ಸರಿಗಮಪದಲ್ಲಿ ಲಹರಿಗೆ ಮೋಸ? – ಬೆಳಗುಂದಿ ಫೈನಲಿಸ್ಟ್ ಸ್ಪರ್ಧಿನಾ?
ಶೋನಲ್ಲಿ ನಡಿತಾ ಫಿಕ್ಸಿಂಗ್?

ಸರಿಗಮಪ ಸೀಸನ್ 21 ಈಗ ಅಂತಿಮ ಹಂತಕ್ಕೆ ಬಂದಿದೆ. ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ. ಕಳೆದ ಎಪಿಸೋಡ್‌ನಲ್ಲಿ ಆರು ಮಂದಿ ಫೈನಲಿಸ್ಟ್‌ಗಳನ್ನ ಆಯ್ಕೆ ಮಾಡಲಾಗಿದೆ. ಆದ್ರೀಗ ಶೋ ತೀರ್ಪಿನ ಬಗ್ಗೆ ಅಪಸ್ವರವೊಂದು ಕೇಳಿ ಬಂದಿದೆ. ಚೆನ್ನಾಗಿ ಹಾಡುವವರನ್ನ ಫೈನಲ್ ಗೆ ಸೆಲೆಕ್ಟ್ ಮಾಡಿಲ್ಲ.. ನೇಮ್ ಫೇಮ್ ಇರೋರನ್ನ ಫೈನಲ್‌ಗೆ ಸೆಲೆಕ್ಟ್ ಮಾಡಲಾಗಿದೆ. ಲಹರಿ ಮಹೇಶ್ ಮೋಸ ಆಗಿದೆ ಎಂದು ವೀಕ್ಷಕರು ಸಿಟ್ಟಾಗಿದ್ದಾರೆ.
ಇದನ್ನೂ ಓದಿ: IPLನಲ್ಲಿ RCB ಇತಿಹಾಸ ಸೃಷ್ಟಿ RCB ಪಕ್ಕಕ್ಕೂ ನಿಲ್ಲದ ಉಳಿದ ಟೀಂ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಕೂಡ ಒಂದು. 2006 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಈ ಶೋನಿಂದ ಸಾಕಷ್ಟು ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಈ ವೇದಿಕೆ ಮೂಲಕವೇ ಕನ್ನಡ ಸಿನಿಮಾರಂಗಕ್ಕೆ ಅದ್ಭುತ ಗಾಯಕರ ಪರಿಚಯ ಆಗಿದ್ದಾರೆ. ಸರಿಗಮಪ ಸೀಸನ್ 21 ರಲ್ಲೂ 6 ವರ್ಷ ದಿಂದ 60 ವರ್ಷದ ವರೆಗೆ ಅವಕಾಶ ನೀಡಲಾಗಿದೆ. ಇದೀಗ ಸೀಸನ್ 21 ಅಂತಿಮ ಹಂತ ತಲುಪಿದೆ. ಕಾರ್ಯಕ್ರಮದಲ್ಲಿ ಇದೀಗ ಫೈನಲ್ ಗೆ ಇನ್ನು ಒಂದೇ ಹಂತ ಬಾಕಿ ಇದೆ. ಅಷ್ಟರಲ್ಲೇ ವೀಕ್ಷಕರು ಶೋ ಮೇಲೆ ಗರಂ ಆಗಿದ್ದಾರೆ. ಶೋನಲ್ಲಿ ವೈರಲ್ ಸ್ಟಾರ್‌ಗಳಿಗಷ್ಟೇ ಬೆಲೆ. ನಿಜವಾದ ಪ್ರತಿಭೆಗಳಿಗೆ ಮೋಸ ಆಗ್ತಿದೆ. ಅಂತಾ ಅಸಮಧಾನ ಹೊರ ಹಾಕಿದ್ದಾರೆ.
