ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಟ್ಯಾಕ್! – ಸಂಸತ್ ಮೇಲೆ ದಾಳಿ ಮಾಡಿದ ಇಬ್ಬರು ಅರೆಸ್ಟ್
ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ಸಂಸತ್‌ನಲ್ಲಿ ಬುಧವಾರ ಭದ್ರತಾ ಲೋಪ ಸಂಭವಿಸಿದೆ. ಇಬ್ಬರು ಸಂಸತ್ ಒಳಗೆ ಟಿಯರ್ ಗ್ಯಾಸ್ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೀಗ ಟಿಯರ್ ಗ್ಯಾಸ್ ದಾಳಿ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಲೋಕಸಭೆಗೆ ಪ್ರವೇಶಿಸಿದ್ದಾರೆ. ಪ್ರೇಕ್ಷಕ ಗ್ಯಾಲರಿಯಿಂದ ಜಿಗಿದು ಸದನದೊಳಗೆ ದಾಳಿ ನಡೆಸಿದ್ದಾರೆ. ಕಾಲಿನ ಶೂನ ಒಳಗೆ ಟಿಯರ್ ಗ್ಯಾಸ್ ಸ್ಪ್ರೇ ಇಟ್ಟಿದ್ದ ಯುವಕ ಸದನದೊಳಗೆ ದಾಳಿ ಮಾಡಿದ್ದಾರೆ. ಇತ್ತ ಯುವತಿ ಸದನದ ಹೊರಭಾಗದಲ್ಲಿ ಟಿಯರ್ ಗ್ಯಾಸ್ ಸಿಡಿಸಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾಳೆ. ಇದೀಗ ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ. ಬಂಧಿತರನ್ನು ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ.. ಟಿಯರ್ ಗ್ಯಾಸ್ ದಾಳಿ – ಉಗ್ರರ ಕೈವಾಡದ ಶಂಕೆ!
ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡಿದ ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಸಂಸತ್ ಭವನದೊಳಕ್ಕೆ ಪ್ರವೇಶ ಪಡೆದಿದ್ದರು. ಪಾಸ್ ಸಿಗುತ್ತಿದ್ದಂತೆ ಕಲಾಪ ವೀಕ್ಷಣೆ ಪ್ರೇಕ್ಷಕರಾಗಿ ಸದನದೊಳಗೆ ಪ್ರವೇಶಿಸಿದ್ದರು. ಶೂನ್ಯವೇಳೆಯಲ್ಲಿ ಸಂಸದರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ ಅವರು ಸದನದೊಳಕ್ಕೆ ಜಿಗಿದಿದ್ದಾರೆ. ಬಳಿಕ ಶೂ ಒಳಗಿದ್ದ ಸ್ಪ್ರೇ ತೆಗೆದು ದಾಳಿನಡೆಸಿದ್ದಾರೆ. ಇದೀಗ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತ ಸರ್ಕಾರ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ. ನಮ್ಮ ಹಕ್ಕುಗಳನ್ನು ದಮನ ಮಾಡುತ್ತಿದೆ. ನಾವು ಯಾವುದೇ ಸಂಘಟನೆಗೆ ಸೇರಿಲ್ಲ. ನಾವು ನೀರುದ್ಯೋಗಿಗಳು, ನಾವು ಹಕ್ಕುಗಳ ಬಗ್ಗೆ ಮಾತನಾಡಿದರೆ ಜೈಲಿಗೆ ಕಳುಹಿಸುತ್ತಿದ್ದಾರೆ. ತಾನಾ ಶಾಹೀ ನಹೀ ಚಲೇಗಾ ಎಂದು ಘೋಷಣೆ ಕೂಗಿದ್ದಾರೆ. ಇದೀಗ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.