ಲಕ್ಷ್ಮೀ ಹನಿಮೂನ್ ಗೆ ಕೀರ್ತಿ ಅಡ್ಡಿ – ವೈಷ್ ನ ಇನ್ನೂ ಲವ್ ಮಾಡ್ತಿದ್ದಾಳಾ?
ಕೀರ್ತಿ ಸಂಚಿಗೆ ಬಲಿಯಾದ್ಲಾ ಲಚ್ಚಿ?
ಕೀರ್ತಿಗೆ ಹಿಂದಿನದ್ದೆಲ್ಲಾ ಮರೆತು ಹೋಗಿದೆ ಅಂತಾ ಲಕ್ಷ್ಮೀ ಆಕೆಯ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಾ ಬಂದಿದ್ದಾಳೆ. ಮೂರ್ಹೊತ್ತು ಆಕೆಯದ್ದೇ ಜಪ ಮಾಡ್ತಿದ್ದಾಳೆ. ಇದೀಗ ಲಕ್ಷ್ಮೀ ಜೀವನಕ್ಕೆ ಕೀರ್ತಿಯೇ ವಿಲನ್ ಆಗಿದ್ದಾಳೆ.. ಇದೀಗ ಕೀರ್ತಿ ಲಕ್ಷ್ಮೀ, ವೈಷ್ಣವ್ ಹನಿಮೂನ್ ಗೂ ಅಡ್ಡಿ ಆಗಿದ್ದಾಳೆ.. ಹಾಗಾದ್ರೆ ಕೀರ್ತಿಗೆ ಹಿಂದಿನದ್ದೆಲ್ಲಾ ಮರೆತು ಹೋಗಿಲ್ವಾ? ವೈಷ್ಣವ್ ನ ಇನ್ನೂ ಲವ್ ಮಾಡ್ತಿದ್ದಾಳಾ? ಲಕ್ಷ್ಮೀ ವೈಷ್ಣವ್ ನ ದೂರ ಮಾಡೋದೇ ಆಕೆಯ ಉದ್ದೇಶನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: BBK 11ರ ವಿನ್ನರ್ ಅನೌನ್ಸ್! – ರನ್ನರ್ ವಿಕ್ಕಿ.. ವಿನ್ನರ್ ಯಾರು?
ಲಕ್ಷ್ಮೀ ಬಾರಮ್ಮ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕೀರ್ತಿಗೆ ಎಲ್ಲವೂ ಮರೆತು ಹೋಗಿದೆ ಅಂತಾ ಲಕ್ಷ್ಮೀ ಆಕೆಯನ್ನ ಮಗುವಿನ ಹಾಗೇ ನೋಡಿಕೊಳ್ತಿದ್ದಾಳೆ.. ಮನೆಯಲ್ಲಿದ್ರೂ, ದೇವಸ್ಥಾನಕ್ಕೆ ಹೋದ್ರೂ ಲಕ್ಷ್ಮೀಗೆ ಕೀರ್ತಿಯದ್ದೇ ಚಿಂತೆ. ಆದ್ರೆ ಕೀರ್ತಿ ಮಾತ್ರ ವೈಷ್ಣವ್ ನ ಜಪದಲ್ಲೇ ಕಾಲ ಕಳಿತಾ ಇದ್ದಾಳೆ. ಇದೀಗ ಕೀರ್ತಿ ವರ್ತನೆ ನೋಡಿ ಎಲ್ಲರಿಗೂ ಅನುಮಾನ ಕಾಡೋದಿಕ್ಕೆ ಶುರುವಾಗಿದೆ. ಕೀರ್ತಿಗೆ ನಿಜವಾಗ್ಲೂ ಎಲ್ಲವೂ ಮರೆತು ಹೋಗಿದ್ಯಾ? ಆಥವಾ ಎಲ್ಲರ ಮುಂದೆ ಡ್ರಾಮಾ ಮಾಡ್ತಿದ್ದಾಳಾ ಅಂತಾ ಎಲ್ಲರನ್ನೂ ಕಾಡ್ತಿದೆ.
ಹೌದು ಕೀರ್ತಿ ಒಬ್ಬಳೇ ಇದ್ದಾಗ ವೈಷ್ಣವ್ ಫೋಟೋ ಹಿಡಿದುಕೊಂಡು ಓಡ್ತಾ.. ಅವನ ಬಗ್ಗೆ ಮಾತನಾಡ್ತಾ ಇರ್ತಾಳೆ.. ವೈಷ್ ಜೊತೆ ಹೇಗೆ ಮಾತಾಡ್ಲಿ ಅಂತಾ ಚಡಪಡಿಸ್ತಾ ಇರ್ತಾಳೆ.. ಆದ್ರೆ ಲಕ್ಷ್ಮೀ ಮುಂದೆ ಮಾತ್ರ ಸಣ್ಣ ಮಗುವಿನ ರೀತಿ ವರ್ತಿಸ್ತಾಳೆ.. ಇನ್ನು ಕಾವೇರಿ ವಾಯ್ಸ್ ಹೇಳಿದ್ರೆ ಕೊಲೆಗಾರ್ತಿ ಕೊಲೆಗಾರ್ತಿ ಅಂತಾ ಜೋರಾಗಿ ಕಿರುಚುತ್ತಾಳೆ.. ಅಷ್ಟೇ ಅಲ್ಲ ಆಕೆಯನ್ನ ಬೆಟ್ಟದಿಂದ ದೂಡಿ ಹಾಕಿದ್ದು ಆಕೆಗೆ ನೆನಪಿಗೆ ಬರುತ್ತೆ. ಇದನ್ನು ಸುಪ್ರಿತಾ ಗಮನಿಸಿದ್ದು, ಆಕೆ ಡ್ರಾಮಾ ಮಾಡ್ತಿದ್ದಾಳಾ ಅನ್ನೋ ಅನುಮಾನ ಈಗ ಕಾಡೋದಿಕ್ಕೆ ಶುರುವಾಗಿದೆ.
