ನಾಯಿ ಅನ್ಕೊಂಡು ಕತ್ತೆಕಿರುಬ ಖರೀದಿಸಿದ – ಆಟವಾಡಿಸಲು ಹೋದ್ರೆ ಕಾಲನ್ನೇ ಕಚ್ಚುತ್ತಿತ್ತು ಹೈನಾ..!

ನಾಯಿ ಅನ್ಕೊಂಡು ಕತ್ತೆಕಿರುಬ ಖರೀದಿಸಿದ – ಆಟವಾಡಿಸಲು ಹೋದ್ರೆ ಕಾಲನ್ನೇ ಕಚ್ಚುತ್ತಿತ್ತು ಹೈನಾ..!

ಇತ್ತೀಚೆಗೆ ಪ್ರಾಣಿಗಳನ್ನ ಸಾಕೋದು ಕೂಡ ಒಂದು ರೀತಿಯ ಫ್ಯಾಷನ್ ಆಗಿದೆ. ಕೆಲವರು ತಮ್ಮ ಪ್ರತಿಷ್ಠೆ ತೋರಿಸಿಕೊಳ್ಳೋಕೆ ಲಕ್ಷಗಟ್ಟಲೆ ಹಣ ಕೊಟ್ಟು ಶ್ವಾನಗಳನ್ನ ಖರೀದಿಸುತ್ತಾರೆ. ಆದ್ರೆ ಕ್ರಾಸ್ ಬ್ರೀಡ್ (Crossbreed) ಶ್ವಾನಗಳನ್ನು ಖರೀದಿಸದಂತೆ ಅನೇಕ ಬಾರಿ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ. ಹೀಗೆ   ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನ ಖರೀದಿಸಲು ಹೋಗಿ ಮೋಸ ಹೋಗಿದ್ದಾನೆ.

ಮಿಶ್ರತಳಿಯ ಶ್ವಾನ ಖರೀದಿ ಮಾಡಲು ಹೋದಾಗ ಅಪಾಯಕಾರಿ ಪ್ರಾಣಿಯನ್ನು ಮಿಶ್ರತಳಿ ಎಂದು ಹೇಳಿದ್ದಾರೆ. ಈ ವೇಳೆ ಖರೀದಿದಾರ ಇದು ಯಾವ ತಳಿ ಎಂದು ಪ್ರಶ್ನಿಸಿದ್ದಾರೆ. ಆಗ ಮಾರಾಟಗಾರ ಏನೇನೋ ಹೇಳಿದ್ದಾನೆ. ಅದನ್ನೆಲ್ಲಾ ನಂಬಿದ ವ್ಯಕ್ತಿ ಹಣ ಕೊಟ್ಟು ಪಾವತಿ ಮಾಡಿದ್ದಾರೆ. ಆದರೆ ನಾಯಿ ಅನ್ಕೊಂಡು ಆ ಪ್ರಾಣಿಯನ್ನ ಮನೆಗೆ ತಂದಾಗ ಅದು ಆತನ ಕಾಲಿಗೆ ಕಚ್ಚಿದೆ. ಯಾಕಂದ್ರೆ ನಾಯಿ ಅನ್ಕೊಂಡು ಮನೆಗೆ ತಂದದ್ದು ವಾಸ್ತವವಾಗಿ ಕಾಡು ಹೈನಾ ಅಂದ್ರೆ ಕತ್ತೆ ಕಿರುಬವನ್ನ.

ಇದನ್ನೂ ಓದಿ : ಪಾರಿವಾಳದ ಕಾಲಲ್ಲಿ ಕ್ಯಾಮರಾ, ಮೈಕ್ರೋಚಿಪ್! – ಗೂಢಚರ್ಯೆ ನಡೆಯುತ್ತಿದ್ಯಾ?

ಶ್ವಾನ ಅನ್ಕೊಂಡು ಕತ್ತೆಕಿರುಬವನ್ನ ಖರೀದಿ ಮಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದೆ. Infared_Savage2 ಹೆಸರಿನ ಖಾತೆ ಬಳಕೆದಾರರು ಈ ಸ್ಟೋರಿಯನ್ನ Instagram ನಲ್ಲಿ ಹಂಚಿಕೊಂಡಿದ್ದಾರೆ. ಆನ್ ಲೈನ್​ನಲ್ಲಿ ಈ ನಾಯಿ ಮಾರಾಟವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರು ಜಾಹೀರಾತನ್ನು ನೋಡಿ ನಾಯಿಮರಿಯನ್ನು ಖರೀದಿಸಿದರು. ಆದರೆ ಅದನ್ನು ಮನೆಗೆ ತಂದಾಗ, ಅವನಿಗೆ ಏನೋ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಮುದ್ದಾದ ನಾಯಿಮರಿ ಎಂದು ಮನೆಗೆ ತಂದದ್ದು ಬೇರೆ ಪ್ರಾಣಿ ಎಂದು ಅರಿವಾಯಿತು. ವಾಸ್ತವವಾಗಿ, ಇದು ಕತ್ತೆ ಕಿರುಬದ ಮರಿ ಎಂದು ತಿಳಿದುಬಂತು. ಅವನು ನಾಯಿಮರಿ ಎಂದು ತಪ್ಪಾಗಿ ಭಾವಿಸಿದ್ದ.

ಖರೀದಿಗೆ ಹೋದಾಗ ಮುದ್ದಾಗಿತ್ತು ಎಂದು ಕೊಂಡುಕೊಂಡಿದ್ದು, ಅದರ ಜೊತೆ ಆಟವಾಡಲು ಹೋದಾಗ ಆತನ ಮೇಲೆಯೇ ದಾಳಿ ಮಾಡ್ತಿತ್ತು. ಅವನ ಕಾಲನ್ನು ತನ್ನ ಹಲ್ಲುಗಳಿಂದ ಕಚ್ಚಿದೆ. ಈ ಪ್ರಾಣಿಯನ್ನು ನೋಡಿದ ವ್ಯಕ್ತಿಗೆ ಸಣ್ಣದಾಗಿ ಅನುಮಾನ ಬಂದಿದೆ. ಬಳಿಕ ಇದು ಕತ್ತೆಕಿರುಬ ಅನ್ನೋದು ಗೊತ್ತಾಗಿದ್ದು ಮಾರಾಟಗಾರರಿಗೆ ಹಿಂದಿರುಗಿಸಿದ್ದಾನೆ. ಹಾಗೆಯೇ ವಾಪಾಸ್​ ಹಣವನ್ನು ವಾಪಸ್ ಕೇಳಿದ್ದು ದೂರು ದಾಖಲಿಸಿದ್ದಾನೆ.

ತಾನು ಮೋಸ ಹೋದ ಬಳಿಕ ವ್ಯಕ್ತಿ ಆನ್‌ಲೈನ್‌ನಲ್ಲಿ ಇತರರಿಗೂ ಎಚ್ಚರಿಕೆ ನೀಡಿದ್ದಾರೆ. ಶ್ವಾನಪಾಲಕರು ನಾಯಿಗಳನ್ನು ತೆಗೆದುಕೊಂಡು ಹೋಗುವಾಗ ಎಚ್ಚರಿಕೆ ವಹಿಸಬೇಕು. ಕೆಲವರು ವ್ಯಾಪಾರಕ್ಕಾಗಿ ಅಪಾಯಕಾರಿ ಪ್ರಾಣಿಗಳನ್ನು ಸಹ ನಿಮಗೆ ಒಪ್ಪಿಸಬಹುದು ಎಂದು ತಿಳಿಸಿದ್ದಾರೆ.

suddiyaana