ಕುಮಾರ ಪರ್ವತ ಚಾರಣಕ್ಕೆ ಕಡಿವಾಣ – ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ!

ಕುಮಾರ ಪರ್ವತ ಚಾರಣಕ್ಕೆ ಕಡಿವಾಣ – ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆ!

ವೀಕೆಂಡ್‌ ಬಂದ್ರೆ ಸಾಕು ಅನೇಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡ್ತಾರೆ. ಶನಿವಾರ ಹಾಗೂ ಭಾನುವಾರ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿರುತ್ತದೆ. ಅದ್ರಲ್ಲೂ ಈಗೀಗ ಸಂರಕ್ಷಿತಾರಣ್ಯಗಳು ಪ್ರವಾಸಿತಾಣಗಳಾಗಿ ಬದಲಾಗಿ ಬಿಡುತ್ತಿದೆ. ಈ ಬೆಳವಣಿಗೆ ಪ್ರಕೃತಿಯ ಮೇಲೆ ಘೋರ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಚಾರಣ ಪ್ರದೇಶ ಕುಮಾರ ಪರ್ವತಕ್ಕೆ ಚಾರಣಿಗರ ಎಂಟ್ರಿಗೆ ನಿಷೇಧ ವಿಧಿಸಲಾಗಿದೆ. ಆದೇಶ ಉಲ್ಲಂಘಿಸಿದ್ರೆ ಅರಣ್ಯ ಇಲಾಖೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: ಕಟೀಲ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ NSUI ಕಾರ್ಯಕರ್ತರು – ʼನಳಿನ್‌ ಹಠಾವೋ.. ದೇಶ್‌ ಬಚಾವೋ..ʼ ಎಂಬ ಘೋಷಣೆ ಕೂಗಿ ಆಕ್ರೋಶ

ಹೌದು, ಕುಮಾರ ಪರ್ವತ ಚಾರಣಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯೊಳಗೆ ಬರುವ ಈ ಕುಮಾರ ಪರ್ವತ ಹತ್ತೋದಕ್ಕೆ ಸಾಕಷ್ಟು ಜನ ಚಾರಣಿಗರು ಬರ್ತಾರೆ.ಲಾಂಗ್‌ ವಿಕೇಂಡ್‌ ಸಮಯದಲ್ಲಿ ಚಾರಣಿಗರು ಬಂಡೆಗಳ ಕಡಿದಾದ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾರೆ.  ಲಾಂಗ್‌ ವೀಕೆಂಡ್‌ಗಳಲ್ಲಿ ಸುಮಾರು 400 ರಿಂದ 500 ಮಂದಿ ಭೇಟಿ ನೀಡುತ್ತಿದ್ದ ಈ ಪರ್ವತಕ್ಕೆ ವಾರಗಳ ಹಿಂದೆ ಸುಬ್ರಹ್ಮಣ್ಯದ ಮೂಲಕ ಸಾವಿರಾರು ಮಂದಿ ದಾಂಗುಡಿಯಿಟ್ಟಿದ್ದರು. ಇದರಿಂದ ಟಿಕೆಟ್‌ ಕೌಂಟರ್‌ನಲ್ಲಿ ನೂಕು ನುಗ್ಗಲು ಉಂಟಾದ ವೀಡಿಯೋ ವೈರಲ್‌ ಆಗಿತ್ತು. ಇದನ್ನು ನೋಡಿ ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ಬಂದು ರಾಜ್ಯದ ಎಲ್ಲಾ ಟ್ರಕ್ಕಿಂಗ್‌ ಪಾಯಿಂಟ್‌ಗಳಲ್ಲಿಯೂ ಎಸ್‌ಒಪಿ ರೂಪಿಸುವ ಅಗತ್ಯವಿದ್ದು, ಅಲ್ಲಿಯವರೆಗೂ ಅನ್‌ಲೈನ್‌ ಬುಕ್ಕಿಂಗ್‌ ಇಲ್ಲದ ತಾಣಗಳಲ್ಲಿ ಟ್ರಕ್ಕಿಂಗ್‌ ನಿರ್ಬಂಧಿಸುವಂತೆ ಸೂಚಿಸಿದ್ದರು. ಅದರಂತೆ ಇದೀಗ ಕುಮಾರ ಪರ್ವತ ಪ್ರವೇಶ ಸ್ಥಳದಲ್ಲೂ ಅರಣ್ಯ ಇಲಾಖೆ ಪ್ರವಾಸಿಗರ ಎಂಟ್ರಿಗೆ ನಿರ್ಬಂಧ ವಿಧಿಸಿರುವ ಬ್ಯಾನರ್ ಅಳವಡಿಸಿದೆ. ಆದೇಶ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

ಕುಮಾರ ಪರ್ವತ ಸಮುದ್ರ ಮಟ್ಟದಿಂದ ಸುಮಾರು 5,615 ಅಡಿ ಎತ್ತರದಲ್ಲಿದೆ. ದಕ್ಷಿಣ ಕನ್ನಡ, ಕೊಡಗು, ಹಾಸನ ಈ ಮೂರು ಜಿಲ್ಲೆಯ ಕಡೆಗಳಿಂದಲೂ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಆದ್ರೆ ಹೆಚ್ಚಿನ ಮಂದಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಬದಿಯಿಂದ ಚಾರಣ ಆರಂಭಿಸುತ್ತಾರೆ. ಸುಬ್ರಹ್ಮಣ್ಯದಿಂದ ಕುಮಾರಪರ್ವಕ್ಕೆ ಟ್ರೆಕ್ಕಿಂಗ್ ಮಾಡಲು ಇರುವ ನಡಿಗೆಯ ದೂರ 12 ಕಿ.ಮೀ. ಸದ್ಯ ಕುಮಾರ ಪರ್ವತ ಟ್ರೆಕ್ಕಿಂಗ್ ಆರಂಭಿಸುತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಲ್ಲಿ ಅರಣ್ಯ, ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿರುವುದರಿಂದ ಈ ಅವಧಿಯಲ್ಲಿ ವನ್ಯಧಾಮದೊಳಗೆ ಸಾರ್ವಜನಿಕರು ಪ್ರವೇಶಿಸಿ ಚಟುವಟಿಕೆ ನಡೆಸಿದರೆ ವನ್ಯಧಾಮಕ್ಕೆ ಬೆಂಕಿ ಬೀಳುವ ಸಾಧ್ಯತೆ ಮತ್ತು ಚಾರಣಿಗರಿಗೂ ಅಪಾಯ ಇದೆ ಎಂಬ ಕಾರಣಕ್ಕಾಗಿ ಪ್ರವಾಸಿಗರಿಗೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. ಮುಂದೆ ದಿನವೊಂದಕ್ಕೆ ಎಷ್ಟು ಮಂದಿಗೆ ಟ್ರೆಕ್ಕಿಂಗ್ ಅವಕಾಶ ನೀಡಬಹುದು, ಏನೇನು ಕ್ರಮ ವಹಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ಆನ್‌ಲೈನ್ ಮೂಲಕವೇ ಟಿಕೇಟ್ ನೀಡುವ ವ್ಯವಸ್ಥೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

Shwetha M