ಅತಂತ್ರ ಫಲಿತಾಂಶ ಬಂದ್ರೆ ಕಾಂಗ್ರೆಸ್ ಗೆ ಕುಮಾರಸ್ವಾಮಿ ಬೆಂಬಲ ಕೊಡ್ತಾರೆ – ಸತೀಶ್ ಜಾರಕಿಹೊಳಿ ವಿಶ್ವಾಸ!

ಅತಂತ್ರ ಫಲಿತಾಂಶ ಬಂದ್ರೆ ಕಾಂಗ್ರೆಸ್ ಗೆ ಕುಮಾರಸ್ವಾಮಿ ಬೆಂಬಲ ಕೊಡ್ತಾರೆ – ಸತೀಶ್ ಜಾರಕಿಹೊಳಿ ವಿಶ್ವಾಸ!

ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ & ಬಿಜೆಪಿ ಪಕ್ಷಗಳು ನಮಗೇ ಬಹುಮತ ಎನ್ನುತ್ತಿವೆ. ಆದ್ರೆ ಇದೆಲ್ಲವನ್ನೂ ಸೈಲೆಂಟಾಗೇ ನೋಡುತ್ತಿರುವ ಜೆಡಿಎಸ್ ಮಾತ್ರ ನಾವೇ ಕಿಂಗ್ ಮೇಕರ್ ಆಗೋದು ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಹೀಗಾಗೇ ಹೆಚ್ ಡಿ ಕುಮಾರಸ್ವಾಮಿ ನಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮೈತ್ರಿ ಸರ್ಕಾರಕ್ಕೆ ಸಿದ್ಧ ಅಂತಾನೂ ಹೇಳಿದ್ದಾರೆ.

ಇದನ್ನೂ ಓದಿ : ಆಪರೇಷನ್ ಕಮಲದ ಭೀತಿ – ಗೆದ್ದ ತಕ್ಷಣವೇ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬರುವಂತೆ ಸೂಚನೆ

ಈ ನಡುವೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಲು ಹೆಚ್‌ಡಿ ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎಂದಿದ್ದಾರೆ. ಅತಂತ್ರ ವಿಧಾನಸಭೆ ಸಾಧ್ಯತೆ ಇಲ್ಲ. ಒಂದು ವೇಳೆ, ಹಾಗಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಅದಕ್ಕೆ ಕುಮಾರಸ್ವಾಮಿ ಬೆಂಬಲ ನೀಡಲಿದ್ದಾರೆ ಎಂದಿದ್ದಾರೆ.

ಬಿಜೆಪಿ 80 ಸ್ಥಾನಗಳನ್ನು ದಾಟುವುದಿಲ್ಲ ಮತ್ತು ಆದ್ದರಿಂದ ‘ಆಪರೇಷನ್ ಕಮಲ’ ಹಗಲುಗನಸು. ಅವರಿಗೆ ಕನಿಷ್ಠ 35-40 ಸೀಟುಗಳು ಬೇಕಾಗುತ್ತವೆ. ಅಂಥ ಪರಿಸ್ಥಿತಿಯಲ್ಲಿ ‘ಆಪರೇಷನ್ ಕಮಲ’ ವನ್ನು ಕಾರ್ಯಗತಗೊಳಿಸುವುದು ಅಸಾಧ್ಯ. ಅವರು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ‘ಆಪರೇಷನ್ ಕಮಲ’ ಯಾವಾಗಲೂ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.

suddiyaana