ರಾಕಿ ಭಾಯ್ Vs ಲೇಡಿ ಗ್ಯಾಂಗ್ ಕ್ರೇಜ್ – ರಿಲೀಸ್‌ಗೂ ಮುಂಚೆಯೇ ಗೆದ್ದ ಟಾಕ್ಸಿಕ್

ರಾಕಿ ಭಾಯ್ Vs ಲೇಡಿ ಗ್ಯಾಂಗ್ ಕ್ರೇಜ್ –  ರಿಲೀಸ್‌ಗೂ ಮುಂಚೆಯೇ ಗೆದ್ದ ಟಾಕ್ಸಿಕ್

ಕೆಜಿಎಫ್‌ 2 ರಿಲೀಸ್ ಆಗಿದ್ದು 2022. ಅದೇ ಲಾಸ್ಟ್.. ರಾಕಿಂಗ್ ಸ್ಟಾರ್‌ ಯಶ್‌ನ್ನ ಥಿಯೇಟರ್‌ನಲ್ಲಿ ಫ್ಯಾನ್ಸ್‌ ನೋಡಿದ್ದು.. ಆಮೇಲೆ ಟಾಕ್ಸಿಕ್ ಅನೌನ್ಸ್ ಆದ್ಮೇಲೆ, ಫ್ಯಾನ್ಸ್‌ ಫುಲ್‌ ಖುಷಿಯಾದ್ರು. ಟಾಕ್ಸಿಕ್ ಟೀಸರ್ ನೋಡಿದ ಫಾನ್ಸ್ ಗೆ  ಸಿನಿಮಾ ಮೇಲೆ ಕಿಕ್ ಕೂಡ ಜಾಸ್ತಿ ಆಯ್ತು. ಆದ್ರೆ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್ಆಗಿ, 2-3 ಸಲ ಪೋಸ್ಟ್‌ ಪೋನ್ ಕೂಡ ಆಯ್ತು.  ಇದ್ದನ್ನೆಲ್ಲಾ ನೋಡಿದ ಫ್ಯಾನ್ಸ್‌ ಪ್ರತಿ ಸಲ ಹೀಗೆ ಪೋಸ್ಟ್ ಪೋನ್ ಮಾಡಿದ್ರೆ ಇಂಟ್ರೆಸ್ಟ್ ಹೋಗ್ ಬಿಡುತ್ತೆ.. ಈ ಸಿನಿಮಾ ಮೂರ್ನಾಲ್ಕ್ ವರ್ಷಗಟ್ಟಲೇ ಟೈಮ್ ತಗೊಂಡ್ ಮಾಡಿದ್ದು ವೇಸ್ಟ್ ಆಗುತ್ತೆ. ಸಿನಿಮಾ ಹಂಗಂತೆ ಹಿಂಗಂತೆ ರೀಶೂಟ್ ಅಂತೆ ಕಿರಿಕ್ ಅಂತೆ ಅಂತ ಸಾಕಷ್ಟು ಸುದ್ದಿಗಳು ಹರಿದಾಡಿದ್ವು. ಆದ್ರೆ ಟಾಕ್ಸಿಕ್‌ ಎಷ್ಟೇ ಸರಿ ಪೋಸ್ಟ್ ಫೋನ್ ಆದ್ರು ಇದರ ಮೇಲಿನಿ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಆಗಸ್ಟ್ 26 ಕ್ಕೆ ರಾಕಿ ಭಾಯ್‌ನ ಕಣ್ತುಂಬಿಕೊಳ್ಳುವುದ್ದಕ್ಕೆ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ.

