ಒಂದು ಚಾನ್ಸ್‌ಗಾಗಿ ಕುಲದೀಪ್ ತಪಸ್ಸು- ಬ್ಯಾಟಿಂಗ್ ಸ್ನೇಹಿ ಪಿಚ್‌ಗಳೇ ವಿಘ್ನ!
ಅರ್ಷದೀಪ್ಗೆ ಅವಕಾಶ ಮಿಸ್ಸ್ ಆಗೋದೇಕೆ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಸೋತ್ರು ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕವಾಗಿ ಗೆದ್ದಿದೆ. 3ನೇ ಟೆಸ್ಟ್‌ನಲ್ಲಿ ಬೆಸ್ಟ್ ಫಾರ್ಮಾಮೆನ್ಸ್ ನೀಡುತ್ತಿದ್ದಾರೆ. ಆದ್ರೆ ಟೀಂ ಇಂಡಿಯಾದಲ್ಲಿ ಒಂದೇ ಒಂದು ಚಾನ್ಸ್‌ಗಾಗಿ ಕಾದ್ರೂ ಒಂದೇ ಒಂದು ಅವಕಾಶ ಸಿಗುತ್ತಿಲ್ಲ..
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಅವರಿಗೆ ತಂಡಕ್ಕೆ ಚಾನ್ಸ್ ಸಿಕ್ಕೇ ಸಿಗುತ್ತೆ ಅಂತ ಎಲ್ಲರೂ ಅಂದ್ಕೊಂಡಿದ್ರು. ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಕೂಗು ಜೋರಾಗಿತ್ತು. ಆದ್ರೆ ಟೀಂ ಇಂಡಿಯಾ ಯಾದವ್‌ಗೆ ಒಂದೇ ಒಂದು ಚಾನ್ಸ್ ಕೊಟ್ಟಿಲ್ಲ. ಟೀಂ ಇಂಡಿಯಾ ನಿರ್ಧಾರದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ ಒಂದು ವೇಳೆ ಕುಲದೀಪ್ ಯಾದವ್‌ಗೆ ಒಂದು ಚಾನ್ಸ್ ಸಿಕ್ಕಿದ್ರೂ ಅವರ ತಮ್ಮ ತಾಕತ್ತು ಏನು ಅನ್ನೋದ್ದನ್ನ ತೋರಿಸುತ್ತಿದ್ದರು. ಆದ್ರೆ ಕುಲದೀಪ್ ಯಾದವ್ ಈಗ ಕೇವಲ ವಾಟರ್ ಬಾಯ್ ಆಗಿ ಮಾತ್ರ ಕೆಲಸ ಮಾಡುತ್ತಿರುವುದು ಸಾಕಷ್ಟು ಬೇಸರವನ್ನ ತರಿಸಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ ಇರೋದ್ರಿಂದ ಬ್ಯಾಟರ್‌ಗಳಿಗೆ ಹೆಚ್ಚು ಅವಕಾಶಗಳನ್ನ ನೀಡಲಾಗುತ್ತಿದ್ದು, ಬೌಲರ್‌ಗಳಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲ ಇದು ಕೂಡ ಕುಲದೀಪ್ ನೆ ಚಾನ್ಸ್ ಮಿಸ್ ಆಗೋದ್ದಕ್ಕೆ ಕಾರಣವಾಗಿದೆ. ಹಾಗೇ ಲಾರ್ಡ್ಸ್‌ನಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚು ಒತ್ತು ಕೊಟ್ಟಿದ್ರಿಂದ ಕಲದೀಪ್ ಯಾದವ್‌ಗೆ ಚಾನ್ಸ್ ಸಿಕ್ಕಿಲ್ಲ.. ಹಾಗಾಗಿ 4ನೇ ಮತ್ತು 5ನೇ ಪಂದ್ಯದಲ್ಲಿ ಒಂದು ಚಾನ್ಸ್ ಸಿಕ್ಕಿದ್ರೂ ಸಾಕು ಅಂತ ಕುಲದೀಪ್ ಯಾದವ್ ಕಾಯುತ್ತಿದ್ದಾರೆ..
ಇನ್ನೂ ಅರ್ಷದೀಪ್ ಸಿಂಗ್ ಕೂಡ ಟೀಂ ಇಂಡಿಯಾ ಒಂದೇ ಚಾನ್ಸ್‌ಗಾಗಿ ಕಾಯುತ್ತಿದ್ದಾರೆ. ಎಡಗೈ ವೇಗಿಯಾಗಿರುವುದರಿಂದ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಪಂಜಾಬ್ ಬೌಲರ್ ವೈಟ್-ಬಾಲ್ ಫಾರ್ಮ್ಯಾಟ್‌ನಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ಇನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ಇವರಿಗೆ ಟೆಸ್ಟ್‌ನಲ್ಲಿ ಒಂದೇ ಒಂದು ಚಾನ್ಸ್ ಸಿಕ್ಕಿದ್ರೂ ತಮ್ಮ ತಾಕತ್ತನ್ನ ತೋರಿಸಲಿದ್ದಾರೆ.. ಹೀಗಾಗಿ ಮುಂದಿನ 2 ಪಂದ್ಯದಲ್ಲಿ ಒಂದು ಚಾನ್ಸ್ ಸಿಕ್ಕಿದ್ರೂ ಉತ್ತಮ ಪ್ರದರ್ಶನ ನೀಡುವ ನೀರಿಕ್ಷೆ ಇದೆ..

ನೋಡಿರಿ

