ಅಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ! – ದೇಗುಲದ ಆವರಣದಲ್ಲೇ ಮೂಳೆಗಳು ಪತ್ತೆ!

ಅಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ! – ದೇಗುಲದ ಆವರಣದಲ್ಲೇ ಮೂಳೆಗಳು ಪತ್ತೆ!

ಲಕ್ಕುಂಡಿ ನಿಧಿ ಹುಡುಕಾಟ ಜೋರಾಗಿ ನಡೆಯುತ್ತಿದೆ. ಗ್ರಾಮದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದ್ದು ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ತಿದೆ. ಇದೀಗ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಬದಲು ಮೂಳೆಗಳು ಪತ್ತೆಯಾಗಿವೆ.

ಇದನ್ನೂ ಓದಿ: ಗಿಲ್ಲಿ ಗೆದ್ದ ಎಂದು ಉರಿದುಕೊಳ್ಳಬಾರದು! – ನಾನೇ ಗೆಲ್ಲಬೇಕಿತ್ತು ಎಂದ ಅಶ್ವಿನಿಗೆ ರಘು ಟಾಂಗ್!‌

ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಆರನೇಯ ‌ದಿನಕ್ಕೆ ಕಾಲಿಟ್ಟಿದೆ. ಇದೀಗ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿ ಸುಮಾರು 35 ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ಇದೀಗ, ಉತ್ಖನನದ ವೇಳೆ ನಿಧಿ ಬದಲಿಗೆ ಮೂಳೆ ತುಂಡುಗಳು ಸಿಕ್ಕಿವೆ. ಮೂಳೆಗಳನ್ನ ಕಂಡು ಗ್ರಾಮಸ್ಥರು ಶಾಕ್ ಅಗಿದ್ದಾರೆ.

ಇಷ್ಟು ದಿನ ದೇಗುಲದ ಆವರಣದಲ್ಲಿ ಪ್ರಾಚೀನ ಕಾಲದ ವಸ್ತುಗಳು, ದೇವರ ಮೂರ್ತಿಗಳು ಪತ್ತೆಯಾಗಿದ್ದವು. ಇದೀಗ ದೇವಸ್ಥಾನದ ಆವರಣದಲ್ಲೇ ಮೂಳೆ ಚೂರುಗಳು ಪತ್ತೆಯಾಗಿದೆ. ಅಧಿಕಾರಿಗಳು ಮೂಳೆಗಳನ್ನ ಸಂಗ್ರಹಿಸುತ್ತಿದ್ದಾರೆ. ಈ ಮೂಳೆಗಳು ಪ್ರಾಣಿಗಳದ್ದಾ ಅಥವಾ ಮನುಷ್ಯರದ್ದ ಎನ್ನುವ ಮಾಹಿತಿ ಸಿಕ್ಕಿಲ್ಲ. ಪರೀಕ್ಷೆಗಳ ನಂತರ ಸ್ಪಷ್ಟನೆ ಸಿಗಲಿದೆ. ಆದ್ರೆ ದೇಗುಲದ ಆವರಣದಲ್ಲಿ ಮೂಳೆ ಪತ್ತೆಯಾಗಿರುವುದು ಹಲವು ಅನುಮಾನಗಳಿಗೂ ಕಾರಣವಾಗ್ತಿದೆ.

Shwetha M