ಹೌದು, ಸರಿಗಮಪ ಅತ್ಯಂತ ಜನಪ್ರಿಯವಾದ ಸಂಗೀತ ಕಾರ್ಯಕ್ರಮ. ಒಮ್ಮೆಯಾದ್ರೂ ಈ ಶೋನಲ್ಲಿ ಭಾಗವಹಿಸ್ಬೇಕು ಅನ್ನೋದು ಹಾಡುಗಾರರ ಆಸೆ ಆಗಿರುತ್ತೆ. ಹೀಗಾಗಿ ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯದಿಂದಲೂ ಬಂದು ಗಾಯಕರು ಭಾಗವಹಿಸ್ತಾರೆ. ಈ ಶೋನಲ್ಲಿ ಹಾಡುವ ಮೂಲಕ ಗಮನ ಸೆಳೆಯುತ್ತಾರೆ. ಈ ಸೀಸನ್‌ನಲ್ಲೂ ಅದ್ಭುತ ಕಲಾವಿದರ ದಂಡೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಇದೀಗ ಮೂರು ತಿಂಗಳು ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿಗೆ ಆರು ಜನರು ಆಯ್ಕೆಯಾಗಿದ್ದಾರೆ. ಆದ್ರೀಗ ಈ ಶೋ ವಿರುದ್ಧ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.
ಈ ಶೋನಲ್ಲಿ ಶಿವಾನಿ ಶಿವದಾಸ ಸ್ವಾಮಿ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಶಿವಾನಿ ಆರಂಭದಿಂದಲೂ ಶಿವನ ಹಾಡುಗಳನ್ನು ಹಾಡುತ್ತಾ, ತೀರ್ಪುಗಾರರ ಜೊತೆಗೆ ವೀಕ್ಷಕರೆ ಮನಗೆದ್ದಿದ್ರು. ಎರಡು ವಾರಗಳ ಮುನ್ನವೇ ಟಿಕೆಟ್ ಟು ಫಿನಾಲೆ ಪ್ರಶಸ್ತಿ ಪಡೆದಿದ್ದರು. ಇವರ ಜೊತೆಗೆ ಉಡುಪಿಯ ಆರಾಧ್ಯ ರಾವ್ ಅದ್ಭುತ ಗಾಯನದ ಮೂಲಕ ಗಮನ ಸೆಳೆದಿದ್ರು. ಈಕೆಯ ಗಾಯನಕ್ಕೆ ಕರುನಾಡ ಜನ ಮನಸೋತಿದ್ರು. ಕೂಡ ಫಿನಾಲೆ ಟಿಕೆಟ್ ಪಡೆದಿದ್ದರು. ಕಳೆದ ವಾರ ನಡೆದ ಸೆಮಿ ಫಿನಾಲೆಯಲ್ಲಿ ರಶ್ಮಿ ಧರ್ಮೇಂದ್ರ, ಬಾಳು ಬೆಳಗುಂದಿ, ದ್ಯಾಮೇಶ ಹಾಗೂ ಅಮೋಘ ವರ್ಷ ಆಯ್ಕೆಯಾಗುವ ಮೂಲಕ ಒಟ್ಟು 6 ಜನ ಸ್ಪರ್ಧಿಗಳು ಫಿನಾಲೆ ತಲುಪಿದ್ದರು. ಆದರೆ ಸೀಸನ್ ಪೂರ್ತಿ ಅದ್ಭುತವಾಗಿ ಹಾಡಿಕೊಂಡು ಬಂದಂತಹ ಲಹರಿಗೆ ಸ್ಥಾನ ಸಿಕ್ಕಿಲ್ಲ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ.
