ಆಂಗ್ಲರ ಜೊತೆ ಅಂಪೈರ್ ಡೀಲ್? – ಸಿಗ್ನಲ್ ಕೊಟ್ಟು DRS ತಡೆದ್ರಾ?
ಧರ್ಮಸೇನಾ ಕಳ್ಳಾಟಕ್ಕೆ ಶಿಕ್ಷೆಯಾಗುತ್ತಾ?

ಆಂಗ್ಲರ ಜೊತೆ ಅಂಪೈರ್ ಡೀಲ್? – ಸಿಗ್ನಲ್ ಕೊಟ್ಟು DRS ತಡೆದ್ರಾ?ಧರ್ಮಸೇನಾ ಕಳ್ಳಾಟಕ್ಕೆ ಶಿಕ್ಷೆಯಾಗುತ್ತಾ?

ಕೆನ್ನಿಂಗ್ಟನ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರೋ ಪಂದ್ಯ ಎಷ್ಟು ಕ್ರೂಶಿಯಲ್ ಅನ್ನೋದು ಎರಡೂ ತಂಡಗಳಿಗೂ ಗೊತ್ತಿದೆ. ಮ್ಯಾಚ್ ಡ್ರಾ ಆದ್ರೆ, ಅಥವಾ ಯಾರೇ ಗೆದ್ದು ಯಾರೇ ಸೋತ್ರೂ ಬೇರೆ ಬೇರೆ ರಿಸಲ್ಟ್ ಬರುತ್ತೆ. ಈಗಾಗ್ಲೇ ಎರಡು ಮ್ಯಾಚ್ ಗೆದ್ದು ಸರಣಿ ಲೀಡ್​ನಲ್ಲಿರೋ ಇಂಗ್ಲೆಂಡ್​ ಐದನೇ ಪಂದ್ಯವನ್ನ ಅಟ್​ಲೀಸ್ಟ್ ಡ್ರಾ ಮಾಡಿಯಾದ್ರೂ ಸರಣಿ ಕೈವಶ ಮಾಡಿಕೊಳ್ಳೋ ಪ್ಲ್ಯಾನ್​ನಲ್ಲಿದ್ದಾರೆ. ಇನ್ನು ಗುರುವಾರದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳನ್ನ ಕಳ್ಕೊಂಡು 204 ರನ್ ​ಗಳಿಸಿದೆ. ಸದ್ಯ ಕರುಣ್ ನಾಯರ್ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಬಟ್ ಎರಡನೇ ದಿನದಾಟಕ್ಕೂ ಮುನ್ನ ಅಂಪೈರ್ ಕೊಟ್ಟ ಅದೊಂದು ಸಿಗ್ನಲ್ ಹಲ್​ಚಲ್ ಸೃಷ್ಟಿಸಿದೆ.

ಇದನ್ನೂ ಓದಿ : ಭಾರತದಿಂದ PAKಗೆ ಫೈನಲ್ ಭಿಕ್ಷೆ – ಶತ್ರುಗಳ ಜೊತೆ ಸೆಮಿ ಆಡದ IND

ಮೊದಲ ದಿನದ ಮೊದಲ ಸೆಷನ್​ನಲ್ಲಿ ಫೀಲ್ಡ್ ಅಂಪೈರ್ ಧರ್ಮಸೇನಾರ ವರ್ತನೆ ವಿವಾದಕ್ಕೆ ಕಾರಣ ಆಗಿದೆ.  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದು ಐಸಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಜೋರಾಗ್ತಿದೆ. ಆಗಿದ್ದೇನಂದ್ರೆ ಶ್ರೀಲಂಕಾದ ಅಂಪೈರ್ ಕುಮಾರ ಧರ್ಮಸೇನ ಭಾರತೀಯ ಇನ್ನಿಂಗ್ಸ್‌ನ 13 ನೇ ಓವರ್‌ ಬೌಲ್ ಮಾಡಿದ ಜೋಶ್ ಟಂಗ್ ಫುಲ್-ಟಾಸ್ ಚೆಂಡನ್ನು ಎಸೆದರು. ಸ್ಟ್ರೈಕ್​ನಲ್ಲಿದ್ದ ಸಾಯಿ ಸುದರ್ಶನ್ ಈ ಎಸೆತವನ್ನು ಸರಿಯಾಗಿ ಜಡ್ಜ್ ಮಾಡಲಿಲ್ಲ. ಸ್ಲಿಪ್ ಆಗಿ ಕೆಳಕ್ಕೆ ಬಿದ್ರು. ಇತ್ತ ಇಂಗ್ಲೆಂಡ್‌ ಆಟಗಾರರು ಸುದರ್ಶನ್ ವಿರುದ್ಧ ಎಲ್‌ಬಿಡಬ್ಲ್ಯೂ ಎಂದು ಜೋರಾಗಿ ಕೂಗಿಕೊಂಡ್ರು. ಇಂಗ್ಲೆಂಡ್ ಆಟಗಾರರ ಮನವಿಯನ್ನು ತಿರಸ್ಕರಿಸಿದ ಧರ್ಮಸೇನ ನಾಟೌಟ್ ಎಂದು ತಲೆ ಅಳ್ಳಾಡಿಸಿದರು. ಧರ್ಮಸೇನ ಇಷ್ಟೇ ಮಾಡಿದ್ರೆ ಪ್ರಾಬ್ಲಂ ಏನೂ ಇರಲಿಲ್ಲ. ಆದರೆ ಆ ಬಳಿಕ ಧರ್ಮಸೇನ ಮಾಡಿದ್ದು, ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ.

