ಏಲಿಯನ್‌ಗಳ ಶವದ ಪ್ರಯೋಗಾಲಯ ಪರೀಕ್ಷೆ ಯಶಸ್ವಿ – ಹೊರ ಬಿತ್ತು ಅಚ್ಚರಿಯ ಫಲಿತಾಂಶ!

ಏಲಿಯನ್‌ಗಳ ಶವದ ಪ್ರಯೋಗಾಲಯ ಪರೀಕ್ಷೆ ಯಶಸ್ವಿ – ಹೊರ ಬಿತ್ತು ಅಚ್ಚರಿಯ ಫಲಿತಾಂಶ!

ಮೆಕ್ಸಿಕೋದಲ್ಲಿ ಕಾಂಗ್ರೆಸ್‌ ಸಂಸತ್‌ನಲ್ಲಿ ಸೆ.12 ರಂದು ಎರಡು “ಏಲಿಯನ್‌ಗಳ ಶವಗಳನ್ನು” ಪ್ರದರ್ಶಿಸಲಾಗಿತ್ತು. ಇದು ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ತಜ್ಞರು ಇದು ಏಲಿಯನ್‌ಗಳ ಶವ ಅಲ್ಲ. ಇದು ಮಗುವಿನ ಶವ ಎಂದು ಪ್ರತಿಪಾದಿಸಿದ್ದರು. ಇದೀಗ ಶವಗಳ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾದ್ದು, ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಸೆ. 14 ರಂದು ಮೆಕ್ಸಿಕೋದ ಸಂಸತ್‌ನಲ್ಲಿ ಎರಡು ಏಲಿಯನ್‌ಗಳ ಶವಗಳನ್ನು ಪ್ರದರ್ಶಿಸಲಾಗಿತ್ತು. ಇದೀಗ ಏಲಿಯನ್​ ಶವಗಳ ಮೇಲೆ ಅಮೆರಿಕ ನೌಕಾಪಡೆಯ ಫೋರೆನ್ಸಿಕ್ ವಿಧಿವಿಜ್ಞಾನ ವೈದ್ಯ ಜೋಸ್ ಡಿ ಜೀಸಸ್ ಜಾಲ್ಸೆ ಬೆನಿಟೆಜ್ ಎಂಬುವರು ಈ ಪರೀಕ್ಷೆಯನ್ನು ನಡೆಸಿದ್ದು, ಆ ಶವಗಳು ಒಂದೇ ಅಸ್ಥಿಪಂಜರಕ್ಕೆ ಸಂಬಂಧಿಸಿದ್ದಾಗಿವೆ. ತಲೆಬುರುಡೆಗಳ ಯಾವುದೇ ಜೋಡಣೆಯಾಗಲಿ, ಕೈಚಳಕವಾಗಲಿ ಅಥವಾ ತಂತ್ರಗಾರಿಕೆ ನಡೆದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ. ಇದು ಅಂತಿಮ ಫಲಿತಾಂಶವಾಗಿದ್ದು, ಏಲಿಯನ್​ಗಳ ಶವಗಳು ಎನ್ನುವ ನಂಬಿಕೆಯನ್ನು ಗಟ್ಟಿಯಾಗಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭೂಮಿ ಮೇಲೆ ಏಲಿಯನ್‌ಗಳು ಇರೋದು ಸುಳ್ಳಲ್ಲ! – ಸಂಸತ್‌ನಲ್ಲಿಯೇ ಅನ್ಯಗ್ರಹ ಜೀವಿಯ ಶವ ಪ್ರದರ್ಶನ!

ಈ ಪಳೆಯುಳಿಕೆಗೊಂಡ ಅವಶೇಷಗಳನ್ನು ಎರಡು ಮರದ ಪೆಟ್ಟಿಗೆಯಲ್ಲಿ ಇಟ್ಟು ಪತ್ರಕರ್ತ ಮತ್ತು ಯುಎಫ್​ಒಲಜಿಸ್ಟ್​ ಜೈಮ್​ ಮೌಸ್ಸಾನ್​ ಅವರು ಸಂಸತ್‌ನಲ್ಲಿ  ಪ್ರದರ್ಶನ ಮಾಡಿದ್ದರು. ಈ ಎರಡೂ ಶವಗಳನ್ನು ಪೆರುವಿನ ಕುಸ್ಕೋ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದರು. ಮಾನವೇತರ ಅನ್ಯಗ್ರಹ ಜೀವಿಗಳ ಶವಗಳು 1000 ವರ್ಷದಷ್ಟು ಹಳೆಯದ್ದು ಎಂದು ಎನ್ನಲಾಗಿದೆ. ಎತ್ತರದಲ್ಲಿ ಚಿಕ್ಕದಾಗಿವೆ ಮತ್ತು ಸುಣ್ಣದ ಬಣ್ಣದಲ್ಲಿವೆ. ಅವುಗಳಲ್ಲಿ ಪ್ರತಿಯೊಂದೂ ಮೂರು ಬೆರಳುಗಳ ಕೈಗಳು ಮತ್ತು ಕುಗ್ಗಿದ ತಲೆಗಳನ್ನು ಹೊಂದಿವೆ. ಎರಡು ಶವಗಳಲ್ಲಿ ಒಂದರಲ್ಲಿ ಒಳಗೆ ಮೊಟ್ಟೆಗಳಿದ್ದು, ಹೆಣ್ಣು ಎಂದು ವಿವರಿಸಲಾಗಿದೆ,

ಈ ಮಾದರಿಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ ಮತ್ತು UFO ಅಥವಾ ಹಾರುವ ತಟ್ಟೆಗಳ ಅವಶೇಷಗಳ ನಂತರ ಕಂಡುಬಂದ ಜೀವಿಗಳಲ್ಲ. ಇವು ಡಯಾಟಮ್ [ಪಾಚಿ] ಗಣಿಗಳಲ್ಲಿ ಕಂಡುಬಂದವು. ಆ ನಂತರ ಪಳೆಯುಳಿಕೆಗೊಳಿಸಲಾಯಿತು. ನಮ್ಮ ಜಗತ್ತಿನಲ್ಲಿ ಯಾವುದೇ ಇತರ ಜಾತಿಗಳಿಗೆ ಸಂಬಂಧಿಸದ ಮಾನವರಲ್ಲದ ಮಾದರಿಗಳೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ ಮತ್ತು ಯಾವುದೇ ವೈಜ್ಞಾನಿಕ ಸಂಸ್ಥೆಗಳ ಪರೀಕ್ಷೆಗೆ ಎಲ್ಲ ಸಾಧ್ಯತೆಗಳು ತೆರೆದಿರುತ್ತವೆ ಎಂದು ಜೈಮ್​ ಮೌಸ್ಸಾನ್ ಹೇಳಿದರು. ಆದಾಗ್ಯೂ, ಅನೇಕ UFO ಮತ್ತು ಫೊರೆನ್ಸಿಕ್ಸ್ ಪರಿಣಿತರು ಈ ಹಕ್ಕುಗಳನ್ನು ಆಧಾರರಹಿತ ಮತ್ತು ವಂಚನೆ ಎಂದು ಟೀಕಿಸಿದ್ದಾರೆ. ಕೆಲವು ವಿದ್ವಾಂಸರು ಮತ್ತು ಪುರಾತತ್ವಶಾಸ್ತ್ರಜ್ಞರು ದೇಹಗಳು ಸರಳವಾಗಿ ರಕ್ಷಿತ ಮಾನವರ ಪ್ರಾಚೀನ ಅವಶೇಷಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Shwetha M