ನಿಲ್ದಾಣಕ್ಕೆ ನುಗ್ಗಿ ಕೆಎಸ್​ಆರ್​ಟಿಸಿ ಬಸ್​ನೇ ಕದ್ದೊಯ್ದ ಕಳ್ಳರು – ಕಳ್ಳತನದ ಬಳಿಕ ಹೋಗಿದ್ದೆಲ್ಲಿಗೆ..!?

ನಿಲ್ದಾಣಕ್ಕೆ ನುಗ್ಗಿ ಕೆಎಸ್​ಆರ್​ಟಿಸಿ ಬಸ್​ನೇ ಕದ್ದೊಯ್ದ ಕಳ್ಳರು – ಕಳ್ಳತನದ ಬಳಿಕ ಹೋಗಿದ್ದೆಲ್ಲಿಗೆ..!?

ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡೋದು, ಅಂಗಡಿಗಳಿಗೆ ನುಗ್ಗಿ ಕನ್ನ ಹಾಕೋದು, ಅಷ್ಟೇ ಯಾಕೆ ಬೈಕ್, ಕಾರುಗಳನ್ನ ಎಗರಿಸೋದನ್ನೂ ನೋಡಿದ್ದೇವೆ. ಪರ್ಸ್, ಮೊಬೈಲ್, ಚಿನ್ನದ ಸರ ಕದಿಯೋರನ್ನೂ ಕಂಡಿದ್ದೇವೆ. ಆದ್ರೆ ಇಲ್ಲಿ ಖದೀಮರು ಕೆಎಸ್​ಆರ್​ಟಿಸಿ ಬಸ್​ನೇ ಕದ್ದೊಯ್ದಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್​ನೇ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರ್ಕಾರಿ ಬಸ್ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಬೀದರ್ ಬಸ್ ಡಿಪೋ ನಂಬರ್ 2ಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಇದಾಗಿದೆ. KA -38-F971 ನೋಂದಣಿ ಬಸ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ.

ಬೀದರ್ ಡಿಪೋ ನಂಬರ್ 2 ಕ್ಕೆ ಸೇರಿದ್ದ ಕೆಎ 38 ಎಫ್ 971 ನಂಬರ್​ನ ಬಸ್, ನಿನ್ನೆ ಬೀದರ್​ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಮನ್ನಾಕ್ಕೇಳಿ ಮಾರ್ಗವಾಗಿ ಬೀದರ್ ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿತ್ತು. ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸ್ಸನ್ನು ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಿದ್ದರು. ನಿನ್ನೆ ರಾತ್ರಿ ಬೀದರ್ ನಿಂದ ತಂದಿದ್ದ ಬಸ್ಸನ್ನು ಚಾಲಕ ಅಯ್ಯುಬ್ ಖಾನ್ ಮತ್ತು ಚಾಲಕ ಈರಪ್ಪ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಡಿಪೋದಲ್ಲಿ ಮಲಗಿದ್ದರು. ಇಂದು ಮುಂಜಾನೆ ಎಂದಿನಂತೆ, ಬಸನ್ನು ತಗೆದುಕೊಂಡು ಮತ್ತೆ ಬೀದರ್ ಗೆ ಹೋಗಲು ಮುಂದಾದಾಗ ಬಸ್ ಕಳ್ಳತನ ಆಗಿರೋದು ಗೊತ್ತಾಗಿದೆ.

ಇದನ್ನೂ ಓದಿ : ಶಾಲಾ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ಇಲ್ಲದಿದ್ದಕ್ಕೆ ಶಿಕ್ಷಕರನ್ನೇ ಕೂಡಿ ಹಾಕಿದ ಪೋಷಕರು..!

ನಸುಕಿನ ಜಾವ 3.30ರ ಸುಮಾರಿಗೆ ಖದೀಮರು ನಕಲಿ ಕೀ ಬಳಸಿ ಕೃತ್ಯ ಎಸಗಿದ್ದಾರೆ, ಮಿರಿಯಾಣ ಮಾರ್ಗವಾಗಿ ತಾಂಡೂರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡು ಟೀಂ ರಚನೆ ಮಾಡಿಕೊಂಡು ಬಸ್ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಬಸ್ ನಿರ್ಗಮನದ ದ್ವಾರದಿಂದ ಹೊರ ಹೋಗಿರುವುದು ಕಂಡು ಬಂದಿದೆ. ಕದ್ದ ಬಸ್ಸನ್ನ ಮಿರಿಯಾಣ ಮಾರ್ಗವಾಗಿ ತಾಂಡೂರ ಮೂಲಕ ತೆಲಂಗಾಣದ ಕಡೆಗೆ ಕಳ್ಳರು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸದ್ಯ ಪೊಲೀಸರ ತಂಡ ತೆಲಂಗಾಣಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ.

suddiyaana