೆ ಎಂದಿದ್ದಾಳೆ.. ಅಷ್ಟೊತ್ತಿಗೆ ಕಾವೇರಿ ಮನೆಯವರು ಆಕೆಯ ರೂಮ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಇದೀಗ ಕಾವೇರಿ ಏನ್ ಮಾಡ್ತಾಳೆ.. ಕೀರ್ತಿ ಮೇಲೆಯೇ ಗೂಬೆ ಕೂರಿಸ್ತಾಳಾ? ಮನೆಯವರು ಆಕೆ ಕೊಟ್ಟ ರೀಸನ್ ಅನ್ನ ನಂಬ್ತಾರಾ.. ಅನ್ನೋದು ಈಗ ವೀಕ್ಷಕರ ಮುಂದಿರುವ ಕುತೂಹಲ..
ಮತ್ತೊಂದ್ಕಡೆ ಕೀರ್ತಿ ಹಾಗೂ ಅಂಕಿತ್ ಪ್ಲಾನ್ ಮಾಡಿ ವೈಷ್ಣವ್ ಮತ್ತು ಲಕ್ಷ್ಮೀ ಒಂದೆಡೆ ಸೇರುವ ಹಾಗೆ ಮಾಡಿದ್ದಾರೆ. ಲೆಟರ್ ಬರೆದು ಇಬ್ಬರನ್ನ ಒಟ್ಟಿಗೆ ಸೇರಿಸಿರೋದು ಕೀರ್ತಿ ಮತ್ತು ಅಂಕಿತ್ ಎಂಬ ಸತ್ಯ ವೈಷ್ಣವ್ ಮತ್ತು ಲಕ್ಷ್ಮೀಗೆ ಗೊತ್ತಾಗಿದೆ. ಪರಿಣಾಮ, ಲಕ್ಷ್ಮೀ ಮೇಲಿನ ಅಸಮಾಧಾನವನ್ನ ವೈಷ್ಣವ್ ಹೊರಹಾಕಿದ್ದಾನೆ. ವೈಷ್ಣವ್‌ಗೆ ಇರೋ ಸತ್ಯವನ್ನೆಲ್ಲಾ ಹೇಳಿಬಿಡಬೇಕು ಅಂತ ಲಕ್ಷ್ಮೀ ಮನಸ್ಸು ಮಾಡಿದ್ದಾಳೆ. ಹಾಗಾದ್ರೆ, ಕಾವೇರಿಯ ಕೇಡು ಕೆಲಸಗಳನ್ನೆಲ್ಲಾ ವೈಷ್ಣವ್ ಮುಂದೆ ಲಕ್ಷ್ಮೀ ಬಾಯಿಬಿಡ್ತಾಳಾ? ವೈಷ್ಣವ್‌ಗೆ ಸತ್ಯ ಗೊತ್ತಾಗುತ್ತಾ? ಲಕ್ಷ್ಮೀ ಮಾತನ್ನ ವೈಷ್ಣವ್ ನಂಬುತ್ತಾನಾ? ವೈಷ್ಣವ್ ಈಗ ಯಾರ ಪರ? ಲಕ್ಷ್ಮೀಯಾ ಅಥವಾ ಅಮ್ಮನಾ ಅನ್ನೋದು ಕಾದುನೋಡಬೇಕಿದೆ.
ಇನ್ನೊಂದ್ಕಡೆ ಅಂಕಿತ್ ಹಾಗೂ ಗಂಗಾ ಸೇರಿಕೊಂಡು ಸುಬ್ಬಿ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡ್ತಿದ್ದಾರೆ. ತಮಗೆ ಅನುಮಾನವಿದ್ದ ಫೋನ್ ನಂಬರ್‌ಗೆ ಕರೆ ಮಾಡಿದಾಗ, ಅದರಲ್ಲಿ ಮಾತಾಡಿದ್ದು ಸುಬ್ಬಿ ಎಂಬ ಡೌಟ್ ಗಂಗಾ ಹಾಗೂ ಅಂಕಿತ್‌ಗೆ ಶುರುವಾಗಿದೆ. ಆದರೆ, ಸುಬ್ಬಿ ತನ್ನ ಹೆಸರನ್ನ ಚಿಂಗಾರಿ ಅಂತ ಹೇಳಿಬಿಟ್ಟಿದ್ದಾಳೆ. ಹೀಗಾಗಿ ಚಿಂಗಾರಿ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಚಿಂಗಾರಿಯ ಹಿನ್ನಲೆ, ಚಿಂಗಾರಿ – ಕಾವೇರಿ ನಡುವಿನ ಲಿಂಕ್ ಬಟಾಬಯಲಾಗೋದು ಯಾವಾಗ ಅಂತ ಕೇಳ್ತಿದ್ದಾರೆ ವೀಕ್ಷಕರು.. ಇದೀಗ ಸೀರಿಯಲ್ ನೋಡಿದ ವೀಕ್ಷಕರು ಮಾತ್ರಾ ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಇಲ್ಲಿ ಎಲ್ಲ ಕ್ಯಾರೆಕ್ಟರ್ಸ್ ಡಮ್ಮಿ.. ಕಾವೇರಿ ಒಬ್ಬಳೇ ನಾಯಕ ನಾಯಕಿ.. ಎಲ್ಲರ ಮುಂದೆ ಅವಳ ನಾಟಕ ನಡೆದ್ರೂ.. ಗೊತ್ತಾಗದೆ ಇರುವಷ್ಟು ಪೆದ್ದುಗಳು.. ಸಾಕಾಯಿತು ಈ ಧಾರಾವಾಹಿ ನೋಡಿ.. ಇದ್ರಲ್ಲಿ ಕಲಿಯುವುದು ಏನೂ ಇಲ್ಲ.. ಕಲಿಯೋದಾದ್ರೆ ಬರೀ ಕೆಟ್ಟತನ ಮಾತ್ರ ಕಲಿಬೇಕು.. ಚಿಕ್ಕಮಕ್ಕಳಿಗಂತೂ ಈ ಸೀರಿಯಲ್ ತೋರಿಸೋದು ತುಂಬಾ ಡೇಂಜರ್.. ಇನ್ನಾದ್ರೂ ಒಳ್ಳೆ ಸೀನ್ ತೋರಿಸಿ ಅಂತಾ ಕಾಮೆಂಟ್ ಮಾಡ್ತಿದ್ದಾರೆ ವೀಕ್ಷಕರು.. ಇನ್ನೂ ಕೆಲವರು ಟಿಆರ್‌ಪಿಗಾಗಿ ಸೀರಿಯಲ್ ಟೀಮ್ ಏನ್ ಬೇಕಾದ್ರೂ ಮಾಡುತ್ತೆ.. ಟಿಆರ್ ಪಿ ಚೆನ್ನಾಗಿ ಬಂದ್ರೆ, ಕಾವೇರಿ ಕೃತ್ಯವನ್ನ ಇನ್ನಷ್ಟು ಹೆಚ್ಚು ಮಾಡ್ತಾರೆ.. ಸಾಕ್ಷಿ ಕೊಟ್ಟು ಬೇಗ ಕಥೆ ಮುಗಿಸ್ರಪ್ಪ.. ಸತ್ಯ ತಿಳಿಸಿದ್ರೂ ನಂಬದ ಮುಠ್ಠಾಳರು.. ಒಂದಂತೂ ಕ್ಲಿಯರ್ ಆಗಿದೆ.. ಸೀರಿಯಲ್ ಮುಗಿಯದೆ ಕಾವೇರಿ ಸಿಕ್ಕಾಕೊಳಲ್ಲ.. ಬೆಟರ್ ಬೇಗ ಮುಗ್ಸಿ ಅಂತಾ ಸೀರಿಯಲ್ ಫ್ಯಾನ್ಸ್ ಹೇಳ್ತಿದ್ದಾರೆ.