ರಕ್ಷಿತಾ ಕ್ವಾಟ್ಲೆಗೆ ಜಡ್ಜಸ್ ಸುಸ್ತು.. ಹನುಮಂತು ಕೌಂಟರ್ ಹೇಗಿತ್ತು? – ಕ್ವಾಟ್ಲೆ ಕಿಂಗ್ ಗಿಲ್ಲಿಗೆ ಚಾನ್ಸ್ ಯಾಕಿಲ್ಲ?

ಕ್ವಾಟ್ಲೆ ಕಿಚನ್.. ಕಲರ್ಸ್ ಕನ್ನಡದ ವಿಭಿನ್ನ ರಿಯಾಲಿಟಿ ಶೋ.. ಕ್ವಾಟ್ಲೆ ಕಿಚನ್’ ಮೊದಲ ಆವೃತ್ತಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಕ್ವಾಟ್ಲೆ ಕಿಚನ್ ಸೀಸನ್ 2 ಆರಂಭವಾಗಿದೆ. ಈ ಬಾರಿ ಕ್ವಾಟ್ಲೆ ಕೊಡೋದಿಕ್ಕೆ ಪ್ರಬಲ ಸ್ವರ್ಧಿಗಳೇ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಬಿಗ್ ಬಾಸ್ ಸೀಸನ್ 12 ರ ರನ್ನರ್ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಸೀಸನ್ 11 ವಿನ್ನರ್ ಹನುಮಂತ ಲಮಾಣಿ ಸೇರಿದಂತೆ ಸಿನಿಮಾ, ಸೀರಿಯಲ್ ನಟ, ನಟಿಯರು ಶೋಗೆ ಎಂಟ್ರಿಕೊಟ್ಟಿದ್ದಾರೆ. ಆದ್ರೆ ಮೊದಲ ಎಪಿಸೋಡ್‌ನಲ್ಲಿ ರಕ್ಷಿತಾ ಪಟಪಟ ಮಾತಿಗೆ ಜಡ್ಜಸ್ ಶಾಕ್ ಆಗಿದ್ದಾರೆ. ಮತ್ತೊಂದ್ಕಡೆ ಈ ಸೀಸನ್‌ನಲ್ಲಿ ಕ್ವಾಟ್ಲೆ ಕಿಂಗ್ ಗಿಲ್ಲಿನಟನಿಗೆ ಚಾನ್ಸ್ ಸಿಕ್ಕಿಲ್ಲ ಯಾಕೆ ಅನ್ನೋ ಪ್ರಶ್ನೆ ವೀಕ್ಷಕರಲ್ಲಿದೆ.
ಇದನ್ನೂ ಓದಿ: OUT ಆದ್ರೂ KL ರಾಹುಲ್ ಡ್ರಾಮಾ – ಜಸ್ಟ್ 2 ಲಕ್ಷಕ್ಕೆ ಪಡಿಕಲ್ ಸೇಲ್
ಚೆನ್ನಾಗಿ ಅಡುಗೆ ಮಾಡುವ ‘ಕುಕ್’ಗಳು ಒಂದ್ಕಡೆಯಾದ್ರೆ. ಊಟ ತಿನ್ನೋಕೆ ಗೊತ್ತು ಅಡುಗೆ ಮಾಡೋಕೆ ಬರಲ್ಲ.. ಆದ್ರೆ ಪಂಚ್ ಡೈಲಾಗ್ ಹೊಡೆಯುತ್ತಾ, ತರ್ಲೆ ಮಾಡ್ತಾ ಕಾಡುತ್ತೀವಿ ಎನ್ನುವ ‘ಕ್ವಾಟ್ಲೆ’ಗಳು ಮತ್ತೊಂದು ಕಡೆ. ಇದೀಗ ಈ ಅಡುಗೆ ಮಾಡೋರ ಜೊತೆ ಈ ಕ್ವಾಟ್ಲೆಗಳು ಸೇರಿದ್ರೆ ಹೇಗಿರುತ್ತೆ ಅನ್ನೋದೇ ಕ್ವಾಟ್ಲೆ ಕಿಚನ್ ಶೋನ ಸ್ವೆಷಾಲಿಟಿ. ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆ, ಅಡುಗೆ ಮಾಡೋಕೆ ಬಿಡದೇ ಕಾಲು ಎಳೆಯುತ್ತಾ ಮಜಾ ಕೊಡುವ ಶೋ ಅಂದ್ರೆ ಅದು ಕ್ವಾಟ್ಲೆ ಕಿಚನ್. ಇದೀಗ ಕ್ವಾಟ್ಲೆ ಕಿಚನ್ ಸೀಸನ್ 2 ಮತ್ತೆ ಶುರುವಾಗಿದೆ. ಗ್ರ್ಯಾಂಡ್ ಓಪನಿಂಗ್‌ನಲ್ಲೇ ಸ್ವರ್ಧಿಗಳು ಜಬರ್‌ದಸ್ತ್ ಮನರಂಜನೆ ನೀಡಿದ್ದಾರೆ.