ಲಹರಿ ಮಹೇಶ್ ಅದ್ಭುತವಾದ ಗಾಯಕಿ, ಆಕೆ ಸೀಸನ್ ಆರಂಭದಿಂದಲೂ ಟಫ್ ಕಾಂಪಿಟೀಶನ್ ಕೊಟ್ಟಿದ್ರು. ಕನ್ನಡದ ಶ್ರೇಯಾ ಘೋಷಲ್ ಈಕೆ ಆಗ್ತಾಳೆ ಎನ್ನುವ ಹೊಗಳಿಕೆಯನ್ನು ಪಡೆದಿದ್ದರು. ಅಷ್ಟೇ ಅಲ್ಲ ಅರ್ಜುನ್ ಜನ್ಯ ಈಕೆಯ ಹಾಡಿಗೆ ಮನಸೋತು ಸಿನಿಮಾದಲ್ಲಿ ಚಾನ್ಸ್ ನಿಡೋದಾಗಿ ಹೇಳಿದ್ರು. ಹೀಗಾಗಿ ಈಕೆ ಫಿನಾಲೆ ಹಂತ ತಲುಪುತ್ತಾರೆ ಎನ್ನುವ ಭರವಸೆ ಎಲ್ಲರಿಗೂ ಇತ್ತು. ಆದ್ರೀಗ ಆದರೆ ಆಕೆಯ ಬದಲಾಗಿ ದ್ಯಾಮೇಶ್, ಬಾಳು ಬೆಳಗುಂದಿ ಫೈನಲ್ ತಲುಪಿದ್ದಾರೆ. ಇದು ವೀಕ್ಷಕರಿಗೆ ಕೋಪ ತರಿಸಿದೆ. ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ವೀಕ್ಷಕರು ಶೋ ವಿರುದ್ಧ ಕಿಡಿ ಕಾರಿದ್ದಾರೆ. ಲಹರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ದ್ಯಾಮೇಶ ಹಳ್ಳಿ ಪ್ರತಿಭೆ. ಸಂಗೀತ ಕ್ಲಾಸ್ ಗೆ ಹೋಗಿಲ್ಲ ಅಂದ್ರೂ ಅದ್ಭುತವಾಗಿ ಹಾಡಿ ಗಮನ ಸೆಳೆದಿದ್ದಾರೆ. ಅವ್ರ ವಾಯ್ಸ್ ಕೂಡ ಅದ್ಭುತವಾಗಿದೆ. ದ್ಯಾಮೇಶ್ ಗೆ ಫೈನಲ್ ಗೆ ಹೋಗೋ ಎಲ್ಲಾ ಅರ್ಹತೆ ಇದೆ. ಆದ್ರೆ ಬಾಳು ಬೆಳಗುಂದಿಗೆ ಫೈನಲ್ ಗೆ ಹೋಗಲು ಯಾವ ಅರ್ಹತೆ ಇದೆ. ಬಾಳು ಬೆಳಗುಂದಿ ವಾಯ್ಸ್ ಅಷ್ಟೊಂದು ಇಂಪಾಗಿಲ್ಲ.. ಕಷ್ಟದ ಹಾಡು ಕೊಟ್ರೆ ಹಾಡೋಕೆ ಬರಲ್ಲ.. ಸಂಗೀತದ ಗಂಧ ಗಾಳಿ ಗೊತ್ತಿಲ್ಲ.. ವೈರಲ್ ಸ್ಟಾರ್ ಆದ ಮಾತ್ರಕ್ಕೆ ಫೈನಲ್ ಗೆ ಸೆಲೆಕ್ಟ್ ಮಾಡ್ಬೋದಾ? ಟಿಆರ್ ಪಿಗಾಗಿ ಉಳಿಸಿಕೊಂಡು, ಲಹರಿಯಂತಹ ಕಂಟೆಸ್ಟಂಟ್ ನ್ನು ಆಯ್ಕೆ ಮಾಡದಿರುವುದು ತುಂಬಾನೆ ಬೇಸರ ತಂದಿದೆ. ಟಿಆರ್ ಪಿಯಿಂದ ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ಲ.. ಮೋಸ ಆಗ್ತಿದೆ ಅಂತಾ ಎಂದು ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.
ಅಂದ್ಹಾಗೆ ಬಾಳು ಬೆಳಗುಂದಿಯನ್ನ ಫೈನಲ್ ಗೆ ಸೆಲೆಕ್ಟ್ ಮಾಡಲು ಕೂಡ ಒಂದು ಕಾರಣ ಇದೆ. ಇದನ್ನ ಆಂಕರ್ ಅನುಶ್ರೀ ಆರಂಭದಲ್ಲೇ ತಿಳಿಸಿದ್ರು. ಫೈನಲ್‌ಗೆ ವೋಟಿಂಗ್ ಮೂಲಕವೂ ಆಯ್ಕೆ ಮಾಡಲಾಗಿದೆ. ಬಾಳು ಬೆಳಗುಂದಿಗೆ ಹೆಚ್ಚು ವೋಟ್ ಬಂದಿದೆ. ಹೀಗಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ ವೀಕ್ಷಕರು ಮಾತ್ರ ಈ ತೀರ್ಪು ಒಪ್ಪಿಕೊಳ್ಳೋಕೆ ರೆಡಿ ಇಲ್ಲ.