ಕೀರ್ತಿ ಡ್ರಾಮಾ.. ಲಕ್ಷ್ಮೀ ಬಕ್ರಾ! – ಕೀರ್ತಿ ಕೈಗೊಂಬೆ ಆಗಿದ್ಹೇಗೆ?
ವೈಷ್ಣವ್, ಮಹಾಲಕ್ಷ್ಮೀ ದೂರ?
ಲಕ್ಷ್ಮೀ ಬಾರಮ್ಮ ಸೀರಿಯಲ್ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಕೀರ್ತಿ ಲಕ್ಷ್ಮೀ ಕೈಗೊಂಬೆಯಾಗಿದ್ದಾಳೆ. ಅವಳು ಹೇಳಿದ ಹಾಗೇ ಮಾಡ್ತಿದ್ದಾಳೆ. ಆದ್ರೆ ಇತ್ತ ಕಾವೇರಿ ಜೈಲಿನಲ್ಲಿದ್ದುಕೊಂಡೇ ಕೀರ್ತಿಯನ್ನ ತನ್ನ ಕೈವಶ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾಳೆ. ಇತ್ತ ಕೀರ್ತಿ ವಿಚಿತ್ರ ವರ್ತನೆ ಮನೆಯವರಿಗೆ ತಲೆಕೆಡಿಸಿದೆ. ಇದೀಗ ವೈಷ್ಣವ್ ಕೀರ್ತಿ ಸತ್ಯ ತಿಳಿದುಕೊಳ್ಳಲು ಮುಂದಾಗಿದ್ದಾನೆ. ಆದ್ರೀಗ ವೈಷ್ಣವ್ ಗೆ ಕೀರ್ತಿ ಆಟ ಗೊತ್ತಾಗಿದ್ದು ಲಕ್ಷ್ಮೀಗೆ ಹೇಳಿದ್ದಾನೆ. ಹಾಗಾದ್ರೆ ಕೀರ್ತಿಗೆ ಏನು ಮರೆತು ಹೋಗಿಲ್ವಾ? ಲಕ್ಷ್ಮೀಯನ್ನ ಬಕ್ರಾ ಮಾಡ್ತಿದ್ದಾಳಾ ಕೀರ್ತಿ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಡಾ ಕೇಸ್ ಗೆ ಬಿಗ್ ಟ್ವಿಸ್ಟ್ – ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ಸದ್ದಿಲ್ಲದೇ ತನಿಖೆ ಮುಗಿಸಿದ ಸರ್ಕಾರ
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಲಕ್ಷ್ಮೀ, ವೈಷ್ಣವ್ ಮತ್ತು ಕೀರ್ತಿ ಮೂರೂ ಜನ ಈಗ ಮೊದಲಿನದ್ದೇ ಪರಿಸ್ಥಿತಿ ಎದುರಿಸುತ್ತಾ ಇದ್ದಾರೆ. ಕೀರ್ತಿ ಬಂದ ಮೇಲೆ ವೈಷ್ಣವ್ ಗೆ ಹುಚ್ಚು ಹಿಡಿದಂತೆ ಆಗಿದೆ. ಕೀರ್ತಿ ವಿಚಿತ್ರ ವರ್ತನೆ ನೋಡಿ ವೈಷ್ಣವ್ ಮಾತ್ರ ಅಲ್ಲ ಮನೆಯವರಿಗೂ ತಲೆ ಕೆಟ್ಟು ಹೋಗಿದೆ. ಒಂದ್ಕಡೆ ಲಕ್ಷ್ಮೀ ಕೀರ್ತಿಯನ್ನ ಕೂಡ ಹ್ಯಾಂಡಲ್ ಮಾಡ್ಬೇಕು.. ಮತ್ತೊಂದ್ಕಡೆ ಮನೆಯವರನ್ನ ಕೂಡ ಹ್ಯಾಂಡಲ್ ಮಾಡ್ಬೇಕು.. ಇದೀಗ ಕೀರ್ತಿ ಹೀಗಾಡ್ತಿರೋದು ಯಾಕೆ ಅಂತಾ ತಿಳ್ಕೊಳ್ಳಲು ವೈಷ್ಣವ್ ಆಕೆಯನ್ನ ಕಾರಿನಲ್ಲಿ ಕಡೆದುಕೊಂಡು ಹೋಗಿದ್ದಾನೆ.. ಸತ್ಯ ತಿಳಿದುಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಆದ್ರೆ ಲಕ್ಷ್ಮೀ ಅಲ್ಲಿಗೆ ಎಂಟ್ರಿಕೊಟ್ಟು ನಾನೇ ಸತ್ಯ ಹೇಳ್ತೀನಿ ಅಂತಾ ಲಕ್ಷ್ಮೀ ಹೇಳಿ, ವೈಷ್ಣವ್ ದಾರಿ ತಪ್ಪಿಸಿದ್ದಾಳೆ.
