ಹಾರ್ದಿಕ್ ಶೈನ್.. ಕೃನಾಲ್ ಸೈಡ್ ಲೈನ್ – ಟೀಂ ಇಂಡಿಯಾದಲ್ಲಿ ಯಾಕಿಲ್ಲ ಚಾನ್ಸ್?
RCB ಟ್ರಂಪ್ ಕಾರ್ಡ್ ರೆಕಾರ್ಡ್ಸ್ ಹೇಗಿದೆ?

ಹಾರ್ದಿಕ್ ಶೈನ್.. ಕೃನಾಲ್ ಸೈಡ್ ಲೈನ್ – ಟೀಂ ಇಂಡಿಯಾದಲ್ಲಿ ಯಾಕಿಲ್ಲ ಚಾನ್ಸ್?RCB ಟ್ರಂಪ್ ಕಾರ್ಡ್ ರೆಕಾರ್ಡ್ಸ್ ಹೇಗಿದೆ?

ಹಾರ್ದಿಕ್ ಪಾಂಡ್ಯ ಹಾಗೇ ಕೃನಾಲ್ ಪಾಂಡ್ಯ ಎಲ್ಲರಿಗೂ ಮಾದರಿಯಾಗುವಂತ ಸಹೋದರರು. ಅವ್ರ ಗೆಲುವನ್ನ ಇವ್ರು ಇವ್ರ ಗೆಲುವನ್ನ ಅವ್ರು ಸೆಲೆಬ್ರೇಟ್ ಮಾಡೇ ಮಾಡ್ತಾರೆ. ಒಬ್ಬರ ಬೆನ್ನಿಗೆ ಒಬ್ರು ಸದಾ ನಿಂತೇ ಇರ್ತಾರೆ. ಕ್ರಿಕೆಟ್ ಕರಿಯರ್ ಅಂತಾ ಬಂದಾಗ ಇಬ್ಬರೂ ಕೂಡ ಐಪಿಎಲ್​ನಲ್ಲಿ ಸೂಪರ್ ಸ್ಟಾರ್ಸ್. ಆದ್ರೆ ಟೀಂ ಇಂಡಿಯಾದಲ್ಲಿ ಮಾತ್ರ ಹಾರ್ದಿಕ್​ರಷ್ಟು ಸಕ್ಸಸ್ ಕೃನಾಲ್​ಗೆ ಸಿಕ್ಕಿಲ್ಲ. ಅವ್ರಷ್ಟೇ ಟ್ಯಾಲೆಂಟ್ ಇವ್ರಲ್ಲೂ ಇದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡೋ ಸ್ಕಿಲ್ ಇದೆ. ಆದ್ರೂ ಅವಕಾಶಗಳು ಸಿಕ್ಕಿದ್ದು ತೀರಾ ಕಡಿಮೆ.

ಇದನ್ನೂ ಓದಿ : PAK ಕ್ರಿಕೆಟ್ ನಲ್ಲಿ ಅಲ್ಲೋಲ ಕಲ್ಲೋಲ – ತ್ರಿವಳಿ ಸ್ಟಾರ್ಸ್ ಗೆ PCB ಗೇಟ್ ಪಾಸ್

