ಲಕ್ಕುಂಡಿಯಲ್ಲಿ ನಿಧಿ ಹುಡುಕಾಟ ಆರಂಭ – ನಿಧಿ ಸಿಕ್ಕರೆ ಸಂಪೂರ್ಣ ಗ್ರಾಮವೇ ಸ್ಥಳಾಂತರ?

ಲಕ್ಕುಂಡಿಯಲ್ಲಿ ನಿಧಿ ಹುಡುಕಾಟ ಆರಂಭ – ನಿಧಿ ಸಿಕ್ಕರೆ ಸಂಪೂರ್ಣ ಗ್ರಾಮವೇ ಸ್ಥಳಾಂತರ?

ಲಕ್ಕುಂಡಿಯ ನಿಧಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ತಿದೆ. ಇದೀಗ ರಾಜ್ಯ ಸರ್ಕಾರ ನಿಧಿ ಹುಡುಕಾಟ ಶುರುಮಾಡಿದೆ. ಆದ್ರೀಗ ಅಲ್ಲಿನ ಜನರಿಗೆ ಇಡೀ ಗ್ರಾಮವನ್ನೇ ತೊರೆಯುವ ಭೀತಿ ಶುರುವಾಗಿದೆ.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲೇ ನಡೆಯುತ್ತೆ 2026ರ ಐಪಿಎಲ್ ಪಂದ್ಯಗಳು – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಫ್ರಾಂಚೈಸಿ

ಲಕ್ಕುಂಡಿಯಲ್ಲಿ ಜನವರಿ 10ರಂದು ನಿಧಿ ಪತ್ತೆಯಾಗಿತ್ತು. ತಾಮ್ರದ ಪಾತ್ರೆಯಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. ಈ ಆಭರಣಗಳು 300 ರಿಂದ 400 ವರ್ಷಗಳಷ್ಟು ಹಳೆಯವು ಎಂದು ಹೇಳಲಾಗಿದೆ. ಇದೀಗ ರಾಜ್ಯ ಸರ್ಕಾರವು ಶುಕ್ರವಾರದಿಂದ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಿದೆ. ಉತ್ಖನನ ವೇಳೆ ಗ್ರಾಮದಲ್ಲಿ ನಿಧಿ ಸಿಕ್ಕರೆ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಇದೀಗ ಅಲ್ಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಪೂರ್ಣ ಪ್ರಮಾಣದ ಉತ್ಖನನವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಲಕ್ಕುಂಡಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ದೇವಾಲಯದ ಆವರಣದಲ್ಲಿ ಉತ್ಖನನ ನಡೆಸಲು ಜೆಸಿಬಿಗಳು, ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ತರಿಸಲಾಗಿದೆ. ಉತ್ಖನನಕ್ಕಾಗಿ 10 ಮೀಟರ್ x 10 ಮೀಟರ್ ಪ್ರದೇಶವನ್ನು ಗುರುತಿಸಲಾಗಿದೆ. ಈ ಕೆಲಸಕ್ಕಾಗಿ ನಾವು 15 ಮಹಿಳೆಯರು ಮತ್ತು ಐದು ಪುರುಷರನ್ನು ನೇಮಿಸಿಕೊಳ್ಳಲಾಗಿದೆ.

ಲಕ್ಕುಂಡಿ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಲಕ್ಕುಂಡಿಯಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲ್ಚೂರಿಗಳು ಮತ್ತು ವಿಜಯನಗರ ರಾಜರು ಆಳಿದ್ದರು. ಲಕ್ಕುಂಡಿ ಪ್ರಸಿದ್ಧ ಲೋಕೋಪಕಾರಿ ದಾನಚಿಂತಾಮಣಿ ಅತ್ತಿಮಬ್ಬೆಯೊಂದಿಗೆ ಸಂಬಂಧ ಹೊಂದಿದೆ. ಪ್ರಾಚೀನ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಟಂಕಿಸಲಾಗುತ್ತಿದ್ದ ಸ್ಥಳ ಇದಾಗಿತ್ತು ಎಂದು ಪುರಾತತ್ವ ಇಲಾಖೆಯ ಮೂಲಗಳು ತಿಳಿಸಿವೆ.

Shwetha M