ಇನ್ನು ಲಕ್ಷ್ಮೀ ವೈಷ್ಣವ್ ಎಲ್ಲಿ ಹೋದ್ರೂ ಅಲ್ಲಿ ಕೀರ್ತಿ ಕಾಣಿಸಿಕೊಳ್ತಿದ್ದಾಳೆ.. ಹರಕೆ ತೀರಿಸ್ಬೇಕು ಅಂತಾ ಮನೆಯವರೊಂದಿಗೆ ಲಕ್ಷ್ಮೀ ಹಾಗೂ ವೈಷ್ಣವ್ ದೇವಸ್ಥಾನಕ್ಕೆ ಹೋಗಿದ್ರು.. ಎಲ್ಲವೂ ಸರಾಗವಾಗಿ ನಡಿತಾ ಇದೆ ಅಂದಾಗ ಕೀರ್ತಿ ಅಲ್ಲಿಗೆ ಬಂದು ಎಲ್ಲವೂ ಹಾಳು ಮಾಡಿದ್ಲು.. ಇದೀಗ ಲಕ್ಷ್ಮೀ ಮತ್ತೆ ವೈಷ್ಣವ್ ಹನಿಮೂನ್ ಗೆ ಹೋಗಿದ್ದಾರೆ.. ಲಕ್ಷ್ಮೀಗೆ ಸರ್‌ಪ್ರೈಸ್ ಕೊಡ್ಬೇಕು.. ತನ್ನ ಮನಸ್ಸಿನಲ್ಲಿರೋದನ್ನ ಹೇಳಿಕೊಳ್ಬೇಕು ಅಂತಾ ಕಾಯ್ತಿದ್ದಾಗಲೇ ಕೀರ್ತಿ ಅಲ್ಲಿ ಪ್ರತ್ಯಕ್ಷವಾಗಿದ್ದಾಳೆ.. ಸಖಿಯೇ ಸಖಿಯೇ ಹಾಡಿಗೆ ವೈಷ್ಣವ್ ಮುಂದೆ ಡ್ಯಾನ್ಸ್ ಮಾಡಿದ್ದಾಳೆ. ಇವಳನ್ನ ನೋಡಿದ ವೈಷ್ಣವ್ ಸಿಟ್ಟು ಮಾಡಿಕೊಂಡಿದ್ರೆ, ಲಕ್ಷ್ಮೀ ಶಾಕ್ ಆಗಿ ನಿಂತಿದ್ದಾಳೆ.. ಇದೀಗ ಕೀರ್ತಿ ಡ್ರಾಮಾ ಲಕ್ಷ್ಮೀ ಮುಂದೆ ಬಯಲಾಗುತ್ತಾ? ಲಕ್ಷ್ಮೀ ಮುಂದೇನು ಮಾಡ್ತಾಳೆ? ಕೀರ್ತಿಗೆ ಸರಿಯಾಗೇ ಪಾಠ ಕಲಿಸ್ತಾಳಾ ಅಂತಾ ಕಾದು ನೋಡ್ಬೇಕು.
ಇನ್ನು ಸೀರಿಯಲ್ ಪ್ರೋಮೋ ನೋಡಿದ ವೀಕ್ಷಕರು ಲಕ್ಷ್ಮೀ ಮೇಲೆ ಕೋಪಗೊಂಡಿದ್ದಾರೆ.. ಲಕ್ಷ್ಮೀಗೆ ಇದೆಲ್ಲಾ ಬೇಕಿತ್ತಾ? ಲಕ್ಷ್ಮೀ ದಡ್ಡಿ.. ಆಕೆಯೇ ಚಿನ್ನದಂತ ಗಂಡನನ್ನ ದೂರ ಮಾಡಿಕೊಳ್ತಿದ್ದಾಳೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು Very good ಕೀರ್ತಿ.. ಲಕ್ಷ್ಮಿ ಗೆ ಸರಿಯಾಗಿ ಹಳ್ಳ ತೋಡ್ತಾ ಇದೀಯ.. ಕಥೆ ಬರೆಯುವವರು ಎಂಥಾ ಬುದ್ಧಿವಂತರು ಅಲ್ವಾ? ಅಂತಾ ಹೇಳಿದ್ದಾರೆ. ಇನ್ನೂ ಕೆಲವರು, ಸತ್ತೋಗಿರೋ ಕೀರ್ತಿನ ಯಾಕಾದ್ರೂ ಬದುಕಿಸಿದ್ರೋ.. ಇವಳ ಹುಚ್ಚಾಟ ನೋಡೋದಿಕ್ಕೆ ಆಗಲ್ಲ.. ಅವತ್ತು ಕನ್ನಡತಿಯಲ್ಲಿ ವರೂಧಿನಿ. ಇವತ್ತು ಕೀರ್ತಿ! ನಾಳೆ ಇನ್ನೊಂದು ಧಾರಾಹಿಯಲ್ಲಿ ಕೀರ್ತಿವರು ಇದ್ದೇ ಇರ್ತಾರೆ ಅಂತಾ ಕಾಮೆಂಟ್ ಮಾಡಿದ್ದಾರೆ.