ಅದೇನಂದ್ರೆ ಆ ಬಾಲ್ ನಲ್ಲಿ ಸಾಯಿ ಸುದರ್ಶನ್ ಸ್ಲಿಪ್ ಆಗಿ ಬಿದ್ರೂ ಕೂಡ ಔಟ್ ಆಗಿರಲಿಲ್ಲ. ಆದ್ರೆ ನಾಟ್ ಔಟ್ ಎಂದು ತೀರ್ಪು ನೀಡುವ ಟೈಮಲ್ಲಿ ಚೆಂಡು ಸುದರ್ಶನ್ ಪ್ಯಾಡ್‌ಗೆ ತಗಲುವ ಮೊದಲು ಬ್ಯಾಟ್‌ಗೆ ತಗುಲಿದೆ ಎಂದು ತಮ್ಮ ಕೈಬೆರಳುಗಳ ಮೂಲಕ ಮೂಲಕ ಸನ್ನೆ ಮಾಡಿ ತೋರಿಸಿದರು. ಇದನ್ನು ನೋಡಿದ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ಧರ್ಮಸೇನ ತಮ್ಮ ಕೈಸನ್ನೆಯ ಮೂಲಕ ಇಂಗ್ಲೆಂಡ್‌ ಆಟಗಾರರಿಗೆ ತೋರಿಸದೇ ಹೋಗಿದ್ರೆ ಇಂಗ್ಲೆಂಡ್ ಡಿಆರ್​ಎಸ್​ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತಿದ್ದವು. ಆದ್ರೆ ಸುದರ್ಶನ್ ಔಟ್ ಇಲ್ಲದೇ ಇದ್ದಿದ್ರಿಂದ ಇಂಗ್ಲೆಂಡ್‌ ಆಟಗಾರರು ಒಂದು ಡಿಆರ್​ಎಸ್ ಕಳೆದುಕೊಳ್ಳುತ್ತಿದ್ದರು. ಆದರೆ ಡಿಆರ್​ಎಸ್ ಟೈಮರ್ ಶುರುವಾಗುವುದಕ್ಕೂ ಮುನ್ನವೇ ಧರ್ಮಸೇನ ಕೈಸನ್ನೆಯ ಮೂಲಕ ಚೆಂಡು ಬ್ಯಾಟ್​ಗೆ ಬಡಿದಿದೆ ಎಂಬುದನ್ನು ತೋರಿಸಿದರಿಂದ ಇಂಗ್ಲೆಂಡ್‌ ನಾಯಕ ಡಿಆರ್​ಎಸ್ ತೆಗದುಕೊಳ್ಳಲಿಲ್ಲ. ಅಂಪೈರ್ ಆದವ್ರು ಅದ್ರಲ್ಲೂ ಆನ್ ಫೀಲ್ಡ್ ಅಂಪೈರ್ ಆದವ್ರು ಯಾವುದೇ ಟೀಂ ಫೇವರ್ ಆಗಿ ಆಗಿ ಕೆಲಸ ಮಾಡಬಾರದು. ಬಾಡಿ ಲಾಂಗ್ವೇಜ್ ಕೂಡ ಅಷ್ಟೇ ಇಂಪಾರ್ಟೆಂಟ್. ಅಂಪೈರ್​ಗಳಿಗೆಂದೇ ಕಟ್ಟುನಿಟ್ಟಿನ ನಿಯಮಗಳಿವೆ. ಅವರು ಮಾಡೋ ಒಂದೇ ಒಂದು ರೂಲ್ಸ್ ಬ್ರೇಕ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿಬಿಡಬಹುದು. ಇದೆಲ್ಲಾ ಗೊತ್ತಿದ್ರೂ ಧರ್ಮಸೇನಾ ಅವರು ಇಂಗ್ಲೆಂಡ್ ಆಟಗಾರರಿಗೆ ಅನುಕೂಲ ಆಗುವಂತೆ ನೋಡಿಕೊಂಡಿದ್ದಾರೆ. ಕ್ರಿಕೆಟ್ ವಿಶ್ಲೇಷಕರು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಕರ್ತವ್ಯದ ವೇಳೆ ಧರ್ಮಸೇನಾ ಮಾಡಿರೋ ತಪ್ಪು ಸಾಬೀತಾದ್ರೆ ಐಸಿಸಿಯಿಂದ ಶಿಕ್ಷೆಯಾಗೋ ಸಾಧ್ಯತೆ ಇದೆ.

Shantha Kumari