ವಲಸೆ ನೀತಿ ವಿರೋಧಿಸಿ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆ – 2,000 ನ್ಯಾಷನಲ್ ಗಾರ್ಡ್ ನಿಯೋಜಿಸಿದ ಟ್ರಂಪ್..!

ವಲಸಿಗರನ್ನು ಹೊರದಬ್ಬುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ವಿರುದ್ಧ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಮತ್ತು ಶಾಂತಿ ಸ್ಥಾಪಿಸಲು ಟ್ರಂಪ್ ಹೆಚ್ಚುವರಿಯಾಗಿ 2,000 ನ್ಯಾಷನಲ್ ಗಾರ್ಡ್ ಮತ್ತು ನೌಕಾಪಡೆಯ 700 ತುಕಡಿಗಳನ್ನು ನಿಯೋಜನೆಗೊಳಿಸಿದ್ದಾರೆ.
ಟ್ರಂಪ್ ಅವರ ಆದೇಶವನ್ನು ನಮ್ಮನ್ನು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ಮಾಡುತ್ತದೆ. ಆದರೆ, ಆದೇಶಕ್ಕೆ ಈಗಷ್ಟೇ ಸರ್ಕಾರ ಸಹಿ ಹಾಕಿದ್ದು, ಭದ್ರತಾಪಡೆಗಳು ಸ್ಥಳಕ್ಕಾಗಮಿಸಲು ಒಂದು ಅಥವಾ 2 ದಿನ ಸಮಯ ಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ನಡುವೆ ಹೆಚ್ಚುವರಿ ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಿರುವ ಟ್ರಂಪ್ ಅವರು, ಪ್ರತಿಭಟನಾಕಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಲಸೆ ನೀತಿಗಳ ವಿರುದ್ಧ ಪ್ರತಿಭಟಿಸುವವರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಹೊಡೆತ ನೀಡಲಾಗುವುದು. ಈ ಕೂಡಲೇ ಪ್ರತಿಭಟನೆ ನಿಲ್ಲಿಸದರೆ ಸರಿ, ಇಲ್ಲವಾದಲ್ಲಿ ಅಡಳಿತದ ಕಠಿಣ ಕ್ರಮಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಪ್ರತಿಭಟನಾಕಾರರ ಮೇಲೆ ಫ್ಲ್ಯಾಷ್ ಬ್ಯಾಂಗ್ ಮತ್ತು ರಬ್ಬರ್ ಗುಂಡುಗಳ ಬಳಕೆ ಮಾಡುತ್ತಿದ್ದು, ಪ್ರತಿಭಟನಾಕಾರರು ಕೂಡ ಕಾರುಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡುತ್ತಿದ್ದಾರೆ. ಲಾಸ್ ಏಂಜಲೀಸ್‌ನ ಬೀದಿ ಬೀದಿಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನೇರ ಜಟಾಪಟಿ ನಡೆಯುತ್ತಿದ್ದು, ಪರಿಸ್ಥಿತಿ ಭೀಕರವಾಗಿದೆ.