ಕೃನಾಲ್ ಪಾಂಡ್ಯರ ಕ್ರಿಕೆಟ್ ಕರಿಯರ್ ಶುರುವಾಗಿದ್ದ ಮುಂಬೈ ಇಂಡಿಯನ್ಸ್ ಪರ. 2016ರಲ್ಲಿ ಮುಂಬೈ ತಂಡ ಸೇರಿದ ಕೃನಾಳ್, 2021ರವರೆಗೆ ಅದೇ ತಂಡದಲ್ಲಿ ಆಡಿದ್ದರು. ಆ ನಂತ್ರ 2022 ರಿಂದ ಎಲ್ ಎಸ್ ಜಿ ಪರ ಕಣಕ್ಕಿಳಿಯುತ್ತಿದ್ರು. ಆ ಬಳಿಕ 2024ರ ನವೆಂಬರ್​ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಕೃನಾಲ್​ರನ್ನ  ಬೆಂಗಳೂರು ಫ್ರಾಂಚೈಸಿ 5.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಸ್ಪಿನ್ ಆಲ್​ರೌಂಡರ್ ಆಗಿರುವ ಕೃನಾಲ್​ ಆರ್​ಸಿಬಿಯ ಈ ಸೀಸನ್​ನಲ್ಲಿ ಫಸ್ಟ್ ಮ್ಯಾಚ್​ನಲ್ಲೇ ಅದ್ಭುತ ಪ್ರದರ್ಶನ ನೀಡಿದ್ರು. ಉದ್ಘಾಟನಾ ಪಂದ್ಯದಲ್ಲೇ ಮ್ಯಾಚ್ ಆಫ್ ದಿ ಮ್ಯಾಚ್ ರಿವಾರ್ಡ್​ನೂ ಪಡೆದಿದ್ರು.

18ನೇ ಸೀಸನ್​ನಲ್ಲಿ ಆರ್​ಸಿಬಿ ತಂಡದ ಪ್ರದರ್ಶನ ಅದ್ಭುತವಾಗಿತ್ತು. ಪ್ರತಿಯೊಬ್ಬರೂ ಗೇಮ್ ಚೇಂಜಿಂಗ್ ಪ್ರದರ್ಶನ ನೀಡಿದ್ರು. ಲೀಗ್ ಹಂತದ 9 ಪಂದ್ಯ ಹಾಗೇ ಕ್ವಾಲಿಫೈಯರ್ 1 ಮತ್ತು ಫೈನಲ್ ಮ್ಯಾಚ್ ಸೇರಿ ಟೋಟಲ್ಲಾಗಿ 11 ಪಂದ್ಯಗಳನ್ನ ಆಡಿ ಗೆದ್ದಿದ್ದಾರೆ. ಇದ್ರಲ್ಲಿ 9 ಬೇರೆ ಬೇರೆ ಪ್ಲೇಯರ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಕೃನಾಲ್ ಪಾಂಡ್ಯ ಒಬ್ರೇ ಮೂರು ಸಲ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲೇ 3 ವಿಕೆಟ್ಸ್ ಕಿತ್ತು ಶುಭಾರಂಭಕ್ಕೆ ಮುನ್ನುಡಿ ಬರೆದಿದ್ರು. ಮ್ಯಾನ್ ಆಫ್ ದಿ ಮ್ಯಾಚ್ ರಿವಾರ್ಡ್ ಪಡೆದಿದ್ರು. ಆ ಬಳಿಕ ದೆಹಲಿ ವಿರುದ್ಧದ ಮ್ಯಾಚಲ್ಲಿ 73 ರನ್ ಗಳಿಸಿ ಆರ್ ಸಿಬಿ ಗೆಲುವಿನ ಹೀರೋ ಆಗಿ ಎರಡನೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರೈಜ್ ಪಡೆದಿದ್ರು. ಇದೀಗ ಫೈನಲ್ ಪಂದ್ಯದಲ್ಲಿ 4 ಓವರ್​ಗಳಳನ್ನ ಬೌಲ್ ಮಾಡಿ ಕೇವಲ 17 ರನ್​ಗಳನ್ನ ನೀಡಿದ್ರು. ಎರಡು ಪ್ರಮುಖ ವಿಕೆಟ್​ಗಳನ್ನ ಉರುಳಿಸಿದ್ರು.  ಈ ಮೂಲಕ ಒಂದೇ ಸೀಸನ್​ನಲ್ಲಿ ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡ್ರು.