ಕ್ವಾಟ್ಲೆ ಕಿಚನ್ ಸೀಸನ್ 2ನಲ್ಲಿ ನಂದಗೋಕುಲ ಸೀರಿಯಲ್ ನಟಿ ಮೇಘಾ, ಕಾವ್ಯಶ್ರೀ ಗೌಡ, ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ರಕ್ಷಿತಾ ಶೆಟ್ಟಿ, ಪವಿತ್ರ ಬಂಧನ ಸೀರಿಯಲ್ ನಟ ಸೂರಜ್ ಸಿಂಗ್, ಕನ್ನಡ ನಿರ್ದೇಶಕ ಓಂ ಪ್ರಕಾಶ್ ರಾವ್, ನವಾಜ್, ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ಪ್ರಿಯಾಂಕಾ, ‘ಶ್ರೀ ಗಂಧದ ಗುಡಿ’ ನಟ ಭವಿಷ್, ಬಿಗ್ ಬಾಸ್ ಖ್ಯಾತಿಯ ಕರಿಬಸಪ್ಪ, ಸಮೀಕ್ಷಾ, ಸೂರಜ್, ವಾಣಿ, ಪ್ರಶಾಂತ್, ಪುನೀತಾ ಈ ಶೋನಲ್ಲಿ ಭಾಗವಹಿಸ್ತಿದ್ದಾರೆ. ಇನ್ನು ಗ್ರ್ಯಾಂಡ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕನ್ನಡ 11 ವಿನ್ನರ್ ಹನುಮಂತ ಭಾಗವಹಿಸಿದ್ದಾರೆ. ಇನ್ನು ಮೇಘನಾ ರಾಜ್ ಹಾಗೇ ಕೌಶಿಕ್ ಶಂಕರ್ ಜಡ್ಜಸ್ ಆಗಿದ್ದಾರೆ. ಇದೀಗ ಮೊದಲ ಸಂಚಿಕೆಯೇ ವೀಕ್ಷಕರ ಮನಗೆದ್ದಿದೆ. ಅದ್ರಲ್ಲೂ ರಕ್ಷಿತಾ ಪಟ ಪಟ ಮಾತು, ಹನುಮಂತು ಕೌಂಟರ್ ಸಖತ್ ಹೈಲೈಟ್ ಆಗಿದೆ.
ಹೌದು, ರಕ್ಷಿತಾ ಶೆಟ್ಟಿಗೆ ಕನ್ನಡ ಸರಿಯಾಗಿ ಬರದಿದ್ರೂ ಆಕೆ ಕಾನ್ಫಿಡೆನ್ಸ್ ನೆಕ್ಟ್ಸ್ ಲೆವೆಲ್‌ನಲ್ಲಿದೆ. ತಪ್ಪೋ ಸರಿಯೋ ತನಗೆ ತೋಚಿದ್ದನ್ನ ಹೇಳಿಬಿಡೋದು ಆಕೆಯ ಸ್ವಭಾವ. ಒಮ್ಮೆ ಮಾತು ಶುರುಮಾಡಿದ್ರೆ ನಿಲ್ಲಿಸೋದೇ ಇಲ್ಲ.. ಇದೀಗ ಕ್ವಾಟ್ಲೆ ಕಿಚನ್‌ನಲ್ಲಿ ವೇದಿಕೆಗೆ ಎಂಟ್ರಿಕೊಡುತ್ತಿದ್ದಂತೆ ಮಾತು ಶುರುಮಾಡಿದ್ದಾಳೆ. ಮೊದಲು ತನ್ನ ತಾನು ಪರಿಚಯ ಮಾಡಿಕೊಂಡ ನಂತ್ರ ಆಕೆ ನೇರವಾಗಿ ನಟಿ ಮೇಘನಾ ರಾಜ್ ಬಳಿ ಮಾತನಾಡಿದ್ದಾಳೆ. ನಾನು ಯೂಟ್ಯೂಬರ್.. ನೀವೂ ಯೂಟ್ಯೂಬರಾ ಅಂತಾ ಕೇಳಿದ್ದಾಳೆ. ಇನ್ನು ವಿಟಿಯಲ್ಲಂತೂ ರಕ್ಷಿತಾ ಫಿಶ್ ಫ್ರೈ ಬಳಿ ನನಗೆ ನೀನು ತುಂಬಾ ಇಷ್ಟ. ನಿನಗೆ ನಾನು ತುಂಬಾ ಇಷ್ಟನಾ ಅಂತ ಹೇಳಿದ್ದಾರೆ. ಇದನ್ನ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಅದಾದ ಬಳಿಕ ಆಕೆ ಬಳಿ ಬಂಗುಡೆ ಫ್ರೈ ರೆಸಿಪಿ ಕೇಳಿದ್ದಾರೆ. ಆಕೆ ರೆಸಿಪಿ ಹೇಳಿ ಎಲ್ಲರಿಗೆ ಶಾಕ್ ಕೊಟ್ಟಿದ್ದಾಳೆ. ನನಗೆ ಚಿಕನ್ ಹಾಗೇ ಫಿಶ್ ಅಡುಗೆ ಮಾಡಲು ಬಿಟ್ಟು ಬೇರೆನೂ ಬರಲ್ಲ ಅಂತ ಹೇಳಿದ್ದಾರೆ. ಇನ್ನು ಆಕೆಗೆ ಕನ್ನಡದಲ್ಲಿ ಯಾವ ತರಕಾರಿ ಹೆಸರು ಕೂಡ ಗೊತ್ತಿಲ್ಲ. ಫೋಟೋ ತೋರಿಸ್ತಿದ್ದಂತೆ ತುಳು ಭಾಷೆಯಲ್ಲೇ ಹೆಸರು ಹೇಳ್ತಿದ್ದಾಳೆ. ಇದೀಗ ಈ ಶೋನಲ್ಲಿ ಹೇಗೆ ಪರ್ಫಾಮೆನ್ಸ್ ನೀಡ್ತಾಳೆ. ಕೊಡೋ ಟಾಸ್ಕ್‌ಗಳನ್ನ ಸರಿಯಾಗಿ ನಿಭಾಯಿಸ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಮತ್ತೊಂದ್ಕಡೆ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ ಕೂಡ ಭಾಗವಹಿಸಿದ್ದಾರೆ. ಸುಷ್ಮಾ ಹನುಮಂತು ಹಾಗೂ ಕರಿಬಸಪ್ಪ ಅವರನ್ನ ವೇದಿಕೆ ಕರೆದಿದ್ದಾರೆ. ಬಳಿಕ ಅಣ್ಣ ಬಾಡಿ ಬಿಲ್ಡರ್.. ನಿನ್ನ ಬಾಡಿ ನೋಡ್ಬೇಕು ಎಂದು ಹೇಳುತ್ತಿದ್ದಂತೆ ಹನುಮಂತ ಶಾಕ್ ಆಗಿದ್ದಾರೆ. ಬಳಿಕ ಕರಿಬಸಪ್ಪ ಹೇಳಿದಂತೆ ಮಾಡಿದ್ದಾರೆ. ಬಳಿಕ ಹನುಮಂತ ತನ್ನದೇ ಸ್ಟೈಲ್‌ನಲ್ಲಿ ಕರಿಬಸಪ್ಪಗೆ ಕೌಂಟರ್ ಕೊಟ್ಟಿದ್ದಾರೆ. ಇದು ವೀಕ್ಷಕರಿಗೆ ಸಖತ್ ಇಷ್ಟವಾಗಿದೆ. ಸೀಸನ್‌ನಲ್ಲಿ ಚಾನ್ಸ್ ಒಟ್ಟಾರೆ ಮೊದಲ ಸಂಚಿಕೆಯೇ ವೀಕ್ಷಕರಿಗೆ ಇಷ್ಟವಾಗಿದೆ.

ನೋಡಿರಿ

