ಕುಕ್ಕೆ ಸುಬ್ರಹ್ಮಣ್ಯನ ವಾರ್ಷಿಕ ಆದಾಯ 123 ಕೋಟಿ ರೂ.! – ಸತತ 12 ನೇ ವರ್ಷವೂ ನಂ.1 ಪಟ್ಟ?

ಕುಕ್ಕೆ ಸುಬ್ರಹ್ಮಣ್ಯನ ವಾರ್ಷಿಕ ಆದಾಯ 123 ಕೋಟಿ ರೂ.! – ಸತತ 12 ನೇ ವರ್ಷವೂ ನಂ.1 ಪಟ್ಟ?

ಸುಬ್ರಹ್ಮಣ್ಯ: ಸಮಾರು 5 ಸಾವಿರ ವರ್ಷ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹೊಸ ದಾಖಲೆ ಬರೆದಿದೆ. 2022- 2023 ನೇ ಸಾಲಿನ ಆರ್ಥಿಕ ವರ್ಷದಲ್ಲಿ 123.64 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ರಾಜ್ಯದ ಮುಜುರಾಯಿ ವ್ಯಾಪ್ತಿಯ ದೇವಸ್ಥಾನಗಳ ಇತಿಹಾಸದಲ್ಲೇ ಅತೀ ಹೆಚ್ಚು ಅದಾಯ ಬರುವ ದೇವಸ್ಥಾನ ಎಂದೆನಿಸಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 2022- 2023 ನೇ ಸಾಲಿನ ಆರ್ಥಿಕ ವರ್ಷದಲ್ಲಿ 1,23,64,49,480.47 ರೂ. ಆದಾಯ ಗಳಿಸಿದೆ. ಇದರಲ್ಲಿ 63,77,41,589.55 ರೂ. ಖರ್ಚಾಗಿದ್ದು, 59,87,07,890 ರೂ. ಉಳಿತಾಯವಿದೆ. 2021-2022ನೇ ಸಾಲಿನಲ್ಲಿ 72,73,75,807 ರೂ. ಆದಾಯ ಬಂದಿದ್ದು, ಈ ಬಾರಿಯದ್ದು 51 ಕೋಟಿ ರೂ. ಅಧಿಕವೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತಿರುಪತಿ ಬೆಟ್ಟ ಏರುತ್ತಿದ್ದಾಗ ಗಜಪಡೆ ದಿಢೀರ್ ಪ್ರತ್ಯಕ್ಷ – ದಾರಿ ಮಧ್ಯೆ ಆನೆಗಳನ್ನು ಕಂಡು ಬೆಚ್ಚಿಬಿದ್ದ ತಿಮ್ಮಪ್ಪನ ಭಕ್ತರು..!

ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಇದೇ ಮೊದಲ ಬಾರಿಗೆ ಕ್ಷೇತ್ರವು ಆದಾಯದಲ್ಲಿ 100 ಕೋಟಿ ರೂ. ದಾಟಿದೆ. ಕಳೆದ 11 ವರ್ಷಗಳಿಂದ ಆದಾಯ ಗಳಿಕೆಯಲ್ಲಿ ನಿರಂತರ ನಂಬರ್​ 1 ಸ್ಥಾನದಲ್ಲಿರುವ ದೇವಸ್ಥಾನ ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನು ಗುತ್ತಿಗೆ 1,20,37,057 ರೂ, ತೋಟ 15,66,001 ರೂ, ಕಟ್ಟಡ ಬಾಡಿಗೆ 1,20,87,512 ರೂ, ಕಾಣಿಕೆ 6,25,99,323 ರೂ, ಕಾಣಿಕೆ ಹುಂಡಿ 29,12,73,854 ರೂ, ಹರಕೆ ಸೇವೆ 53,89,19,033 ರೂ, ಅನುದಾನ 3,05,341 ರೂ., ಹೂಡಿಕೆ ಬಡ್ಡಿ 16,16,24,305 ರೂ, ಸಂಕೀರ್ಣ ಜಮೆಗಳಿಂದ 7,48,74,889 ರೂ, ಅನ್ನಸಂತರ್ಪಣೆ ನಿಧಿ 7,24,05,587 ರೂ., ಅಭಿವೃದ್ಧಿ ನಿಧಿ 8,56,526 ರೂ, ಶಾಶ್ವತ ಸೇವಾ ಮೂಲಧನ 78,99,950 ರೂ. ಆದಾಯ ಬಂದಿದೆ.

ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಹೆಚ್ಚಳ

  • 2006-07 – 19.76 ಕೋಟಿ ರೂ.
  • 2007-08 – 24.44 ಕೋಟಿ ರೂ.
  • 2008-09 – 31 ಕೋಟಿ ರೂ.
  • 2009-10 – 38.51 ಕೋಟಿ ರೂ.
  • 2011-12 – 56.24 ಕೋಟಿ ರೂ.
  • 2012-13 – 66.76 ಕೋಟಿ ರೂ.
  • 2013-14 – 68 ಕೋಟಿ ರೂ.
  • 2014-15 – 77.60 ಕೋಟಿ ರೂ.
  • 2015-16 – 88.83 ಕೋಟಿ ರೂ.
  • 2016-17 – 89.65 ಕೋಟಿ ರೂ.
  • 2017-18 – 95.92 ಕೋಟಿ ರೂ.
  • 2018-19 – 92.09 ಕೋಟಿ ರೂ.
  • 2019-20 – 98.92 ಕೋಟಿ ರೂ.
  • 2020-21 – 68.94 ಕೋಟಿ ರೂ.
  • 2021-22 – 72.73 ಕೋಟಿ ರೂ.

suddiyaana