ಶಿವಮೊಗ್ಗದಲ್ಲಿ KSRTC ಬಸ್‌ ಚಕ್ರಕ್ಕೆ ಸಿಲುಕಿ ನಾಡಬಾಂಬ್‌ ಸ್ಟೋಟ! – ಮುಂದೇನಾಯ್ತು?

ಶಿವಮೊಗ್ಗದಲ್ಲಿ KSRTC ಬಸ್‌ ಚಕ್ರಕ್ಕೆ ಸಿಲುಕಿ ನಾಡಬಾಂಬ್‌ ಸ್ಟೋಟ! – ಮುಂದೇನಾಯ್ತು?

ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಚಕ್ರಕ್ಕೆ ನಾಡ ಬಾಂಬ್ ಸಿಲುಕಿ ಸ್ಪೋಟಗೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಅರ್ಜುನನ ಸ್ಮಾರಕ ನಿರ್ಮಾಣವಾಗಿ 10 ತಿಂಗಳಾದ್ರೂ ಉದ್ಘಾಟನೆ ಭಾಗ್ಯ ಇಲ್ಲ! – ಸರ್ಕಾರದ ಈ ನಡೆ ಸರಿನಾ?

ಕೆಎಸ್‌ ಆರ್‌ಟಿಸಿ ಬಸ್‌ ಸಿದ್ಧಾಪುರದಿಂದ ಶಿಕಾರಿಪುರಕ್ಕೆ ತೆರಳುತ್ತಿತ್ತು. ಹಿರೇಕಲವತ್ತಿ ಗ್ರಾಮದ ಬಳಿ ಬರುತ್ತಿದ್ದಾಗ ಬಸ್‌ ಚಕ್ರಕ್ಕೆ ನಾಡಬಾಂಬ್‌ ಸಿಲುಕಿಕೊಂಡು ಸ್ಟೋಟ ಸಂಭವಿಸಿದೆ. ಸ್ಟೋಟದ ತೀವ್ರತೆಗೆ  ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಇದರಿಂದ ಪಕ್ಕದಲ್ಲಿದ್ದ ಟಿಸಿಗೆ (ವಿದ್ಯುತ್ ಪರಿವರ್ತಕಕ್ಕೆ) ಬಸ್ ಡಿಕ್ಕಿ ಹೊಡೆದಿದೆ. ಸ್ಫೋಟಕ್ಕೂ 5 ನಿಮಿಷಗಳ ಮುನ್ನ ಹಿಂದಿನ ನಿಲ್ದಾಣದಲ್ಲಿ 45 ವಿದ್ಯಾರ್ಥಿಗಳು ಬಸ್‌ನಿಂದ ಇಳಿದಿದ್ದರು. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಸ್ಸಿನ ಟೈಯರ್ ಅಂಚಿಗೆ (ರಿಮ್‌ಗೆ) ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ದುರಂತದ ಪ್ರಮಾಣ ಕಡಿಮೆ ಆಗಿದೆ. ಒಂದು ವೇಳೆ ಬಾಂಬ್ ಟೈಯರ್‌ಗಳ ನಡುವೆ ಅಥವಾ ಬಸ್‌ನ ಮುಖ್ಯ ಭಾಗದ ಅಡಿಯಲ್ಲಿ ಸ್ಫೋಟಗೊಂಡಿದ್ದರೆ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗುವ ಸಾಧ್ಯತೆ ಇತ್ತು.

ಘಟನೆಯ ನಂತರ ಪ್ರತಿಕ್ರಿಯಿಸಿದ ಬಸ್ ಚಾಲಕ ಬಸವರಾಜ್ ಅವರು, ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಫೋಟದ ಹಿಂದಿನ ಉದ್ದೇಶ ಮತ್ತು ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Shwetha M