ಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ರಜೆ – ಕೆಎಸ್ಆರ್ಟಿಸಿಯಿಂದ 1,500 ಹೆಚ್ಚುವರಿ ಬಸ್ ಸಂಚಾರ
ಮಾರ್ಚ್ 8ರಂದು ಶಿವರಾತ್ರಿ.. ಸಾಲು ಸಾಲು ರಜೆ ಇರುವ ಕಾರಣ ಜನರು ತಮ್ಮ ತಮ್ಮ ಊರುಗಳಿಗೆ ತೆರಳುವುದು, ಪ್ರವಾಸಿ ತಾಣಗಳಿಗೆ ತೆರಳಲು ಪ್ಲಾನ್ ಮಾಡಿಕೊಂಡಿರುತ್ತಾರೆ. ಇದೀಗ ಊರುಗಳಿಗೆ ತೆರಳಲು ಸಿದ್ದತೆ ಮಾಡಿಕೊಂಡಿರುವವರಿಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್ ನೀಡಿದೆ.. ಬೆಂಗಳೂರಿನಿಂದ ನಾನಾ ನಗರಗಳಿಗೆ ಕೆಎಸ್ಆರ್ಟಿಸಿ1,500 ಹೆಚ್ಚುವರಿ ಬಸ್ಗಳನ್ನು ಬಿಡುತ್ತಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಗುಡ್ ನ್ಯೂಸ್ – ಪ್ರತಿ ತಿಂಗಳು ಸರ್ಕಾರದಿಂದ 1,000 ರೂ.!
ಇದೇ 8 ರಂದು ಮಹಾಶಿವರಾತ್ರಿ ಇದ್ದು ನಾಡಿದ್ಯಾಂತ ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಮಾರ್ಚ್ 8 ಶುಕ್ರವಾರ ಬಂದಿದ್ದರಿಂದ ಸರ್ಕಾರ ರಜೆ ಇರುತ್ತದೆ. 9 ಮತ್ತು 10 ಶನಿವಾರ, ಭಾನುವಾರ ಬಂದಿವೆ. ಹೀಗಾಗಿ ಒಟ್ಟು 3 ದಿನ ರಜೆ ಸಿಕ್ಕಂತೆ ಆಗುತ್ತದೆ. ಇದರಿಂದ ಶಿವರಾತ್ರಿಯನ್ನ ತಮ್ಮ ಊರಿನಲ್ಲಿ ಆಚರಿಸಲು ಬೆಂಗಳೂರಿನಿಂದ ತೆರಳುವ ಬೇರೆ ಊರಿನ ಜನರು ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ 7 ಮತ್ತು 10ರ ನಡುವೆ ಬೆಂಗಳೂರಿನಿಂದ ನಾನಾ ನಗರಗಳಿಗೆ ಕೆಎಸ್ಆರ್ಟಿಸಿ1,500 ಹೆಚ್ಚು ಬಸ್ಗಳನ್ನು ಬಿಡುತ್ತಿದೆ. ರಾಜ್ಯದಲ್ಲಿ ಮಾತ್ರ ಅಲ್ಲದೇ ಬೇರೆ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಈ ವ್ಯವಸ್ಥೆ ಲಭ್ಯ ಇರುತ್ತದೆ.
ಬೆಂಗಳೂರಿನ ಯಾವ್ಯಾವ ನಿಲ್ದಾಣದಿಂದ ಬಸ್ ವ್ಯವಸ್ಥೆ?
ಮೆಜೆಸ್ಟಿಕ್ ಬಸ್ ನಿಲ್ದಾಣ – ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಬಿಡಲಾಗುತ್ತಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣ – ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗಗಳಿಗೂ ಹೆಚ್ಚುವರಿ ಬಸ್ ಬಿಡಲಾಗುತ್ತಿದೆ.
ಶಾಂತಿನಗರ ಬಸ್ ನಿಲ್ದಾಣ – ತಮಿಳುನಾಡು, ಕೇರಳ ರಾಜ್ಯಕ್ಕೆ ಸೇರಿ ವಿವಿಧ ಸ್ಥಳಗಳಿಗೆ ಬಸ್ ಕಾರ್ಯಚರಣೆ ಇರುತ್ತದೆ.
ಬಸ್ ಟಿಕೆಟ್ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಿಕೊಂಡು ಆಸನಗಳನ್ನ ಕಾಯ್ದಿರಿಸಲು ಅವಕಾಶವಿದೆ. ಮುಂಗಡ ಟಿಕೆಟ್ಗಾಗಿ ಮೇಲೆ ಕೊಟ್ಟಿರುವ ಪಿಕ್ಆಪ್ ಪಾಯಿಂಟ್ ಹೆಸರು ಗಮನಿಸಲು ಸೂಚನೆ ನೀಡಲಾಗಿದೆ. ಇ-ಟಿಕೆಟ್ ಬುಕಿಂಗ್ ಅನ್ನು www.ksrtc.karnataka.gov.in ವೆಬ್ ಮೂಲಕ ಮಾಡಬಹುದು. 4 ಅಥವಾ 5 ಪ್ರಯಾಣಿಕರು ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿದರೆ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಬುಕ್ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗುತ್ತದೆ.