‘ಮಕ್ಕಳಂತೆ ಹಠ ಮಾಡ್ತಾರೆ ಕುಮಾರಸ್ವಾಮಿ, ಊಟ ಸರಿ ಮಾಡಲ್ಲ’ –ಪತ್ನಿ ಅನಿತಾ ಕಂಪ್ಲೇಂಟ್..!

‘ಮಕ್ಕಳಂತೆ ಹಠ ಮಾಡ್ತಾರೆ ಕುಮಾರಸ್ವಾಮಿ, ಊಟ ಸರಿ ಮಾಡಲ್ಲ’ –ಪತ್ನಿ ಅನಿತಾ ಕಂಪ್ಲೇಂಟ್..!

ಹೆಚ್.ಡಿ ಕುಮಾರಸ್ವಾಮಿ ಮಕ್ಕಳಂತೆ ಹಠ ಮಾಡುತ್ತಾರೆ. ಸರಿಯಾಗಿ ಊಟವನ್ನೇ ಮಾಡುವುದಿಲ್ಲ ಎಂದು ಪತ್ನಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಹೆಚ್. ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಕೇಳಿದಾಗ ಅನಿತಾ ತನ್ನ ಗಂಡನ ಬಗ್ಗೆ ಈ ರೀತಿಯಾಗಿ ವಿವರಿಸಿದ್ದಾರೆ. ಇದರ ಜೊತೆಗೆ ಗಂಡನ ಅನಾರೋಗ್ಯದಿಂದಾಗಿ ತಾನೇ ಖುದ್ದಾಗಿ ಪ್ರಚಾರದ ಅಖಾಡಕ್ಕೂ ಅನಿತಾ ಕುಮಾರಸ್ವಾಮಿ ಎಂಟ್ರಿ ನೀಡಿದ್ದಾರೆ.

ಇದನ್ನೂ ಓದಿ:  ಹೆಚ್.ಡಿ ಕುಮಾರಸ್ವಾಮಿಯೇ ಸಿಎಂ..! – ಭವಿಷ್ಯ ನುಡಿದ ಭೈರವ ಹೆಸರಿನ ಶ್ವಾನ..!

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪರ ಮತಯಾಚನೆಗೆ ಬಂದಿದ್ದ, ಅನಿತಾ ಕುಮಾರಸ್ವಾಮಿ ತನ್ನ ಗಂಡನ ಬಗ್ಗೆ ಕೆಲ ವಿಚಾರವನ್ನು ಬಿಟ್ಟು ಕೊಟ್ಟರು. ‘ಅವರಿಗೆ ಸ್ವಲ್ಪ ಆಯಾಸ ಆಗಿತ್ತು. ಹಾಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗ ಚೇತರಿಸಿಕೊಂಡಿದ್ದಾರೆ’ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅನಿತಾ ಕುಮಾರಸ್ವಾಮಿ,  ‘ನಾನು ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡ್ತಿದ್ದೇನೆ. ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಜನ ಕೂಡಾ ಬುದ್ಧಿವಂತರಿದ್ದಾರೆ. ಅವರು ಕುಮಾರಸ್ವಾಮಿ ಅವರನ್ನ ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಕ್ಯಾಂಡಿಡೇಟ್. ಹಾಗಾಗಿ ಅವರು ಗೆದ್ದರೆ, ಕ್ಷೇತ್ರಕ್ಕೆ ಅನುದಾನ ಸಿಗುತ್ತೆ. ಅದನ್ನು ಮನಗಂಡಿರುವ ಕ್ಷೇತ್ರದ ಮತದಾರರು ಕುಮಾರಸ್ವಾಮಿಯವರಿಗೆ ಮತ್ತೊಮ್ಮೆ ಅವಕಾಶ ಕೊಡ್ತಾರೆ’ ಎಂದು ಹೇಳಿದ್ದಾರೆ.

suddiyaana