ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ – ಭಾರತದ ಕಾರ್ಮಿಕರಿಗೆ ಫುಲ್‌ ಡಿಮ್ಯಾಂಡ್.. 1.25 ಲಕ್ಷ ವೇತನ..!

ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ – ಭಾರತದ ಕಾರ್ಮಿಕರಿಗೆ ಫುಲ್‌ ಡಿಮ್ಯಾಂಡ್.. 1.25 ಲಕ್ಷ ವೇತನ..!

ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇದೀಗ ಇಸ್ರೇಲ್‌ನಲ್ಲಿ ಭಾರಿ ಕಾರ್ಮಿಕರ ಕೊರತೆ ಉಂಟಾಗಿದೆ. ಕಟ್ಟಡ ನಿರ್ಮಾಣ, ಬಡಗಿ, ಕಮ್ಮಾರ ಕೆಲಸದವರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಹೀಗಾಗಿ ಕಾರ್ಮಿಕರನ್ನು ಒದಗಿಸುವಂತೆ ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿತ್ತು. ಅದ್ರಂತೆ ಉತ್ತರ ಪ್ರದೇಶದಿಂದ ಇಸ್ರೇಲ್​ಗೆ ತೆರಳಲು 16 ಸಾವಿರ ಕಾರ್ಮಿಕರು ಸಜ್ಜಾಗಿದ್ದಾರೆ.

ಹೌದು, ಹಮಾಸ್‌, ಇಸ್ರೇಲ್‌ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಹೀಗಾಗಿ ಹಮಾಸ್ ದಾಳಿಯ ಬಳಿಕ ಮಧ್ಯಪ್ರಾಚ್ಯ ದೇಶದಲ್ಲಿ ನಿರ್ಮಾಣ ಕಾರ್ಯಗಳು ನಿಂತು ಹೋಗಿವೆ. ಇದು ದೇಶದ ಆರ್ಥಿಕತೆಯನ್ನೂ ಕುಗ್ಗಿಸಿದೆ. ವೆಸ್ಟ್‌ಬ್ಯಾಂಕ್, ಗಾಜಾದ ಪ್ಯಾಲೆಸ್ಟೈನಿಯನ್ನರ ಮೇಲೆ ನಿಷೇಧ ಹೇರಿದ್ದರಿಂದ ಕಾರ್ಮಿಕರ ಕೊರತೆ ಉಂಟಾಗಿದೆ. ಅಂದಾಜಿನ ಪ್ರಕಾರ, ಯುದ್ಧಕ್ಕೂ ಮೊದಲು ದೇಶದ ನಿರ್ಮಾಣ ಉದ್ಯಮದಲ್ಲಿ 82 ಸಾವಿರ ಪ್ಯಾಲೆಸ್ಟೈನಿಯನ್ನರು ಕೆಲಸ ಮಾಡುತ್ತಿದ್ದರು ಯುದ್ಧ ಪ್ರಾರಂಭವಾದಾಗಿಂದ ಇಸ್ರೇಲ್‌ನಲ್ಲಿ ಇಲ್ಲಿ ಮನೆ, ಕಟ್ಟಡ ನಿರ್ಮಾಣ ಮಾಡಲು ಕಾರ್ಮಿಕರ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಕಾರ್ಮಿಕರ ಕಳುಹಿಸಲು ಕೋರಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಸಿಡೆಂಟ್‌ – 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

ಇಸ್ರೇಲ್‌ ಮನವಿ ಮೇರೆಗೆ ಕೇಂದ್ರ ಸರ್ಕಾರ ಮುಂದಿನ ತಿಂಗಳಿನಿಂದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಿಕೊಡಲಿದೆ. ಅದರಲ್ಲಿ ಉತ್ತರಪ್ರದೇಶ ಒಂದರಿಂದಲೇ 16 ಸಾವಿರ ಜನರು ಗುಳೆ ಹೋಗಲಿದ್ದಾರೆ. ಭಾರತದಿಂದ ತೆರಳುವ ಕಾರ್ಮಿಕರಿಗೆ ಪ್ರತಿ ತಿಂಗಳು ಇಸ್ರೇಲ್ 1.25 ಲಕ್ಷ ರೂಪಾಯಿ ಸಂಬಳ ನೀಡುತ್ತದೆ. ಇದೀಗ ಕೇಂದ್ರ ಕಾರ್ಮಿಕರ ಸಚಿವಾಲಯವು ಕಾರ್ಮಿಕರನ್ನು ಕಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್‌ಗೆ ಕಳುಗಿಸಿಕೊಡಲು ಇಲ್ಲಿಯವರೆಗೆ 16 ಸಾವಿರ ಕಾರ್ಮಿಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ 10 ಸಾವಿರ ನುರಿತ ಉದ್ಯೋಗಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಜನವರಿಯಲ್ಲಿ ಕಾರ್ಮಿಕರನ್ನು ಕಳುಹಿಸಿಕೊಡಲು ಚಿಂತನೆ ನಡೆಸಲಾಗಿದೆ. ಇಸ್ರೇಲ್‌ಗೆ ಕಳುಹಿಸಲು ಉದ್ದೇಶಿಸಿರುವ ಕಾರ್ಮಿಕರ ಪೈಕಿ ಉತ್ತರ ಪ್ರದೇಶವೇ ಅತಿದೊಡ್ಡ ಪೂರೈಕೆದಾರನಾಗಲಿದೆ ಎಂದು ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜ್‌ಭರ್ ಹೇಳಿದ್ದಾರೆ.

ಉತ್ತರ ಪ್ರದೇಶದ ಕಾರ್ಮಿಕರು ಪ್ರತಿ ಮಾಸ ಬೋನಸ್ ಆಗಿ 15,000 ರೂಪಾಯಿಗಳ ಜೊತೆಗೆ ಭಾರತೀಯ ಕರೆನ್ಸಿಯ ಪ್ರಕಾರ ತಿಂಗಳಿಗೆ 1.25 ಲಕ್ಷ ರೂಪಾಯಿ ಸಂಬಳ ಪಡೆಯಲಿದ್ದಾರೆ. ಈ ಮೊತ್ತವನ್ನು ಕಂಪನಿಯ ಖಾತೆಗೆ ಜಮಾ ಮಾಡಲಾಗುವುದು. ಕೆಲಸ ಮುಗಿದ ನಂತರ ಆಯಾ ಕಾರ್ಮಿಕರಿಗೆ ಇದನ್ನು ನೀಡಲಾಗುತ್ತದೆ. ಆಸಕ್ತ ಕಾರ್ಮಿಕರು ತಕ್ಷಣವೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರ ಸೂಚಿಸಿದೆ. ಕಾರ್ಮಿಕರು ಕನಿಷ್ಠ ಒಂದು ವರ್ಷ ಮತ್ತು ಗರಿಷ್ಠ ಐದು ವರ್ಷಗಳವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ. ಕಾರ್ಮಿಕರು ಇಂಗ್ಲಿಷ್ ಓದಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕು. ಇಸ್ರೇಲ್‌ನಲ್ಲಿ ಇದಕ್ಕೂ ಮೊದಲು ಕೆಲಸ ಮಾಡದ ಅರ್ಜಿದಾರರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ. 21 ರಿಂದ 45 ವರ್ಷದವರಾಗಿರಬೇಕು. ಇಸ್ರೇಲ್‌ನಲ್ಲಿ ಕೆಲಸಕ್ಕೆ ಇರುವಷ್ಟು ದಿನ ಪ್ರತಿಯೊಬ್ಬ ಕಾರ್ಮಿಕರಿಗೆ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M