ಮದುವೆಗೆ ರಜೆ ಕೊಡಿ ಎಂದು ಬಿಸಿಸಿಐಗೆ ಕುಲ್ದೀಪ್ ಯಾದವ್ ಮನವಿ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಇದರ ಮಧ್ಯೆ ಕುಲ್ದೀಪ್ ಯಾದವ್ ಬಿಸಿಸಿಐಗೆ ರಜೆಗಾಗಿ ಅನುಮತಿ ಕೋರಿದ್ದಾರೆ. ಕುಲ್ದೀಪ್ ಯಾದವ್ ಅವರ ಮದುವೆ ನಿಶ್ಚಯವಾಗಿದ್ದು, ರಜೆಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ:IPL ಹರಾಜಿನಲ್ಲಿ UNSOLD ಸ್ಟಾರ್ಸ್ – ಟ್ಯಾಲೆಂಟ್ ಇದ್ರೂ ಅದೃಷ್ಟ ಕೈಕೊಡ್ತಾ?
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಡುವೆ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಬಿಸಿಸಿಐ ಬಳಿ ರಜೆ ಕೋರಿದ್ದಾರೆ. ರಜೆಗೆ ಅನುಮತಿ ಸಿಕ್ಕರೆ ಕುಲ್ದೀಪ್, ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಕುಲ್ದೀಪ್ ಅವರ ಮದುವೆ ಕಾರ್ಯಕ್ರಮಗಳು ನವೆಂಬರ್ ಕೊನೇ ವಾರದಲ್ಲಿ ನಡೆಯಲಿದೆ.
ಬಾಲ್ಯದ ಗೆಳತಿ ವಂಶಿಕಾ ಅವರನ್ನು ಕುಲ್ದೀಪ್ ವರಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐನಿಂದ ರಜೆಯ ಅನುಮತಿಗಾಗಿ ಕಾಯುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕುಲ್ದೀಪ್, ಇದೀಗ ಬಿಸಿಸಿಐನಿಂದ ಗ್ರೀನ್ ಸಿಗ್ನಲ್ಗಾಗಿ ಕಾಯುತಿದ್ದು, ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಕುಲ್ದೀಪ್ ಅವರ ವಿವಾಹ ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ. ತಂಡದ ಆಡಳಿತ ಮಂಡಳಿಯು ಅವರಿಗೆ ರಜೆಯನ್ನು ನೀಡುವ ಮೊದಲು ಅವರ ಸೇವೆಗಳು ಯಾವಾಗ ಬೇಕಾಗುತ್ತವೆ ಎಂಬುದನ್ನು ನಿರ್ಣಯಿಸುತ್ತದೆ ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ವರದಿ ತಿಳಿಸಿದೆ. ನವೆಂಬರ್ ಕೊನೆಯ ವಾರದಲ್ಲಿ ವಿವಾಹ ನಡೆಯುವುತ್ತಿರುವದರಿಂದ ಕುಲ್ದೀಪ್ ಕುಟುಂಬ ಮದುವೆಗೆ ಭರದ ಸಿದ್ಧತೆ ನಡೆಸುತ್ತಿದೆ.

ನೋಡಿರಿ

