ಲಕ್ಷ್ಮೀಗೆ ವೈಷ್ಣವ್‌ ಡಿವೋರ್ಸ್?‌ – ವೈಷ್‌ ಲೈಫ್‌ ಗೆ ಎಂಟ್ರಿ ಕೊಟ್ಟವಳು ಯಾರು?
ಅಮ್ಮನ ಮಾತೇ ವೇದ ವಾಕ್ಯ ಆಯ್ತಾ?

ಲಕ್ಷ್ಮೀಗೆ ವೈಷ್ಣವ್‌ ಡಿವೋರ್ಸ್?‌ – ವೈಷ್‌ ಲೈಫ್‌ ಗೆ ಎಂಟ್ರಿ ಕೊಟ್ಟವಳು ಯಾರು?ಅಮ್ಮನ ಮಾತೇ ವೇದ ವಾಕ್ಯ ಆಯ್ತಾ?

ಕಾವೇರಿ ತಂತ್ರ ಕುತಂತ್ರ ನಿಲ್ಲೋತರ ಕಾಣ್ತಿಲ್ಲ.. ಇವಳ ಹುಚ್ಚಾಟಕ್ಕೆ ಬಲಿಯಾಗ್ತಿರೋದು ವೈಷ್ಣವ್,‌ ಲಕ್ಷ್ಮೀ ಜೀವನ.. ಹೌದು ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್‌ ನಲ್ಲಿ ಕಾವೇರಿ ಜೈಲಿನಿಂದ ಮನೆಗೆ ಬಂದಿದ್ದಾಳೆ.. ಮನೆಗೆ ಕಾಲಿಡ್ತಿದ್ದಂತೆ ಲಕ್ಷ್ಮೀ ವಿರುದ್ಧ ಸಮರ ಸಾರಿದ್ದಾಳೆ.. ವೈಷ್ಣವ್‌ನನ್ನ ಮಾತಲ್ಲೇ ಮರಳು ಮಾಡಿ ತನ್ನ ಪರ ಮಾಡಿಕೊಂಡಿದ್ದಾಳೆ.. ಬಳಿಕ ಲಕ್ಷ್ಮೀಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮನೆಯಿಂದ ಆಚೆ ಹಾಕಿದ್ದಾಳೆ.. ಹಾಗಾದ್ರೆ ವೈಷ್ಣವ್‌ ಲಕ್ಷ್ಮೀ ಮೇಲೆ ನಂಬಿಕೆ ಕಳೆದುಕೊಂಡನಾ? ಕಾವೇರಿ ಮಾತು ಕೇಳ್ಕೊಂಡು ಹೆಂಡ್ತಿಗೆ ಡಿವೋರ್ಸ್‌ ಕೊಡ್ತಾನಾ? ವೈಷ್ಣವ್‌ ಬಾಳಲ್ಲಿ ಬರ್ತಿರೋ ಹೊಸ ಹುಡುಗಿ ಯಾರು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಕೇಂದ್ರ ಬಜೆಟ್‌ 2025 – ಯಾವ ವಸ್ತುಗಳು ಅಗ್ಗ? ಯಾವುದು ದುಬಾರಿ?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ.. ಕಾವೇರಿ ಈಗ ಜೈಲಿನಿಂದ ಮನೆಗೆ ಬರ್ತಿದ್ದಂತೆ ತನ್ನ ಹಾವಳಿ ಶುರುಮಾಡ್ಕೊಂಡಿದ್ದಾಳೆ..  ತನ್ನ ಮಗನ ಭವಿಷ್ಯ ಹಾಳಾಗ್ತಿದ್ರೂ, ಸೊಸೆ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಇದೀಗ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕಿದ್ದಾಳೆ.. ಮನೆಯವರು ಎಷ್ಟು ಹೇಳಿದ್ರೂ ಯಾರ ಮಾತನ್ನು ಆಕೆ ಕೇಳ್ತಿಲ್ಲ.. ಆದ್ರೆ ಹೆಂಡ್ತಿ ಪರ  ನಿಲ್ಬೇಕಾಗಿದ್ದ ವೈಷ್ಣವ್‌ ಕೂಡ ಯಾಕೋ ಸೈಲೆಂಟ್‌ ಆಗಿ ನಿಂತು ನೋಡಿದ್ದಾನೆ.. ಲಕ್ಷ್ಮೀ ತನಗೆ ಇರೋ ವಿಷ್ಯ ಹೇಳಿಲ್ಲ.. ನಂಬಿಕೆ ದ್ರೋಹ ಮಾಡಿದ್ದಾಳೆ ಅಂತಾ ಆತ ಮುನಿಸಿಕೊಂಡಿದ್ದಾನೆ.. ಲಕ್ಷ್ಮೀಗೆ ಇದು ಆಗ್ಬೇಕಾಗಿರೋದೇ ಅಂತಾ ಹೇಳಿದ್ದಾನೆ.. ಮನೆಯಿಂದ ಹೊರಹಾಕುವಾಗಲೂ ಸುಮ್ಮೆ ನೋಡ್ಕೊಂಡು ನಿಂತಿದ್ದ.. ಇದೀಗ ಸಂಕಷ್ಟದಲ್ಲಿರೋ ಲಕ್ಷ್ಮೀಗೆ ಕೀರ್ತಿಯೇ ಆಸರೆ ಆಗಿದ್ದಾಳೆ..

