ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸರ್ವೆ ಮಾಡಲು ಆದೇಶಿಸಿದ ಕೋರ್ಟ್

ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸರ್ವೆ ಮಾಡಲು ಆದೇಶಿಸಿದ ಕೋರ್ಟ್

ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಥುರಾದ ಸ್ಥಳೀಯ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಶಾಹಿ ಈದ್ಗಾ ಮಸೀದಿಯನ್ನು ಸರ್ವೆ ಮಾಡುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಶಾಹಿ ಈದ್ಗಾ ಮಸೀದಿ ಇರೋ ಜಾಗ ಕೃಷ್ಣನ ಜನ್ಮಸ್ಥಳವಾಗಿದೆ. ಕೃಷ್ಣ ಹುಟ್ಟಿದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನ ತೆರವುಗೊಳಿಸಬೇಕು ಅಂತಾ ಆಗ್ರಹಿಸಿ ಹಿಂದೂ ಸೇನಾ ಸಂಘಟನೆ ಕೋರ್ಟ್​​ ಮೆಟ್ಟಿಲೇರಿತ್ತು. ಇದೀಗ ಅರ್ಜಿ ವಿಚಾರಣೆ ಬಳಿಕ ಮಥುರಾ ಸ್ಥಳೀಯ ಕೋರ್ಟ್, ಮಸೀದಿಯನ್ನ ಸರ್ವೆ ಮಾಡುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿದೆ.

ಇದನ್ನೂ ಓದಿ: ‘ನಿರಂತರ ರಾಜಕೀಯ ವಾಗ್ದಾಳಿ, ರಾಹುಲ್‌ಗೆ ತಟ್ಟುತ್ತಿಲ್ಲ ಚಳಿ’ -ಕನ್ಹಯ್ಯ ಕುಮಾರ್

ವಾರಾಣಸಿಯ ಜ್ಞಾನವ್ಯಾಪಿ ಮಸೀದಿ ಮಾದರಿಯಲ್ಲೇ ಶಾಹಿ ಈದ್ಗಾ ಮಸೀದಿಯನ್ನ ಸರ್ವೆ ಮಾಡುವಂತೆ ಕೋರ್ಟ್ ಸೂಚನೆ ಕೊಟ್ಟಿದೆ. ಹೀಗಾಗಿ ಜನವರಿ 2ರಿಂದ ಸರ್ವೆ ಕಾರ್ಯ ಆರಂಭವಾಗಲಿದ್ದು, ಜನವರಿ 20ರ ಒಳಗಾಗಿ ಅಂತಿಮ ವರದಿಯನ್ನ ಸಲ್ಲಿಸುವಂತೆ ಕೋರ್ಟ್​ ಡೆಡ್​​ಲೈನ್ ನೀಡಿದೆ.

suddiyaana