ಸ್ಟೇ ಅವೇ ಕಿಡ್ಸ್, ಕಿಡ್ಸ್’ ಕಿಡ್ಸ್ ಅಂತೆಲ್ಲ ಸಾಲು ಸಾಲು ಡಿಸ್ ಕ್ಲೈಮರ್ ಕೊಟ್ಟು ಇಂಡೈರೆಕ್ಟಾಗಿ ಹುಚ್ಚೆಬ್ಬಿಸ್ತಾ ಇದೆ ಟಾಕ್ಸಿಕ್. ಬುದ್ಧಿವಂತರಿಗೆ ಮಾತ್ರ . ಇದು ಉಪ್ಪಿಯ ಫ್ರೆಶ್ ಗಿಮಿಕ್ ಆಗಿತ್ತು. ಗ್ರೋನ್ ಅಪ್ ಗಳಿಗೆ ಮಾತ್ರ ಅಂತ  ಹೊಸ ಥರ ರೊಚ್ಚಿಗೆಬ್ಬಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್‌. ಈ ಸಿನಿಮಾ ಫ್ಲಾಫ್ ಆಗುತ್ತೆ ಯಶ್ ಕರಿಯರ್‌ಗೆ ಹೊಡೆತ ಕೊಡುತ್ತೆ ಅನ್ನೋ ಈ ಟಾಕ್ ಇತ್ತು. ಆದ್ರೆ ಈಗ ಇರೋ ಕ್ರೇಜ್ ನೋಡಿದ್ರೆ  ಈ ಸಿನಿಮಾ ಧೂಳೆಬ್ಬಿಸೋದು ಕನ್ಫರ್ಮ್.  ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಮೆಸೇಜ್ ಇದೆ ಅಂತ ನೋಡ್ಬೇಡಿ,  ಮಡಿ ಮೈಲಿಗೆ ಎಲ್ಲ ಸೈಡಿಗಿಟ್ಟು ನೋಡಿ ಅಂತ ಡೈರೆಕ್ಟ್ ಆಗಿಯೇ ಟೀಸರ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

ಟಾಕ್ಸಿನಲ್ಲಿ ಎಂಟರ್ಟೇನ್ಮೆಂಟ್ , ಗಾಂಚಲಿ, ಡಾರ್ಕ್ ನೆಸ್ ತುಂಬಿದೆ ಅನ್ನೋದು ಗೊತ್ತಾಗುತ್ತೆ. ಹೀಗಾಗಿ ಇಲ್ಲಿ ನಾವು ಬೇರೆದ್ದನ್ನ ಹುಡುಕುವುದು ತಪ್ಪು.. ಹಾಗಂತ ಹುಡುಕೋಕೆ ಹೋದ್ರೆ ಅಲ್ಲಿ ಸಿಗಲ್ಲ ಬಿಡಿ. ಟಾಕ್ಸಿಕ್ ಸಿನಿಮಾ ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಸಿನಿಮಾ.

