ದಾಖಲೆ ಕೊಡುತ್ತೇನೆ ತನಿಖೆ ಮಾಡೋ ಧಮ್ ನಿಮಗೆ ಇದ್ಯಾ ಎಂದ ಹೆಚ್‌ಡಿಕೆ – ಪಾಪ ಬೇಸರದಲ್ಲಿ ಇದ್ದಾರೆ ಎಂದು ಡಿಕೆಶಿ ತಿರುಗೇಟು!

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸು ತಂದರೆ ಸಾಲದು. 30 ಲಕ್ಷ ರೂಪಾಯಿ ಕೊಡಬೇಕು ಎಂದು ಆರೋಪ ಮಾಡಿದ್ದರು. ಈ ಹೇಳಿಕೆಗೆ ಹೆಚ್‌ಡಿಕೆ ದಾಖಲೆ ಕೊಟ್ಟು ಆರೋಪ ಮಾಡಲಿ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದರು. ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೆಚ್.ಡಿ ಕುಮಾರಸ್ವಾಮಿ ‘ಕಾಂಗ್ರೆಸ್ನವರ ಯೋಗ್ಯತೆಗೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಯಾವುದೇ ಒಂದೇ ಒಂದು ದಾಖಲೆ ನೀಡಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: 5 ರಾಜ್ಯಗಳಿಗೆ ಬಿಜೆಪಿ ನೂತನ ಅಧ್ಯಕ್ಷರ ನೇಮಕ – ಕರ್ನಾಟಕದಲ್ಲಿ ಮಹಿಳೆಗೆ ಮಣೆ ಹಾಕುತ್ತಾ ಹೈಕಮಾಂಡ್?
ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ‘ಬಿಜೆಪಿ ಸರ್ಕಾರದ ವಿರುದ್ಧ 2 ವರ್ಷ ಆರೋಪ ಮಾಡಿ, ಪ್ರತಿದಿನ ತನಿಖೆ ತನಿಖೆ ಎಂದು ಗುಮ್ಮ ತೋರಿಸುತ್ತಿದ್ದರು. ದಾಖಲೆ ಕೊಡುತ್ತೇನೆ ತನಿಖೆ ಮಾಡೋ ಧಮ್ ನಿಮಗೆ ಇದೆಯಾ?, ನನ್ನ ಕಾಲದಲ್ಲಿ ನಡೆದ ವರ್ಗಾವಣೆ ಬಗ್ಗೆಯೂ ತನಿಖೆ ಮಾಡಲಿ, ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಿಗೆ ಕಾಂಗ್ರೆಸ್ನವರು ಹಗಲು ದರೋಡೆಗೆ ಇಳಿದ್ದಾರೆ. ವರ್ಗಾವಣೆ ದಂಧೆಗೆ ಎಷ್ಟು ಹಣ ನಿಗದಿ ಮಾಡಿದ್ದೀರೆಂದು ಗೊತ್ತಿದೆ. ಟೈಮ್ ಬಂದಾಗ ದಾಖಲೆ ಕೊಡುವೆ, ಸದನದಲ್ಲೇ ದಾಖಲೆ ನೀಡುವೆ, ನಾನು ನೀಡುವ ದಾಖಲೆ ನೋಡಿ ಆ ಸಚಿವರನ್ನ ಸಂಪುಟದಿಂದ ವಜಾ ಮಾಡುತ್ತೀರಾ ಎಂದು ಸವಾಲು ಹಾಕಿದ್ದಾರೆ. ಇನ್ನು ಸಿಎಂ ವಿಚಾರ ‘ಕೆಲವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಆದರೆ ಈಗಾಗಲೇ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರೆ. ನೋಡೋಣ ಎಷ್ಟು ದಿನ ಇರುತ್ತೆ ಈ ಸರ್ಕಾರ ಎಂದು ಟಾಂಗ್ ಕೊಟ್ಟಿದ್ದಾರೆ. ಹೆಚ್‌ಡಿಕೆ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಮಾತನಾಡಿದ್ದ ಎಂದು ಹೇಳಿದ್ದಾರೆ.
ಹೆಚ್‌ಡಿಕೆ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಚುನಾವಣೆಯಲ್ಲಿ ಕಡಿಮೆ ನಂಬರ್ ಬಂದಿದೆ ಎಂಬ ಬೇಸರದಲ್ಲಿ ಕುಮಾರಸ್ವಾಮಿಯವರು ಹೀಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ಮಾತುಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದುದು. ಸರ್ಕಾರದ ಯಾವುದೇ ಕಚೇರಿಯಲ್ಲಿ ಹಣ ಪಡೆದು ಕೆಲಸ ನೀಡಲಾಗುತ್ತಿಲ್ಲ. ಅವರ ಬಳಿ ದಾಖಲೆ ಇದ್ದರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಿ ತನಿಖೆ ಮಾಡಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶವಿದೆ ಎಂದರು.

ನೋಡಿರಿ

