KSRTC ಪ್ರಯಾಣಿಕರಿಗೆ ಬಿಗ್ ಆಫರ್ – ಟಿಕೆಟ್ ದರ ಇಳಿಕೆ, ಯಾವ್ಯಾವ ರೂಟ್‌ನಲ್ಲಿ ಎಷ್ಟೆಷ್ಟು ಕಮ್ಮಿ ಗೊತ್ತಾ?

KSRTC ಪ್ರಯಾಣಿಕರಿಗೆ  ಬಿಗ್ ಆಫರ್ –  ಟಿಕೆಟ್ ದರ ಇಳಿಕೆ, ಯಾವ್ಯಾವ ರೂಟ್‌ನಲ್ಲಿ ಎಷ್ಟೆಷ್ಟು ಕಮ್ಮಿ ಗೊತ್ತಾ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ    ರಾಜ್ಯದ ಜನರರಿಗೆ  ಬಿಗ್‌ ಆಫರ್‌ ನೀಡಿದೆ. ಜನವರಿ ಮತ್ತು ಮಾರ್ಚ್ ನಡುವಿನ ಸೀಸನ್‌ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಕೆಎಸ್‌ಆರ್‌ಟಿಸಿ ಬಿಗ್ ಆಫರ್  ನೀಡ್ತಿದೆ. ಸೋಮವಾರ ಜನವರಿ 5, 2026 ರಿಂದ ಜಾರಿಗೆ ಬರುವಂತೆ ಬಹು ಮಾರ್ಗಗಳಲ್ಲಿ ತನ್ನ ಹಲವಾರು ಪ್ರೀಮಿಯಂ ಬಸ್ ಸೇವೆಗಳ ಟಿಕೆಟ್ ದರವನ್ನು  ಶೇ. 5 ರಿಂದ ಶೇ. 15 ರಷ್ಟು ಕಡಿಮೆ ಮಾಡಿದೆ.

ಏಪ್ರಿಲ್‌ನಿಂದ ಜೂನ್ ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎಸ್ಆರ್‌ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು 10–15% ರಷ್ಟು ಹೆಚ್ಚಿಸುತ್ತದೆ. ಆದ್ರೆ ಇದೀಗ ಆಫ್ ಸೀಸನ್ ಸಮಯದಲ್ಲಿ ಬಸ್ ಟಿಕೆಟ್ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್ ಆಫರ್ ನೀಡಿದೆ.

ಇದನ್ನೂಓದಿ : ದೀರ್ಘಾವಧಿ ಸಿಎಂ, ದೇವರಾಜು ಅರಸು ರೆಕಾರ್ಡ್ ಬ್ರೇಕ್ – ಸಿದ್ದರಾಮಯ್ಯ ಕಾರ್ಯಕರ್ತರಿಂದ ನಾಟಿ ಕೋಳಿ ಪಾರ್ಟಿ

ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು,.( ನಿನ್ನೆ ) ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ. ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಸಾರಿಗೆ ಬಸ್​​ಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಆಫರ್ ನೀಡಲಾಗ್ತಿದೆ.

ದರ ಇಳಿಕೆಯಾದ ಮಾರ್ಗ 

ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಮತ್ತೂರು, ಬೆಂಗಳೂರು-ತ್ರಿಶೂರು ಮಾರ್ಗಗಳ ಬಸ್​​ನಲ್ಲಿ ರಿಯಾಯಿತಿ ಪಡೆಯಬಹುದಾಗಿದೆ. ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ksrtc.in ಗೆ ಕ್ಲಿಕ್ ಮಾಡಿ. ಚಳಿಗಾಲದ ಸಮಯದಲ್ಲಿ ಪ್ರೀಮಿಯಂ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುವುದು ಮತ್ತು ಪ್ರಯಾಣಿಕರು ಖಾಸಗಿ ನಿರ್ವಾಹಕರಿಗಿಂತ ಕೆಎಸ್‌ಆರ್‌ಟಿಸಿಯನ್ನು ಆಯ್ಕೆ ಮಾಡುವಂತೆ ಪ್ರೋತ್ಸಾಹಿಸೋದು ಇದರ ಉದ್ದೇಶವಾಗಿದೆ. ಸ್ಪ

Kishor KV