ಬುಮ್ರಾ ಸ್ಥಾನಕ್ಕೆ ನಬಿ ಅನ್‌ಫಿಟ್ – RO-KOಗೆ ಸಚಿನ್ ಟಕ್ಕರ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ನಾಯಕ ಶುಭ್ಮನ್ ಗಿಲ್ ಅಭ್ಯಾಸದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ನಂತರ, ನಾಯಕ ಗಿಲ್ ಇತರ ಆಟಗಾರರೊಂದಿಗೆ ಸ್ಲಿಪ್ ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದ್ದಾಗ, ಚೆಂಡು ಅವರ ಗಾಯಗೊಂಡ ಹೆಬ್ಬೆರಳಿಗೆ ತಗುಲಿದೆ. ಗಾಯಗೊಂಡಿದ್ರಿಂದ ಇಂದಿನ ಅಭ್ಯಾಸ ಪಂದ್ಯದಲ್ಲಿ ಗಿಲ್ ಕಾಣಿಸಿಕೊಂಡಿಲ್ಲ.
ನಾಯಕ ಗಿಲ್ ಗಾಯಗೊಂಡಿದ್ರಿಂದ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಕ್ಕೆ ಗಿಲ್ ಅಲಭ್ಯ ಆಗಿದ್ರಿಂದ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಆಗಸ್ಟ್ 15ರಿಂದ ಲಂಕಾ ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದ್ದು, ಒಂದು ವೇಳೆ ಈ ಪಂದ್ಯಕ್ಕೆ ಗಿಲ್ ಗುಣಮುಖರಾಗಿಲ್ಲ ಅಂದ್ರೆ, ಕೆಎಲ್ ನಾಯಕತ್ವದಲ್ಲೇ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ರಣಜಿ ಆಡದೇ ಕೆಟ್ರಾ ಭುವನೇಶ್ವರ್ ಕುಮಾರ್ – 10 ಓವರ್ ಬೌಲಿಂಗ್, ಫೀಲ್ಡಿಂಗ್ ಕಷ್ಟನಾ?
ಟೀಂ ಇಂಡಿಯಾದ ಜೊತೆಗೆ ಶ್ರೀಲಂಕಾ ಕೂಡ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ ಪ್ರಸ್ತುತ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಕುಸಲ್ ಮೆಂಡಿಸ್, ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಗಾಲೆ ಟೆಸ್ಟ್‌ನಿಂದ ಅವರನ್ನು ಹೊರಗಿಡುವುದು ಬಹುತೇಕ ಖಚಿತವಾಗಿದೆ.
ಬಿಸಿಸಿಐ ಸೆಲೆಕ್ಟರ್ ಅಜಿತ್ ಅಗರ್ಕರ್ ಹಾಗೂ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಮಾಜಿ ಟೆಸ್ಟ್ ಆರಂಭಿಕ ವಾಸೀಮ್ ಜಾಫರ್ ಕಿಡಿಕಾರಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಾಳು ಜಸ್‌ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಆಕಿಬ್ ನಬಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಬುಮ್ರಾ ಅವರ ಬದಲಿಯಾಗಿ ಆಕಿಬ್ ನಬಿ ಆಯ್ಕೆಯಾಗುವಷ್ಟು ಅರ್ಹತೆ ಇನ್ನೂ ಗಳಿಸಿಲ್ಲ ಎಂದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಆಟಗಾರರ ಪದೇ ಪದೇ ಗಾಯದ ಸಮಸ್ಯೆಯಿಂದಾಗಿ, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ವೈದ್ಯಕೀಯ ತಂಡವು ಫಿಟ್ನೆಸ್ ಪರೀಕ್ಷೆಯನ್ನು ಕಠಿಣಗೊಳಿಸಿದೆ. ಯೋ-ಯೋ ಟೆಸ್ಟ್ ಬದಲು ಬ್ರಾಂಕೋ ಪರೀಕ್ಷೆ ಸೇರಿದಂತೆ ಹೊಸ ಮಾನದಂಡಗಳನ್ನು ಪರಿಚಯಿಸಲಾಗಿದ್ದು, ಹಿರಿಯ ಆಟಗಾರರಿಗಿದ್ದ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ. ಇನ್ನು ಮುಂದೆ ಎಲ್ಲಾ ಆಟಗಾರರರಿಗೂ ಏಕರೂಪದ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಗೊತ್ತಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ 2026ರ ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ ಪ್ರಕಟಿಸಿದೆ. ಆಗಸ್ಟ್ 28ರಂದು ಆರಂಭವಾಗುವ ಈ ಪಂದ್ಯಾವಳಿ ದುಬೈನಲ್ಲಿ ಸೆಪ್ಟೆಂಬರ್ 13ರಂದು ಮುಕ್ತಾಯಗೊಳ್ಳಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 5ರಂದು ಮುಖಾಮುಖಿಯಾಗಲಿವೆ. ಒಟ್ಟು 8 ತಂಡಗಳು ಭಾಗವಹಿಸಲಿವೆ
ಸಚಿನ್ ತೆಂಡೂಲ್ಕರ್ 1,189 ಕೋಟಿ ರೂಪಾಯಿ ಮೌಲ್ಯದೊಂದಿಗೆ ದೇಶದ ಅಗ್ರ ಐದು ಸೆಲೆಬ್ರಿಟಿ ಬ್ರಾಂಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ನಿವೃತ್ತ ಕ್ರೀಡಾಪಟುಗಳ ಪೈಕಿ, ಭಾರತದ ಅಗ್ರ 10 ಸೆಲೆಬ್ರಿಟಿ ಬ್ರಾಂಡ್‌ಗಳ ಪಟ್ಟಿಯಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿರುವ ಏಕೈಕ ವ್ಯಕ್ತಿ ಇವರಾಗಿದ್ದು, ಇವರ ಬ್ರಾಂಡ್ ಮೌಲ್ಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
2027ರ ಐಪಿಎಲ್‌ನಲ್ಲಿ ಮುಂಬೈ ಆಟಗಾರ ಹಾರ್ದಿಕ್ ಪಾಂಡ್ಯ ಯಾವ ಫಾಂಚೈಸಿ ಸೆರ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆದು ಐಪಿಎಲ್ 2027 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕರಾಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಇಂಗ್ಲೆಂಡ್‌ನ ಸ್ಟಾರ್ ವೇಗದ ಬೌಲರ್ ಜಾನ್ ಟರ್ನರ್ ಕೇವಲ 25 ವರ್ಷ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿದ್ದಾರೆ. ಬೆನ್ನಿನ ಗಾಯದಿಂದಾಗಿ ಕಳೆದ ವರ್ಷ ಜೂನ್‌ನಿಂದ ಅವರು ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ನಿರಂತರ ಗಾಯದಿಂದ ರೋಸಿ ಹೋದ ಅವರು ಕ್ರಿಕೆಟ್ಗೆ ಗುಡ್ಬೈ ಹೇಳುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಬಾಂಗ್ಲಾದೇಶದ ಕ್ರಿಕೆಟ್ ದಂತಕಥೆ ಹಾಗೂ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮಗುರಾದಲ್ಲಿರುವ ನಿವಾಸದ ಮೇಲೆ ಇತ್ತೀಚೆಗೆ ಪೆಟ್ರೋಲ್ ಬಾಂಬ್ ದಾಳಿ ಮತ್ತು ಕಲ್ಲು ತೂರಾಟ ನಡೆದಿದೆ. ಭಾರತದ ದೆಹಲಿಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ನಡೆಸಿದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಶಕೀಬ್ ಭಾಗವಹಿಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.

ನೋಡಿರಿ