ಕಾವೇರಿ ಲಕ್ಷ್ಮೀಯನ್ನ ಮನೆಯಿಂದ ಆಚೆ ಹಾಕ್ತಿದ್ದಂತೆ ಕೀರ್ತಿ ಲಕ್ಷ್ಮೀಗೆ ಬೆಂಬಲವಾಗಿ ನಿಂತಿದ್ದಾಳೆ. ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಯಾವಾಗ್ಲೂ ನಿನ್ನ ಜೊತೆಗೆ ಇರ್ತೀನಿ.. ನಿನ್ನ ಯಾವತ್ತೂ ಬಿಟ್ಟು ಹೋಗಲ್ಲ ಅಂತಾ ಲಕ್ಷ್ಮೀಯನ್ನ ಸಮಧಾನ ಮಾಡಿದ್ದಾಳೆ. ಈ ಎಲ್ಲಾ ಬೆಳವಣಿಗೆ ನೋಡಿ ವೈಷ್ಣವ್‌ ಅಮ್ಮನ ಮಾತು ಕೇಳಿ ಲಕ್ಷ್ಮೀಗೆ ಡಿವೋರ್ಸ್‌ ಕೊಡೋದು ಫಿಕ್ಸ್‌ ಅಂತಾ ವೀಕ್ಷಕರು ಹೇಳ್ತಿದ್ದಾರೆ. ಇನ್ನು ವೈಷ್ಣವ್‌ ಮರು ಮದುವೆ ಮಾಡಿಕೊಳ್ಳೋ ಬಗ್ಗೆ ಈಗಾಗಲೇ ವಾಹಿನಿ ಪ್ರೋಮೋ ರಿಲೀಸ್‌ ಆಗಿದೆ. ಆದ್ರೆ ವೈಷ್ಣವ್‌ ಯಾರನ್ನ ಮದುವೆ ಆಗ್ತಿದ್ದಾನೆ.. ವೈಷ್ಣವ್‌ ಬಾಳಲ್ಲಿ ಎಂಟ್ರಿಕೊಟ್ಟ ಹುಡುಗಿ ಯಾರು ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.. ಇದೀಗ ವೀಕ್ಷಕರು ವೈಷ್ಣವ್‌ ನ ಮದುವೆಯಾಗಲು ಮುಂದಾಗಿರೋದು ಯಾರು ಅನ್ನೋದನ್ನ ಪತ್ತೆ ಹಚ್ಚಿದ್ದಾರೆ.

ವೈಷ್ಣವ್‌ ಎಂಗೇಜ್‌ ಮೆಂಟ್‌ ಪ್ರೋಮೋವನ್ನ ಇತ್ತೀಚೆಗೆ ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡಿತ್ತು.. ಇದನ್ನ ನೋಡಿ ವೀಕ್ಷಕರು ಶಾಕ್‌ ಆಗಿದ್ರು.. ಕಾವೇರಿ ಕುತಂತ್ರದಿಂದ ವೈಷ್‌ ಇನ್ನೆಷ್ಟು ಅನುಭವಿಸ್ಬೇಕು.. ಕಾವೇರಿಗೆ ಮಗನ ಲೈಫ್‌ ಗಿಂತ ಸೇಡು ಹೆಚ್ಚಾಯ್ತಾ ಅಂತಾ ಕೇಳಿದ್ರು.. ಅಷ್ಟೇ ಅಲ್ಲ ವೈಷ್ಣವ್‌ ಕೀರ್ತಿ, ಲಕ್ಷ್ಮೀನ ಬಿಟ್ಟು ಮದುವೆ ಆಗ್ತಿರೋದು ಯಾರನ್ನ ಅನ್ನೋ ಕ್ಯೂರಿಯಾಸಿಟಿ ಕಾಡ್ತಿತ್ತು. ಇದೀಗ ವೈಷ್ಣವ್‌ ಮದುವೆ ಆಗ್ತಿರೋದು ಅನನ್ಯಳನ್ನ ಆಗಿರ್ಬೋದು ಅಂತಾ ಊಹೆ ಮಾಡಿದ್ದಾರೆ.

ಹೌದು.. ಲಕ್ಷ್ಮೀಗೆ ತಲೆ ಕೆಟ್ಟಿದೆ ಅಂತಾ ಕಾವೇರಿ ರಿಟ್ರೀಟ್‌ ಸೆಂಟರ್‌ಗೆ ಸೇರಿಸಿದ್ಲು.. ಈ ವೇಳೆ ವೈಷ್ಣವ್‌ ಮ್ಯೂಸಿಕ್‌ ಕತೆ ಗಮನ ಕೊಟ್ಟಿಲ್ಲ.. ಸಿಕ್ಕಿರೋ ಚಾನ್ಸ್‌ ಅನ್ನ ಬಿಟ್ಟುಕೊಟ್ಟಿದ್ದ.. ಇದ್ರಿಂದಾಗಿ ಮ್ಯೂಸಿಕ್‌ ಅಸೋಸಿಯೇಷನ್ ಅವರು ವೈಷ್ಣವ್‌ ಮೇಲೆ ನಿಷೇಧ ಹೇರಿದರು. ಇದ್ರ ಬಗ್ಗೆ ವಿಚಾರಿಸೋಕೆ ಹೋದಾಗ ವೈಷ್ಣವ್‌ ಅನನ್ಯಾ ಮಿಸ್‌ ವಿಹೇವ್‌ ಮಾಡಿದ್ಲು.. ಲಕ್ಷ್ಮೀ ವೈಷ್ಣವ್‌ ಅನ್ನ ದೂರ ಮಾಡ್ಲಿಕ್ಕೆ ಟ್ರೈ ಮಾಡಿದ್ಲು.. ಹೀಗಾಗಿ ವೈಷ್ಣವ್‌ ನ ಮದುವೆ ಆಗ್ತಿರೋದು ಅನನ್ಯ ಆಗಿರ್ಬೋದು ಅಂತಾ ವೀಕ್ಷಕರು ಊಹೆ ಮಾಡಿದ್ದಾರೆ..

Shwetha M

Leave a Reply

Your email address will not be published. Required fields are marked *