ಬೆಂಗಳೂರಿನ ಇಸ್ಕಾನ್‌ ದೇವಸ್ಥಾನದ ಸುತ್ತಮುತ್ತ 2 ದಿನ ವಾಹನ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ – ಪರ್ಯಾಯ ಮಾರ್ಗ ಯಾವುದು?

ಬೆಂಗಳೂರಿನ ಇಸ್ಕಾನ್‌ ದೇವಸ್ಥಾನದ ಸುತ್ತಮುತ್ತ 2 ದಿನ ವಾಹನ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ – ಪರ್ಯಾಯ ಮಾರ್ಗ ಯಾವುದು?

ಬೆಂಗಳೂರು: ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ  ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಕೂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಜನ್ಮಾಷ್ಟಮಿ ಪ್ರಯುಕ್ತ ನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಇಸ್ಕಾನ್‌ ದೇವಸ್ಥಾನಕ್ಕೆ ಸೆಪ್ಟೆಂಬರ್‌ 6 ಮತ್ತು 7 ರಂದು ಹೆಚ್ಚಿನ ಭಕ್ತರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರ್ಜರಿ ತಯಾರಿ – ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ

ಸಿಲಿಕಾನ್‌ ಸಿಟಿನಲ್ಲೂಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಹಾಗಾಗಿ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಗೆ ಯಾವುದೇ ಧಕ್ಕೆ ಬರಬಾರದೆಂದು ಬಸ್​ ವ್ಯವಸ್ಥೆಯನ್ನು ಸುಗಮಗೊಳಿಸಲು ಬುಧವಾರ ಹಾಗೂ ಗುರುವಾರ  ಮಟ್ಟಿಗೆ ಒಂದಷ್ಟು ಏರ್ಪಾಡುಗಳನ್ನು ಮಾಡಿಕೊಂಡಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್​​ಗಳ  ಸಂಚಾರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದೆ. ಸಂಚಾರ ವ್ಯವಸ್ಥೆ ಸುಗಮವಾಗಿರಲೆಂದು ಇಸ್ಕಾನ್ ಸುತ್ತಮುತ್ತ ಬಸ್ ಸಂಚಾರವನ್ನು ನಿಷೇಧ ಮಾಡಲಾಗಿದೆ. ರಾಜ್ ಕುಮಾರ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ  ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬುಧವಾರ ಹಾಗೂ ಗುರುವಾರ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ಯಶವಂತಪುರ ಕಡೆಯಿಂದ ರಾಜ್ ಕುಮಾರ್ ರಸ್ತೆ-ಮೆಜೆಸ್ಟಿಕ್ ಕಡೆಗೆ ಮಾಮೂಲು ಮಾರ್ಗದಲ್ಲಿ ಸಂಚರಿಸುವ ಬದಲು ಯಶವಂತಪುರ-ಮಾರಪ್ಪನಹಳ್ಳಿ ಫ್ಲೈ ಓವರ್ ಮೂಲಕ BHEL ಅಂಡರ್ ಪಾಸ್, ಕೆ.ಸಿ.ಜನರಲ್ ಆಸ್ಪತ್ರೆಯ ಮಾರ್ಗವಾಗಿ ಬಸ್​​ಗಳು ಸಂಚಾರ ಮಾಡಲಿವೆ.

ಇನ್ನು ಯಶವಂತಪುರ, ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮಿ ಲೇ ಔಟ್ ಕಡೆಯೂ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಜ್ ಕುಮಾರ್ ರಸ್ತೆ ಮೂಲಕ ಸಾಗಿ 10 ನೇ ಕ್ರಾಸ್ ನಲ್ಲಿ ತಿರುವು ಪಡೆಯಲು ಸೂಚನೆ ನಿಡಲಾಗಿದೆ. ಇಸ್ಕಾನ್ ಗೆ ಹಲವು ಭಕ್ತರು, ಗಣ್ಯರ ಆಗಮನ ಹಿನ್ನೆಲೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಈ ಸೂಚನೆ ನೀಡಲಾಗಿದೆ.

suddiyaana