ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಸಿಗಲೇ ಇಲ್ಲ…! – ‘ಕೈ’ ಲೆಕ್ಕಾಚಾರಗಳೇನು ? ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ?

ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಸಿಗಲೇ ಇಲ್ಲ…! – ‘ಕೈ’ ಲೆಕ್ಕಾಚಾರಗಳೇನು ? ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ?

ಎರಡು ಕ್ಷೇತ್ರಗಳನ್ನು ಗೆದ್ದು ಆ ಶಾಸಕರನ್ನು ಹೆಗಲ ಮೇಲೆ ಕೂರಿಸಿಕೊಂಡು ವಿಧಾನಸೌಧಕ್ಕೆ ಬರುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದರು. ಅವರು ಹೇಳಿದಂತೆಯೇ ಅಥಣಿ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಗೆದ್ದಿದ್ದು ಮಾತ್ರವಲ್ಲದೆ ಕಾಗವಾಡ ಮತ್ತು ಕುಡಚಿ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ದೊಡ್ಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.. ಅಷ್ಟಾದರೂ ಲಕ್ಷ್ಮಣ ಸವದಿಗೆ ಮಾತ್ರ ಮಂತ್ರಿಗಿರಿ ಸಿಗಲೇ ಇಲ್ಲ.

ಇದನ್ನೂ ಓದಿ: ಕೈ ತಪ್ಪಿದ ಸಚಿವ ಸ್ಥಾನ: ‘ಮುಂದಿನ ದಿನದಲ್ಲಿ ಕಾದು ನೋಡಿ’ – ಕಾಂಗ್ರೆಸ್‌ಗೆ ಸಲೀಂ ಅಹಮ್ಮದ್ ವಾರ್ನಿಂಗ್!