ಹೌದು, ಕೀರ್ತಿಯಿಂದ ಸತ್ಯ ತಿಳಿದುಕೊಳ್ಳಲು ಹೊರಟ ವೈಷ್ಣವ್ ಬಳಿ ತಾನೇ ಸತ್ಯ ಹೇಳ್ತೆನೆ ಅಂತ ಹೇಳಿದ್ದಾಳೆ. ಅದಾದೇಲೆ ಕೀರ್ತಿಯನ್ನ ಮನೆಗೆ ಕಳುಹಿಸಿದ್ದಾಳೆ. ಆಗ ಕೀರ್ತಿ ಡ್ರಾಮಾ ಮಾಡ್ತಿದ್ದಾಳೆ. ಆಕೆ ನಿಮ್ಮನ ಮಂಗ ಮಾಡ್ತಿದ್ದಾಳೆ ಅಂತಾ ವೈಷ್ಣವ್ ಹೇಳಿದ್ದಾನೆ. ಆತನ ಮಾತಿನಿಂದ ಲಕ್ಷ್ಮೀ ಶಾಕ್ ಆಗ್ತಾಳೆ.. ಬಳಿಕ ಇರೋ ವಿಷ್ಯ ಹೇಳೋದು ಬಿಟ್ಟು, ನೀವು ಕೀರ್ತಿ ಜೊತೆ ಓಡಾಡೋದು ನನ್ಗೆಇಷ್ಟ ಆಗಲ್ಲ ಅಂತಾ ಹೇಳಿದ್ದಾಳೆ. ಕೀರ್ತಿ ಹೇಗೆ ಅಂತಾ ನಿಮಗೂ ಗೊತ್ತು. ಆಕೆ ಜೊತೆ ಸುತ್ತಾಡೋದು ಏನ್ ಅರ್ಥ ಕೊಡುತ್ತೆ.. ಕೀರ್ತಿ ಜೊತೆ ಬರ್ಬಾದು.. ಹಿಂದೆ ಸುತ್ತಾಡ್ಬಾರ್ದು ಅಂತಾ ವೈಷ್ಣವ್ ಗೆ ವಾರ್ನಿಂಗ್ ಕೊಟ್ಟು ಅಲ್ಲಿಂದ ಹೊರಟಿದ್ದಾಳೆ.
ಇನ್ನೊಂದ್ಕಡೆ ಕಾವೇರಿ ಜೈಲಿನಲ್ಲಿದ್ದುಕೊಂಡೇ ಎಲ್ಲವನ್ನ ಕಂಟ್ರೋಲ್ ಗೆ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಕೀರ್ತಿ ವಿಚಿತ್ರವಾಗಿ ವರ್ತಿಸೋದನ್ನ ನೋಡಿ ಆಕೆಯನ್ನ ಟಾರ್ಗೆಟ್ ಮಾಡಿದ್ದಾಳೆ. ಆಕೆಯ ಮೇಲೆ ಕಣ್ಣಿಡಲು ಚಿಂಗಾರಿಯನ್ನ ಮುಂದಿಟ್ಟಿದ್ದಾಳೆ.. ಆಕೆ ಇಂಚಿಂಚು ಮಾಹಿತಿ ಕಲೆಕ್ಟ್ ಮಾಡಿ ಕಾವೇರಿಗೆ ತಲುಪಿಸ್ತಿದ್ದಾಳೆ..
ಇದೀಗ ವೀಕ್ಷಕರು ಸೀರಿಯಲ್ ನೋಡಿ ನಾನಾ ಕಾಮೆಂಟ್ ಮಾಡ್ತಿದ್ದಾರೆ. ವೈಷ್ಣವ್ ಮಾತು ನಿಜ. ಕೀರ್ತಿ ಲಕ್ಷ್ಮೀ ಮುಂದೆ ಡ್ರಾಮಾ ಮಾಡ್ತಿದ್ದಾಳೆ. ವೈಷ್ಣವ್ ನ ಪಡೆದುಕೊಳ್ಳಲು ಹೀಗೆ ಡ್ರಾಮಾ ಮಾಡ್ತಿದ್ದಾಳೆ ಎಂದು ಕಾಮೆಂಟ್ ಮಾಡ್ತಿದ್ದಾರೆ. ಲಕ್ಷ್ಮೀಯನ್ನ ಲಚ್ಚಿ ಲಚ್ಚಿ ಅಂತಾ ಕರಿತಾಳೆ.. ವೈಷ್ಣವ್ ಮನೆಗೆ ಬಂದು ಲಚ್ಚಿ ಜೊತೆಗೆ ಆಕೆಯ ರೂಮ್ ನಲ್ಲೇ ಇರ್ತೇನೆ ಅಂತಾ ಹೇಳ್ತಾಳೆ.. ವೈಷ್ಣವ್ ಬಳಿ ನನ್ನನ್ನ ಯಾಕೆ ರಿಜೆಕ್ಟ್ ಮಾಡಿದೆ ಅಂತಾ ಕೀರ್ತಿ ಕೇಳ್ತಾಳೆ.. ಇದನ್ನೆಲ್ಲಾ ನೋಡಿದ್ಮೇಲೆ ಕೀರ್ತಿ ಡ್ರಾಮಾ ಮಾಡ್ತಿದ್ದಾಳೆ.. ಈ ಮೂಲಕ ವೈಷ್ಣವ್ ನ ಲಕ್ಷ್ಮೀಯಿಂದ ದೂರ ಮಾಡೋಕೆ ನೋಡ್ತಿದ್ಧಾಳೆ.. ಲಕ್ಷ್ಮೀ ಕೈಗೊಂಬೆ ಕೀರ್ತಿ ಅಲ್ಲ.. ಕೀರ್ತಿ ಕೈಗೊಂಬೆ ಲಕ್ಷ್ಮೀ.. ಆಕೆಗೆ ಬೇಕಾದಂತೆ ಲಕ್ಷ್ಮೀಯನ್ನ ಆಟ ಆಡಿಸ್ತಿದ್ದಾಳೆ ಅನ್ನೋದು ಗೊತ್ತಾಗುತ್ತೆ ಅಂತಾ ಕಮೆಂಟ್ ಮಾಡಿದ್ದಾರೆ.