ಬಗೆದಷ್ಟು ಬಯಲಾಗ್ತಿದೆ ಲಕ್ಕುಂಡಿ ರಹಸ್ಯ! – ಚಿನ್ನ, ಶಿವಲಿಂಗ ಆಯ್ತು.. ಈಗ ಮತ್ತೊಂದು ವಿಶೇಷ ವಸ್ತು ಪತ್ತೆ!

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ನಿಧಿ ಹಾಗೂ ಪುರಾತನ ವಸ್ತುಗಳು ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆ ಗ್ರಾಮದಲ್ಲಿ ಉತ್ಖನನ ನಡೆಸಲು ಆದೇಶಿಸಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ (ಎಲ್ಡಿಎ) ಉತ್ಖನನ ಕಾರ್ಯ ನಡೆಸುತ್ತಿದೆ. ಈ ವೇಳೆ ಹಲವು ಪುರಾತನ ವಸ್ತುಗಳು ಲಭಿಸಿದೆ.
ಇದನ್ನೂ ಓದಿ: ಶಾಲೆಗೆ ಬಿಡಲು ಹೋಗುತ್ತಿದ್ದಾಗ ಕಾಲೇಜು ಬಸ್ ಡಿಕ್ಕಿ! – ಅಮ್ಮ, ಮಗ ದುರಂತ ಅಂತ್ಯ!
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ನಾಲ್ಕನೇ ದಿನವೂ ಉತ್ಖನನ ಕಾರ್ಯ ಮುಂದುವರಿದಿದೆ. ರಾಜ್ಯ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾರ್ಯ ನಡೆಯುತ್ತಿದೆ. ನಿನ್ನೆ ಉಖ್ಖನನ ವೇಳೆ ಶಿವಲಿಂಗ ಪತ್ತೆಯಾಗಿತ್ತು, ಇಂದು ಹಿತ್ತಾಳೆ ಗಂಟೆ ಪತ್ತೆಯಾಗಿದೆ. ಪ್ರಾಚೀನ ಕಾಲದ ಹಿತ್ತಾಳೆ ಗಂಟೆ ಇದಾಗಿದ್ದು, ದೇಗುಲದ ಜಾಗವು ರಹಸ್ಯಗಳನ್ನ ಹೊದ್ದು ನಿಂತಂತೆ ಕಾಣ್ತಿದೆ.
ವೀರಭದ್ರೇಶ್ವರ ದೇವಸ್ಥಾನದ ಆವರಣದ 10/10 ಅಡಿಯ ಸುತ್ತಳತೆಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ನಿನ್ನೆವರೆಗೂ ಸುಮಾರು 3 ಅಡಿ ಆಳದವರೆಗೆ ಮಣ್ಣನ್ನು ಕಾರ್ಮಿಕರು ಅಗೆದಿದ್ದಾರೆ. ಇನ್ನೂ ಸುಮಾರು 7-8 ಅಡಿ ಆಳ ಅಗೆದರೆ ಏನಾದರೂ ಅವಶೇಷಗಳು, ಚಿನ್ನದ ನಿಧಿ ಸಿಗಬಹುದು ಎಂಬ ನಿರೀಕ್ಷೆಗಳು ಇದೆ. ಕಾಳಿಂಗ ಸರ್ಪ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಸ್ಥಳೀಯರು, ಕಾರ್ಮಿಕರು ಭಯಭೀತರಾಗಿದ್ದಾರೆ.
ಏನೆಲ್ಲ ಪತ್ತೆ ಆಗಿದೆ?
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉಖ್ಖನನ ವೇಳೆ ಶಿವಲಿಂಗ ಆಕಾರದ ಐತಿಹಾಸಿಕ ಕಲ್ಲು, ಕೆಲವು ಮಡಿಕೆ ಚೂರುಗಳು ಪತ್ತೆಯಾಗಿವೆ. ಇನ್ನು ಲೋಹದ ಚಿಕ್ಕ ಶಿವಲಿಂಗ, ಕಲ್ಲಿನಲ್ಲಿ ಕೆತ್ತಿದ ಹೆಡೆ ಎತ್ತಿದ್ದ ನಾಗರಹಾವಿನ ಚಿತ್ರವಿರು ಕಲ್ಲು, ಹಲವು ಕಲ್ಲಿನ ಅವಶೇಷಗಳು ಪತ್ತೆಯಾಗಿವೆ. ಇಂದು ಹಿತ್ತಾಳೆ ಗಂಟೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೋಡಿರಿ

