KSRTC ಬಸ್​​ನಲ್ಲಿ ಹೊಸ ರೂಲ್ಸ್​! – ಇನ್ಮುಂದೆ ಲಗೇಜ್‌ಗೂ ದುಡ್ಡು ಕಟ್ಟಬೇಕಾ?

KSRTC ಬಸ್​​ನಲ್ಲಿ ಹೊಸ ರೂಲ್ಸ್​! – ಇನ್ಮುಂದೆ ಲಗೇಜ್‌ಗೂ ದುಡ್ಡು ಕಟ್ಟಬೇಕಾ?

ರಾಜ್ಯದಲ್ಲಿ ಶಕ್ತಿ ಯೋಜನೆಯ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ರೂಲ್ಸ್‌ ಜಾರಿಗೊಳಿಸಿದೆ. ಇನ್ನುಮುಂದೆ ಪ್ರಯಾಣಿಕರು ಲಗೇಜ್‌ಗೆ ಕೂಡ ಹಣ ಪಾವತಿಸಬೇಕು.

ಇದನ್ನೂ ಓದಿ:ದರ್ಶನ್‌ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ನಟಿ ರಮ್ಯಾ – ಫ್ಯಾನ್ಸ್‌ ಮೆಸೇಜ್‌ಗೂ, ಸ್ವಾಮಿ ಮೆಸೇಜ್‌ಗೂ ವ್ಯತ್ಯಾಸವಿಲ್ಲ ಎಂದ ಮೋಹಕತಾರೆ

ಹೌದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ಲಗೇಜು ರೂಲ್ಸ್‌ ಬಿಡುಗಡೆ ಮಾಡಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರು ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ತೆಗೆದುಕೊಂಡು ಹೋಗಬಹುದಾಗಿದೆ. 30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು. ನಾಲ್ಕೈದು ಜನರು ಒಟ್ಟಾಗಿ ಪ್ರಯಾಣಿಸಿದರೂ 30 ಕೆಜಿ ಲಗೇಜ್ ಮಾತ್ರ ಉಚಿತ ಎನ್ನಲಾಗಿದೆ.

ಇನ್ನು ಬಸ್‌ನಲ್ಲಿ 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್,   ಮೊಲ, ನಾಯಿ, ಬೆಕ್ಕು, ಪಕ್ಷಿಯನ್ನೂ ಬಸ್​​ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ. ಈ ನಿಯಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್​​ನಲ್ಲಿ ಸಣ್ಣಪುಟ್ಟ ಮಕ್ಕಳು ಪ್ರಯಾಣ ಮಾಡುತ್ತಾರ. ಈ ವೇಳೆ, ಏನಾದರೂ ತಿನ್ನುವ ವೇಳೆ ಮಕ್ಕಳಿಗೆ ನಾಯಿ ಬಾಯಿ ಹಾಕಿದರೆ ಏನ್ ಕಥೆ? ಈ ನಿಯಮ ಸರಿಯಲ್ಲ ಎಂದು ಕೆಲವು ಮಂದಿ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಎಸ್ಆರ್ಟಿಸಿ ಹೊಸ ಲಗೇಜ್ ನಿಯಮದಲ್ಲೇನಿದೆ?

  • 30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ. ಅದಕ್ಕಿಂತ ಹೆಚ್ಚಿನ ಲಗೇಜ್​ಗೆ ದರ ನಿಗದಿ.
  • ವಾಷಿಂಗ್ ಮಷಿನ್, ಫ್ರಿಡ್ಜ್ ಕೊಂಡೊಯ್ಯಲೂ ಅವಕಾಶ.
  • ಟ್ರಕ್​​ನ ಟಯರ್​​​ಗಳನ್ನೂ ತೆಗೆದುಕೊಂಡು ಹೋಗಬಹುದು.
  • ಅಲ್ಯೂಮಿನಿಯಂ ಪೈಪ್, ಪಾತ್ರೆ ಕೊಂಡೊಯ್ಯಲೂ ಅವಕಾಶ.
  • ಕಬ್ಬಿಣದ ಪೈಪ್​​ಗಳನ್ನು ಸಾಗಿಸಲೂ ಅವಕಾಶ.
  • ಬೆಕ್ಕು, ನಾಯಿ, ಮೊಲವನ್ನೂ ಸಾಗಿಸಬಹುದು.

Shwetha M