ಐವರು ನಾಯಕಿಯರ ಕಾರಣಕ್ಕೆ ಟಾಕ್ಸಿಕ್’ ಚಿತ್ರ ಭಾರೀ ನಿರೀಕ್ಷೆ ಕ್ರಿಯೇಟ್ ಮಾಡಿತ್ತು.  ಇದೀಗ ಲೇಡಿಸ್ & ಲೇಡಿಸ್ ಎಂಬ ಟೀಸರ್ ರಿಲೀಸ್ ಮಾಡುವ ಮೂಲಕ ಐವರ ನಟಿಯರ ಖದರ್‌‌ ಶುರುವಾಗಿದೆ.  ನಯನತಾರಾ, ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಶಿ ಕಮಾಲ್ ಮಾಡಿದ್ದಾರೆ. ಈ ಐವರ ಕ್ಯಾರೆಕ್ಟರ್‌ನ್ನ ಒಂದೇ ಟೀಸರ್‌ನಲ್ಲಿ ರಿವೀಲ್ ಮಾಡಲಾಗಿದೆ. ಡೇಂಜರ್ ಸೂಚನೆಯೊಂದಿಗೆ ಆರಂಭವಾಗುವ ಆಗುವ ಟೀಸರ್ ಗ್ಲ್ಯಾಮರ್‌ ಜೊತೆ ಆ್ಯಕ್ಷನ್ ಒಳಗೊಂಡಿದೆ. ಮಹಿಳೆಯರ ಶಕ್ತಿ, ಆತ್ಮವಿಶ್ವಾಸ, ಸೌಂದರ್ಯವನ್ನು ಟೀಸರ್ ಅನಾವರಣ ಮಾಡಿದೆ. ಲೇಡಿಸ್ ಗ್ಯಾಂಗ್ ಜೊತೆ ಯಶ್ ಕೀಟಲೆ ಮಾಡುವ ಸಣ್ಣ ತುಣುಕು ಕ್ರೇಜಿಯಾಗಿದೆ. ಲೇಡಿಸ್ ಅಂಡ್‌ ಲೇಡಿಸ್ ಒಬ್ಬೊಬ್ರೆ ಬರ್ತೀರಾ.? ಒಟ್ಟೊಟ್ಗೆ ಬರ್ತೀರಾ..?’ ಎಂದು ಕೇಳುವ ಯಶ್ ಡೈಲಾಗ್ ಈಗ ಯಶ್‌ ಫಾನ್ಸ್‌ ಕಿಕ್ ಹೆಚ್ಚು ಮಾಡಿದೆ. ಈ ಡೈಲಾಗ್ ಯಶ್ ಬಾಯಿಯಲ್ಲಿ ಕೇಳುವುದ್ದಕ್ಕೆ ಮಾಜಾ ಇದೆ ಅಂತ ಫಾನ್ಸ್ ಹಾಡಿಹೊಗಳುತ್ತಿದ್ದಾರೆ. ಈ ಟೀಸರ್ ಬಿಟ್ಟ ಮೇಲೆ  ಈ ಹಿಂದಿನ ಕಾರ್ ಟೀಸರ್‌ಗಿಂತ ಜಾಸ್ತಿ ಫ್ಯಾನ್ಸ್  ಖುಷಿಯಾಗಿದ್ದಾರೆ. ಭಿನ್ನ ಕಥಾಹಂದರ, ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕತೆ ಮತ್ತು ವಿಶಿಷ್ಟ ಮೇಕಿಂಗ್ ಮೂಲಕ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, ಈ ಚಿತ್ರದಲ್ಲಿ ಯಶ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಸಿನಿಪ್ರಿಯರ ಗಮನ ಸೆಳೆದಿವೆ. ಆದರೆ ಚಿತ್ರತಂಡದಿಂದ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಸದ್ಯಕ್ಕೆ ರಿಲೀಸ್ ಆಗಿರೋ ಹೊಸ ಟೀಸರ್ ನೋಡ್ತಾ ಇದ್ರೆನೇ, ವಾಯ್ಲೆನ್ಸ್ ಯಾವ ಪರಿ ಇರಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ‘ಓಪನ್’ ಆಗಿದೆ ಅನ್ನೋದು ಅರ್ಥವಾಗಿಬಿಡುತ್ತೆ. ಪದೇ ಪದೇ ಪೋಸ್ಟ್ ಪೋನ್ ಆದಾಗಲೂ ಸಿನಿಮಾ ಮೇಲೆ ಅನುಮಾನ ಪಡುತ್ತಿದ್ದವರಿಗೆ, ಟೀಸರ್ ಉತ್ತರ ಕೊಟ್ಟಿದೆ. ಯಶ್ ತಾನು ಇಂಡಸ್ಟ್ರಿಲಿಯಲ್ಲಿ ಮಾತ್ರ ಬೆಳೆಯದೇ ಇಂಡಸ್ಟ್ರಿನೇ ಇನ್ನೊಂದು ಮಟ್ಟಕ್ಕೆ ತಗೊಂಡು ಹೋಗುತ್ತಿದ್ದಾರೆ.  ಟಾಕ್ಸಿಕ್ ಮೂಲಕ ಕನ್ನಡ ಸಿನಿಮಾ ಗ್ಲೋಬಲ್ ಲೆವೆಲ್​ನಲ್ಲಿ ಸದ್ದು ಮಾಡಲಿ.ಮತ್ತೆ ಕನ್ನಡ ಚಿತ್ರರಂಗದ ಕಡೆ ಎಲ್ಲರೂ ಮುಖ ಮಾಡುವಂತೆ ಆಗಲಿದೆ.

Kishor KV

Leave a Reply

Your email address will not be published. Required fields are marked *