ಕುಂದಾಪುರದಲ್ಲಿ ನಡೆದ ಕೊಲೆಯ ಕಾರಣ ರಿವೀಲ್ – ಸಿಗಡಿ ವಿಚಾರಕ್ಕೆ ನಡೀತಾ ಫೈ*ರಿಂಗ್?

ಕುಂದಾಪುರದಲ್ಲಿ ನಡೆದ ಕೊಲೆಯ ಕಾರಣ ರಿವೀಲ್ – ಸಿಗಡಿ ವಿಚಾರಕ್ಕೆ ನಡೀತಾ ಫೈ*ರಿಂಗ್?

ಕುಂದಾಪುರದಲ್ಲಿ ನಡೆದ ಕೊಲೆಗೆ ಕಾರಣವೇನು ಅನ್ನೋ ವಿಚಾರ ಈಗ ರಿವೀಲ್ ಆಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮನಸ್ತಾಪದ ಹಿನ್ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಫೈರಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಒಂದು ಚಿಕ್ಕ ವಿಚಾರಕ್ಕೆ ಕೊಲೆ ಮಾಡಿದ್ದು, ಎಷ್ಟು ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ.

ಇದನ್ನೂ ಓದಿ: ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್ – ಚರ್ಚ್ ಎದುರೇ ಗುಂಡಿಕ್ಕಿ ಹ*ತ್ಯೆ ಮಾಡಿದ ಪಾಪಿ

ಪೊಲೀಸರ ಮಾಹಿತಿ ಪ್ರಕಾರ, ಜುಲೈ 30ರಂದು ರಾತ್ರಿ 11:45ಕ್ಕೆ ಡೆರಿಕ್‌ ಎಂಬಾತ ಐವನ್‌ಗೆ ಕರೆ ಮಾಡಿ, ಚಟ್ಲಿ ವಿಚಾರದಲ್ಲಿ ಬಾಕಿ ಹಣ ವಸೂಲಿಗೆ ಮಧ್ಯಸ್ಥಿಕೆ ವಹಿಸುವ ಬಗ್ಗೆ ಮಾತನಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ.

ನಿನ್ನೆ ರಾತ್ರಿ  ಐವನ್‌ರ ಪೋನ್‌ಗೆ  ಡೆರಿಕ್‌ ಲೋಕೆಶನ್‌ ಕಳುಹಿಸಿದ್ದಾನೆ.   ಲೋಕೆಶನ್‌  ಕಳುಹಿಸಿದ್ದ ಚರ್ಚ್‌ ರಸ್ತೆಯ ಹೋಲಿ ರೋಸಾರಿಯ ಚರ್ಚಿನ ಎದುರು ಇರುವ ಕಾಂಕ್ರೇಟ್‌ ರಸ್ತೆಯಲ್ಲಿ ಐವನ್ ರಿಚರ್ಡ್  ಕಾರನ್ನು ನಿಲ್ಲಿಸಿಕೊಂಡಿದ್ದ. ಈ ವೇಳೆ  ಅಂದ್ರೆ ಇಂದು ಬೆಳಗ್ಗೆ  3:15 ಗಂಟೆಯ ಸಮಯಕ್ಕೆ ಅಲ್ಲಿಗೆ ಥಾರ್‌ ಕಾರಿನಲ್ಲಿ ಡೆರಿಕ್‌ ಬಂದಿದ್ದಾನೆ. ಈ ವೇಳೆ ಐವನ್‌  ಕಾರಿನಿಂದ ಇಳಿದಾಗ, ಡೆರಿಕ್‌ ಕೈಯಲ್ಲಿ ಹಿಡಿದು ತಂದಿದ್ದ ಒಂದು ಗನ್‌ ನಿಂದ ಸೊಂಟದ ಕೆಳ ಭಾಗಕ್ಕೆ ಶೂಟ್‌ ಮಾಡಿ ಮಾಡಿ ಎಸ್ಕೇಪ್ ಆಗಿದ್ದಾನೆ. ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವ ಆಗಿ ರಸ್ತೆಯಲ್ಲೆ ಕುಸಿದು ಬಿದ್ದು,  ತೀವೃ ರಕ್ತಸ್ರಾವ ಆಗಿದ್ರಿಂದ ಸ್ಥಳದಲ್ಲೆ ಐವನ್ ಮೃತಪಟ್ಟಿದ್ದಾನೆ. ಇನ್ನೂ ಆರೋಪಿ ರಿಚರ್ಡ್‌ ಪತ್ತೆಗೆ ಬಲೆ ಬೀಸಲಾಗಿದೆ.

Kishor KV