ದಂಡ ಹಾಕಿದ್ದೂ ಸಾರ್ಥಕ ಆಯ್ತು – ಕೆಎಸ್ಆರ್‌ಟಿಸಿಗೆ ಹರಿದು ಬಂತು ಲಕ್ಷ ಲಕ್ಷ ಆದಾಯ..!

ದಂಡ ಹಾಕಿದ್ದೂ ಸಾರ್ಥಕ ಆಯ್ತು – ಕೆಎಸ್ಆರ್‌ಟಿಸಿಗೆ ಹರಿದು ಬಂತು ಲಕ್ಷ ಲಕ್ಷ ಆದಾಯ..!

ಬಸ್‌ ಇಳಿದ ಮೇಲೆ ಉಗಿಯುವುದು, ಬಸ್ ಹತ್ತುವಾಗ ಒಮ್ಮೆ ಕೆಳಗಿಳಿದು ಪಿಚಕ್ ಅಂತಾ ಉಗಿಯುವುದು, ಇದ್ರ ಮಧ್ಯೆ ಬಸ್‌ಸ್ಟ್ಯಾಂಡ್ ಅಂತಾನೂ ನೋಡದೇ ಧಮ್ ಹೊಡೆಯೋದು, ಇನ್ನು ಕೆಲವರು ನೋಡಬೇಕು. ಜಾಗ ಸಿಕ್ಕಿದ್ರೆ ಸಾಕು ಯಾರಿದ್ದಾರೆ ಇಲ್ಲ ಅಂತಾನೂ ನೋಡಲ್ಲ. ಮೂತ್ರ ವಿಸರ್ಜನೆ ಮಾಡಿಯೇ ಬಿಡ್ತಾರೆ. ಇಂಥವರನ್ನು ನೋಡಿ ಸಾಕಾದ ಸಾರಿಗೆ ಇಲಾಖೆ ಇದಕ್ಕೆಲ್ಲಾ ಕಡಿವಾಣ ಹಾಕಿದೆ. ಕೆಎಸ್ಆರ್​ಟಿಸಿ ಬಸ್ ನಿಲ್ದಾಣ, ಘಟಕ, ವಿಭಾಗೀಯ ಕಛೇರಿಗಳಲ್ಲಿ ಧೂಮಪಾನ, ಬಯಲು ಮೂತ್ರ ವಿಸರ್ಜನೆ, ಉಗುಳುವಿಕೆಯನ್ನು ಇಲಾಖೆ ನಿಷೇಧಿಸಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೇ ದಂಡ ಕಟ್ಟಬೇಕಾಗುತ್ತದೆ. ಹೀಗೆ ದಂಡದ ಮೂಲಕ ಕೆಎಸ್​ಆರ್​ಟಿಸಿಗೆ ಲಕ್ಷ ಲಕ್ಷ ರೂಪಾಯಿ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಬಸ್ ನಲ್ಲೇ ನಗರಾಭಿವೃದ್ಧಿ ಸಚಿವರ ಸಿಟಿ ರೌಂಡ್ಸ್  -ಮಳೆಹಾನಿ ತಡೆಗೆ ಸೂಚನೆ, ರಾಜಕಾಲುವೆ ಒತ್ತುವರಿ ತೆರವಿಗೆ ವಾರ್ನಿಂಗ್!

2022-23ನೇ ಸಾಲಿನಲ್ಲಿ ನಿಯಮ ಉಲ್ಲಂಘಿಸಿದವರಿಂದ ಒಟ್ಟು 53 ಲಕ್ಷದ 89 ಸಾವಿರದ 100 ರೂ. ದಂಡ ವಸೂಲಿ ಮಾಡಲಾಗಿದೆ. ದೂಮಪಾನ ಮಾಡಬಾರದು ಎಂಬ ನಿಯಮ ಉಲ್ಲಂಘಿಸಿದ ಒಬ್ಬ ವ್ಯಕ್ತಿಗೆ 200 ರೂ. ದಂಡ ವಿಧಿಸಲಾಗಿದ್ದು ಒಟ್ಟು 29,51,200 ರೂಪಾಯಿ ದಂಡ ವಸೂಲಿ ಮಾಡಿಕೊಳ್ಳಲಾಗಿದೆ. ಬಯಲು ಮೂತ್ರ ವಿಸರ್ಜನೆ ಮಾಡಬಾರದು ನಿಯಮ ಉಲ್ಲಂಘಿಸಿದ ಒಬ್ಬ ವ್ಯಕ್ತಿಗೆ 100 ರೂ. ದಂಡ ವಿಧಿಸಲಾಗಿದ್ದು ಒಟ್ಟು 17,12,800 ರೂ. ದಂಡ ವಸೂಲಿಯಾಗಿದೆ. ಉಗುಳುವಿಕೆ ನಿಷೇಧ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ 100 ರೂ. ದಂಡ ವಿಧಿಸಲಾಗಿದ್ದು ಒಟ್ಟು 7,25,100 ರೂ. ದಂಡ ವಸೂಲಿ ಮಾಡಲಾಗಿದೆ.

suddiyaana