ಕೆಎಸ್ ಆರ್ ಟಿಸಿ ಪ್ರಯಾಣಿಕರಿಗೆ ‘ಐಷಾರಾಮಿ’ ಗಿಫ್ಟ್ –  ರಸ್ತೆಗಿಳಿದವು ‘ಅಂಬಾರಿ ಉತ್ಸವ್’ ಬಸ್​ಗಳು..!  

ಕೆಎಸ್ ಆರ್ ಟಿಸಿ ಪ್ರಯಾಣಿಕರಿಗೆ ‘ಐಷಾರಾಮಿ’ ಗಿಫ್ಟ್ –  ರಸ್ತೆಗಿಳಿದವು ‘ಅಂಬಾರಿ ಉತ್ಸವ್’ ಬಸ್​ಗಳು..!  

ದೂರದ ಪ್ರಯಾಣ ಹಾಗೂ ಐಷಾರಾಮಿ ಪ್ರಯಾಣಕ್ಕಾಗಿ ಜನ ಖಾಸಗಿ ಬಸ್​ಗಳ ಮೊರೆ ಹೋಗುತ್ತಿದ್ರು. ಆದ್ರೆ ಈಗ ಖಾಸಗಿ ಸ್ಲೀಪರ್ ಬಸ್​ಗಳಿಗೆ ಸೆಡ್ಡು ಹೊಡೆಯಲು ಕೆಎಸ್‌ಆರ್‌ಟಿಸಿ ಇಂದು 20 ಹೊಸ ಅಂಬಾರಿ ಉತ್ಸವ ಸ್ಲೀಪರ್(ವೋಲ್ವೋ ಮಲ್ಟಿ ಆಕ್ಸೆಲ್) ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಿದೆ. ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಹೈಟೆಕ್ ಬಸ್ ಸೇವೆಯನ್ನು ತನ್ನ ಪ್ರಯಾಣಿಕರಿಗೆಂದು ಪರಿಚಯಿಸಿದೆ.

ಇದನ್ನೂ ಓದಿ : ಕ್ಲಾಸ್ ರೂಮ್ ​ನಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲದೆ ಸಿಟ್ಟಾದ ಪ್ರೊಫೆಸರ್ – ಕಾಲೇಜಿನಲ್ಲಿ ಅಸಲಿಗೆ ಆಗಿದ್ದೇನು..!?

ವಿಧಾನಸೌಧದ ಮುಂಭಾಗ ಸಿಎಂ ಬಸವರಾಜ ಬೊಮ್ಮಾಯಿ 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದರು. ಅಂಬಾರಿ ಉತ್ಸವ ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಮಹತ್ವಾಕಾಂಕ್ಷೆಯ ಹೊಸ ವೋಲ್ವೋ ಅಂಬಾರಿ ಬಸ್ ಸೇವೆ ಆರಂಭಿಸಿದೆ.

ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಈ ಬಸ್ ಗಳು ಅತ್ಯುತ್ತಮ ಸೌಕರ್ಯ ಹೊಂದಿದ್ದು, ಇವುಗಳಲ್ಲಿ ಪ್ರಯಾಣ ಮಾಡುವುದು ವಿಮಾನದಂತಹ ಪ್ರಯಾಣದ ಅನುಭವ ನೀಡುತ್ತದೆ. ಈ ಬಸ್ ಗಳು 15 ಮೀಟರ್ ಉದ್ದವಾಗಿವೆ.

ಅಂಬಾರಿ ಉತ್ಸವ ಬಸ್​​ಗಳಲ್ಲಿ ನಿಖರವಾದ ಮಾರ್ಗ ಮತ್ತು ಟಿಕೆಟ್ ದರಗಳು ಇನ್ನೂ ನಿಗದಿ ಆಗಿಲ್ಲ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಗೆ ಬಸ್‌ಗಳನ್ನು ಸೇರಿಸಲಾಗುವುದು. ಇನ್ನು 30 ಬಸ್ ಗಳು ಮುಂದಿನ ದಿನಗಳಲ್ಲಿ ರಸ್ತೆಗಿಳಿಯಲಿವೆ.

‘ಅಂಬಾರಿ ಉತ್ಸವ್ – ಸೆಲೆಬ್ರೇಷನ್ ಆಫ್ ಜರ್ನಿ’ ಎಂಬ ಘೋಷವಾಕ್ಯದಲ್ಲಿ ಬಸ್ ಸೇವೆ ಆರಂಭಿಸಲಾಗಿದೆ.  ಇಡೀ ದೇಶದಲ್ಲೇ ಅತಿ ಹೆಚ್ಚು ಐಷಾರಾಮಿ ಬಸ್ ಹೊಂದಿರುವ ಗರಿಮೆ ಕೆಎಸ್‌ಆರ್‌ಟಿಸಿಗಿದೆ. ಇಡೀ ದೇಶದಲ್ಲೇ ಯಾವುದೇ ಖಾಸಗಿ ಕಂಪನಿಗಳು ಹೊಂದಿರದ ಬಸ್ ಗಳು ಈ ನಮ್ಮ ಕೆಎಸ್‌ಆರ್‌ಟಿಸಿಯಲ್ಲಿವೆ.

ಕೇವಲ ಒಂದೇ ಒಂದು ಖಾಸಗಿ ಬಸ್ ಟ್ರಾವೆಲ್ಸ್ ಮಾತ್ರ ಈ ಮಾದರಿಯ ಎರಡು ಬಸ್ ಹೊಂದಿದೆ. ಈ ಮೂಲಕ ಕೆಎಸ್​ಆರ್​ಟಿಸಿ ತನ್ನ ಪ್ರಯಾಣಿಕರಿಗೆ ಐಷಾರಾಮಿ ಫೀಲ್ ಕೊಡಲು ಮುಂದಾಗಿದೆ.

 

suddiyaana