ಆಸೀಸ್ ವಿರುದ್ಧ ಕಣಕ್ಕಿಳಿದ ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ – 3ನೇ ಪಂದ್ಯದಲ್ಲಾದರೂ ಪಾಠ ಕಲಿಯುತ್ತಾ ಭಾರತ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್. ಟಾಸ್ ಸೋತ ಟೀಮ್ ಇಂಡಿಯಾವನ್ನು ಬೌಲಿಂಗ್ಗೆ ಆಹ್ವಾನಿಸಿದೆ ಆಸ್ಟ್ರೇಲಿಯಾ. ಭಾರತ ತಂಡದಲ್ಲಿ ಕುಲ್ದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡಲಾಗಿದ್ದು, ನಿತೀಶ್ ರೆಡ್ಡಿ ಮತ್ತು ಅರ್ಷದೀಪ್ ಸಿಂಗ್ ಹೊರಗುಳಿದಿದ್ದಾರೆ.
ಇದನ್ನೂ ಓದಿ:TEST ಗೆದ್ದ ಗಿಲ್ ODI ಫೇಲ್ ರನ್ಸ್ ಬರ್ತಿಲ್ಲ.. ಮ್ಯಾಚ್ ಗೆಲ್ತಿಲ್ಲ!
ಸಿಡ್ನಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕನಾದ ನಂತರ ಶುಭ್ಮನ್ ಗಿಲ್ ಆಡಿದ ಮೂರನೇ ಏಕದಿನ ಪಂದ್ಯ ಇದಾಗಿದ್ದು, ನಾಯಕತ್ವದಲ್ಲಿ ಅವರು ಮೂರು ಟಾಸ್ಗಳನ್ನು ಸೋತಿದ್ದಾರೆ. ಇದು ಭಾರತ ತಂಡದ ಸತತ 18 ನೇ ಟಾಸ್ ಸೋಲು. ಇನ್ನು ಟೀಂ ಇಂಡಿಯಾದ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸುಕೊಳ್ಳುವಲ್ಲಿ ಕುಲ್ದೀಪ್ ಯಾದವ್ ಕೊನೆಗೂ ಯಶಸ್ವಿಯಾಗಿದ್ದಾರೆ . ಹಿಂದಿನ ಎರಡು ಸೋಲುಗಳಿಂದ ಪಾಠ ಕಲಿತ ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ಸಿಡ್ನಿಯಲ್ಲಿ ಕುಲ್ದೀಪ್ ಅವರಿಗೆ ಆಡುವ ಅವಕಾಶ ಕೊಟ್ಟಿದೆ.
ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾದ ಮತ್ತೊಬ್ಬ ಆಟಗಾರ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್. ಆಡಿದ ಮೊದಲೆರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಅರ್ಷದೀಪ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಆಯ್ಕೆ ಮಾಡಲಾಗಿದೆ.

ನೋಡಿರಿ