ಇಷ್ಟೇ ಅಲ್ದೇ ಕೃನಾಲ್ ಪಾಂಡ್ಯ ಐಪಿಎಲ್ ಇತಿಹಾಸನದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ.  ಅಂದ್ರೆ ಐಪಿಎಲ್ ವೃತ್ತಿ ಜೀವನದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿರುವುದು ಇದು ಎರಡನೇ ಬಾರಿ. 2017 ರ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದ ಕೃನಾಲ್ ಪಾಂಡ್ಯ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ್ರು. ಌಕ್ಚುಲಿ ಆವತ್ತಿನ ಮ್ಯಾಚಲ್ಲಿ ಮುಂಬೈ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕಲೆ ಹಾಕಿದ್ದೇ 129 ರನ್ಸ್. ಮುಂಬೈ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದು ಕೃನಾಲ್ ಪಾಂಡ್ಯ. 38 ಬಾಲ್​ಗಳಲ್ಲೇ 47 ರನ್ಸ್ ಕಲೆ ಹಾಕಿದ್ರು. ಹಾಗೇ ಬೌಲಿಂಗ್​ನಲ್ಲಿ 4 ಓವರ್ ಬೌಲ್ ಮಾಡಿ 31 ರನ್ಸ್ ಕೊಟ್ಟಿದ್ರು. ಕೃನಾಲ್ ರ ಈ ಆಲ್ ರೌಂಡ್ ಪ್ರದರ್ಶನದಿಂದ ಮುಂಬೈ ತಂಡ ಕೇವಲ 1 ರನ್​ನಿಂದ ಗೆದ್ದು ಬೀಗಿತ್ತು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ರು. ಇಷ್ಟೇ ಅಲ್ದೇ ಕೃನಾಲ್ ಪಾಂಡ್ಯ ತಮ್ಮ ಐಪಿಎಲ್ ಕರಿಯರ್​ನಲ್ಲಿ ಒಟ್ಟಾರೆಯಾಗಿ ನಾಲ್ಕು ಬಾರಿ ಫೈನಲ್ ಗೆದ್ದ ತಂಡದ ಭಾಗವಾಗಿದ್ದಾರೆ. 2017, 2019 ಮತ್ತು 2020 ರಲ್ಲಿ ಮುಂಬೈ ತಂಡದೊಂದಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ಆರ್​ಸಿಬಿ ಪರ ತಮ್ಮ ನಾಲ್ಕನೇ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಸದ್ಯ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಖಾಯಂ ಸದಸ್ಯ ಆಗಿದ್ರೂ ಕೂಡ ಕೃನಾಲ್​ಗೆ ಅಷ್ಟೆಲ್ಲಾ ಅವಕಾಶ ಸಿಕ್ಕಿಲ್ಲ. ಹಾಗಂತ ಟೀಂ ಇಂಡಿಯಾ ಪರ ಆಡೇ ಇಲ್ಲ ಅಂತಲ್ಲ. ಬೆರಳೆಣಿಗೆ ಪಂದ್ಯಗಳನ್ನ ಮಾತ್ರವೇ ಆಡಿದ್ದಾರೆ.

ಭಾರತದ ಪರ ಕೃನಾಲ್ ಆಟ!

2021ರ ಮಾ. 23ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ

2021ರ ಜುಲೈನಲ್ಲಿ ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಕೊನೇ ಪಂದ್ಯ

ಭಾರತದ ಒಟ್ಟು 5 ಪಂದ್ಯಗಳನ್ನ ಆಡಿದ್ದು 130 ರನ್ ಕಲೆ, 2 ವಿಕೆಟ್ ಬೇಟೆ

2018ರಲ್ಲಿ ಈಡನ್ ಗಾರ್ಡನ್ಸ್‌ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟಿ-20ಐ

ಕೊನೇದಾಗಿ 2021ರ ಜುಲೈ 25ರಂದು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ

ಟಿ-20ಐನಲ್ಲಿ 19 ಪಂದ್ಯಗಳ 10 ಇನ್ನಿಂಗ್ಸ್​ ಗಳಿಂದ 124 ರನ್ 15 ವಿಕೆಟ್

ನಾಲ್ಕು ವರ್ಷಗಳಿಂದ ಕೃನಾಲ್​ ಗೆ ಟೀಂ ಇಂಡಿಯಾ ಬಾಗಿಲು ಬಂದ್

Shantha Kumari

Leave a Reply

Your email address will not be published. Required fields are marked *