ಲಕ್ಷ್ಮಣ ಸವದಿ ಈ ಬಾರಿಯ ವಿಧಾನಸಭೆ ಚುನಾವಣೆ ಘೋಷಣೆಯಾಗುವವರೆಗೂ ಬಿಜೆಪಿಯ ಅತ್ಯಂತ ಪ್ರಮುಖ ನಾಯಕರಾಗಿದ್ದರು. ಆದ್ರೆ ಅಥಣಿಯಲ್ಲಿ ವಿಧಾನಸಭಾ ಟಿಕೆಟ್‌ ಕೈತಪ್ಪುತ್ತಿದ್ದಂತೆ ಬಿಜೆಪಿಯೆಂಬ ಬಾಡಿಗೆ ಮನೆಯನ್ನು ತೊರೆಯಲು ತೀರ್ಮಾನಿಸಿದ್ದರು. ಕಾಂಗ್ರೆಸ್‌ನ ಕೈಹಿಡಿದು ಚುನಾವಣೆಗೆ ಸ್ಪರ್ಧಿಸಿದರು. ಜೊತೆಗೆ ಕಾಂಗ್ರೆಸ್‌ ಸೇರ್ಪಡೆ ವೇಳೆ, ತನ್ನ ಕ್ಷೇತ್ರದ ನೀರಾವರಿ ಯೋಜನೆಗಳು ಕಾರ್ಯಗತ ಆಗಬೇಕು ಎಂಬ ಮಾತು ಹೇಳುತ್ತಲೇ, ಗೆದ್ದರೆ ತನ್ನನ್ನು ಮಂತ್ರಿ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿಯೋ ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಸೇರಿಕೊಂಡಿದ್ದರು. ಅವರು ಹೇಳಿದ್ದಂತೆಯೇ ಅಥಣಿ ಕ್ಷೇತ್ರದಲ್ಲಿ ಗೆದ್ದಿದ್ದಲ್ಲದೆ, ಕಾಗವಾಡ ಮತ್ತು ಕುಡಚಿಯಲ್ಲೂ ಕಾಂಗ್ರೆಸ್‌ ಗೆದ್ದಿತ್ತು. ಇದಕ್ಕೆ ನೇರವಾಗಿ ಸವದಿಯವರೇ ಕಾರಣ ಎಂಬುದು ಸವದಿ ಬೆಂಬಲಿಗರ ವಾದವಾಗಿದ್ದರೆ, ಕಾಂಗ್ರೆಸ್‌ ಅದನ್ನು ಪೂರ್ತಿಯಾಗಿ ಒಪ್ಪಲೇಬೇಕು ಅಂತೇನೂ ಇಲ್ಲ.. ಹಾಗೆ ನೋಡಿದ್ರೆ ಹಿಂದೆ ಲಕ್ಷ್ಮಣ ಸವದಿಯವರನ್ನು ಬಿಜೆಪಿ ಸರ್ಕಾರ ಉಪಮುಖ್ಯಮಂತ್ರಿ ಮಾಡಿದಾಗ, ಬ್ಲೂಫಿಲಂ ವೀಕ್ಷಣೆಯ ಘಟನೆಯನ್ನು ಕೆದಕಿ, ಛೀ ಥೂ ಎನ್ನುತ್ತಾ ಕಾಂಗ್ರೆಸ್‌ನ ಮಹಿಳಾ ಘಟಕ ಪ್ರತಿಭಟನೆ ನಡೆಸಿತ್ತು.. ಬ್ಲೂ ಬಾಯ್‌ ಸವದಿಯವರನ್ನು ಮಂತ್ರಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿತ್ತು.. ಈಗ ಅದೇ ಕಾರಣಕ್ಕೆ ಸವದಿಯವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅನ್ನಲು ಸಾಧ್ಯವಿಲ್ಲ.. ಬ್ಲೂಫಿಲಂ ಎಪಿಸೋಡ್‌ನ ಹೊರತಾಗಿಯೂ ಲಕ್ಷ್ಮಣ ಸವದಿ ಓರ್ವ ಪ್ರಬಲ ನಾಯಕ.. ಲಿಂಗಾಯತರಲ್ಲಿ ಗಾಣಿಗ ಸಮುದಾಯದ ಪ್ರಮುಖ ನಾಯಕ.. ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಬೆಳಗಾವಿ ಮಾತ್ರವಲ್ಲದೆ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೆಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ.. ಲಕ್ಷ್ಮಣ ಸವದಿಯವರಿಗೆ ಮಂತ್ರಿ ಸ್ಥಾನ ಕೊಟ್ಟಿರುತ್ತಿದ್ದರೆ, ಸಹಜವಾಗಿಯೇ ಕಾಂಗ್ರೆಸ್‌ಗೂ ಹೆಚ್ಚಿನ ಅನುಕೂಲ ಆಗುವ ಸಾಧ್ಯತೆಯಿತ್ತು. ಆದರೆ ಮೊನ್ನೆಯಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿರುವವರಿಗೆ ಒಮ್ಮೆ ಗೆದ್ದ ಕೂಡಲೇ ಮಂತ್ರಿಸ್ಥಾನ ಕೊಟ್ಟರೆ ಮೂಲ ಕಾಂಗ್ರೆಸ್‌ ನಾಯಕರು ಏನ್‌ ಮಾಡ್ಬೇಕು ಎಂಬ ಪ್ರಶ್ನೆಯೂ ಉದ್ಭವ ಆಗಿಯೋ ಆಗುತ್ತೆ.. ಅದರಲ್ಲೂ ಬೆಳಗಾವಿ ಜಿಲ್ಲೆಯವರೇ ಆದ ಪ್ರಕಾಶ್‌ ಹುಕ್ಕೇರಿಯವರಿಗೆ ಮಂತ್ರಿಗಿರಿ ಕೊಟ್ಟಿಲ್ಲ.. ಅವರ ಮಗ ಗಣೇಶ್‌ ಹುಕ್ಕೇರಿ ಕೂಡ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.. ಅದಲ್ಲದೆ, ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮಂತ್ರಿಗಿರಿ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಕೂಡ ಲಕ್ಷ್ಮಣ ಸವದಿಯವರಿಗೆ ಮಂತ್ರಿಸ್ಥಾನ ತಪ್ಪಲು ಪ್ರಮುಖ ಕಾರಣಗಳಲ್ಲಿ ಒಂದು..

suddiyaana