32 ಲಕ್ಷ ಸಾಲ.. ಹೆತ್ತವರಿಗೆ 30 ಬಾರಿ ಚಾಕು ಇರಿತ – ಶ್ವೇತಾ ಕೆನತ್ ಮಾಡಿರುವ ಪಾಪ ಕೃತ್ಯ ಅತ್ಯಂತ ಭೀಕರ..!
ಸ್ಕೆಚ್ ಹಾಕಿದ್ದು ತಾಯಿಗೆ – ಬಲಿಯಾಗಿದ್ದು ಮೂವರು – ತ್ರಿವಳಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್

32 ಲಕ್ಷ ಸಾಲ.. ಹೆತ್ತವರಿಗೆ 30 ಬಾರಿ ಚಾಕು ಇರಿತ – ಶ್ವೇತಾ ಕೆನತ್ ಮಾಡಿರುವ ಪಾಪ ಕೃತ್ಯ ಅತ್ಯಂತ ಭೀಕರ..!ಸ್ಕೆಚ್ ಹಾಕಿದ್ದು ತಾಯಿಗೆ – ಬಲಿಯಾಗಿದ್ದು ಮೂವರು – ತ್ರಿವಳಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್

ಕೆ.ಆರ್ ಪುರಂನಲ್ಲಿ ನಡೆದ ತ್ರಿಬಲ್ ಮರ್ಡರ್ ಕೇಸ್‌ನಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಆತಂಕಕಾರಿ ವಿಚಾರವೇನೆಂದರೆ, ತಾಯಿಯನ್ನು ಕೊಲೆ ಮಾಡಲೆಂದೇ ಶ್ವೇತಾ ಸ್ಕೆಚ್ ಹಾಕಿದ್ದಳು. ಆದರೆ, ಇವರಂದುಕೊಂಡಂತೆ ಸೋಮವಾರ ಆಗಿರಲಿಲ್ಲ. ಹೀಗಾಗಿ ಮೂವರನ್ನೂ ಕೊಲೆ ಮಾಡಿದ್ದಾರೆ. ಅದು ಕೂಡಾ 32 ಲಕ್ಷ ರೂಪಾಯಿ ಸಾಲಕ್ಕೆ 30 ಬಾರಿ ಚಾಕು ಇರಿದು ಕೊಂದಿದ್ದಾರೆ ಪಾಪಿ ಪ್ರೇಮಿಗಳು.

ಇದನ್ನೂ ಓದಿ:ಅಮ್ಮನನ್ನು ಕೊಂದಿದ್ದು ನಾನೇ ಎಂದ ಶ್ವೇತಾ – ಡೈರಿಯಲ್ಲಿತ್ತು ತ್ರಿವಳಿ ಕೊಲೆಯ ಹಿಂದಿನ ರಹಸ್ಯ

ಸೋಮವಾರ ರಾತ್ರಿ (ಜೂನ್ 22) ಇಡೀ ಬೆಂಗಳೂರೇ ಬೆಚ್ಚಿಬೀಳುವಂತಾ ಕೃತ್ಯ ಕೆ.ಆರ್ ಪುರಂನಲ್ಲಿ ನಡೆದಿತ್ತು. ಪಾಪಿ ಮಗಳು ಮತ್ತು ಆಕೆಯ ಪಾಪಿ ಪ್ರೇಮಿ ಮೂರು ಕೊಲೆ ಮಾಡಿದ್ದರು. ಶ್ವೇತಾ ತನ್ನ ಪ್ರಿಯಕರನ ಜೊತೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಅಮಾನುಷವಾಗಿ ಕೊಂದು ಹಾಕಿದ್ದಳು. ಇದೀಗ ಈ ಕೇಸ್‌ಗೆ ಸಂಬಂಧಪಟ್ಟಂತೆ ಒಂದೊಂದೇ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಅಂದು ಶ್ವೇತಾ ಮತ್ತು ಕೆನತ್ ತಾಯಿ ಮುತ್ತುಲಕ್ಷ್ಮಿಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದರಂತೆ. ಸಾಲ ಕಿರಿಕಿರಿಯಿಂದ ಮುಕ್ತವಾಗಲು ತಾಯಿಯನ್ನು ಕೊಲ್ಲಲು ನಿರ್ಧರಿಸಿದ್ದರು. ಪ್ಲ್ಯಾನ್ ಪ್ರಕಾರ ಸಂಜೆಯೊಳಗೆ ಶ್ವೇತಾ ಮತ್ತು ಕೆನತ್ ಸೇರಿ ಮುತ್ತುಲಕ್ಷ್ಮಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಮುತ್ತುಲಕ್ಷ್ಮಿಯ ದೇಹವನ್ನು ಬಾತ್‌ರೂಮ್‌ನಲ್ಲಿ ಬಚ್ಚಿಟ್ಟಿದ್ದಾರೆ. ಸಂಜೆ ಆದ ಮೇಲೆ ತಂದೆ ಸೋಮಸುಂದರ್ ಮತ್ತು ತಂಗಿ ಸುಪ್ರಿಯಾ ಶ್ವೇತಾ ಮತ್ತು ಕೆನತ್ ಇರುವ ಮನೆಗೆ ಬರುತ್ತಾರೆ. ಆಗ ಸತ್ಯ ಹೊರಬರುತ್ತೆ ಅನ್ನೋ ಕಾರಣಕ್ಕೆ ಸುಪ್ರಿಯಾಗೂ ಇಬ್ಬರೂ ಸೇರಿ ಚಾಕುವಿನಿಂದ ಇರಿಯುತ್ತಾರೆ. ಆಗ ತಂದೆ ಸೋಮಶೇಖರ್ ಮಗಳು ಸುಪ್ರಿಯಾ ಸಹಾಯಕ್ಕೆ ಬರುತ್ತಾರೆ. ಆಗ ಕೆನತ್ ಸೋಮಸುಂದರ್ ತಲೆಗೆ ಮಚ್ಚಿನಿಂದ ಹೊಡೆಯುತ್ತಾನೆ. ಸುಪ್ರಿಯಾ ಅಲ್ಲೇ ಕುಸಿದುಬಿದ್ದು ಸಾಯುತ್ತಾಳೆ. ಸೋಮಸುಂದರ್ ಮನೆಯಿಂದ ಹೊರಗೆ ಓಡಿ ಬರುತ್ತಾರೆ. ಪೊಲೀಸರು ತಕ್ಷಣವೇ ಆಗಮಿಸಿದರು ಕೂಡಾ ಆಸ್ಪತ್ರೆಗೆ ಸಾಗಿಸುವ ವೇಳೆ ಮಗಳ ಕೃತ್ಯವನ್ನು ಪೊಲೀಸರಿಗೆ ಹೇಳುತ್ತಾರೆ. ಮತ್ತು ಸೋಮಸುಂದರ್ ಸಾಯುತ್ತಾರೆ. ಇದೀಗ ಕೊನೆಗೂ ಶ್ವೇತಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಪಾಪಿ ಕೆನತ್ ಗಾಗಿ ಹುಡುಕಾಟ ಮುಂದುವರೆದಿದೆ.

ಇನ್ನೂ ಶ್ವೇತಾ ಹಾಗೂ ಕೆನತ್ ವಿಚಾರಕ್ಕೆ ಬರುವುದಾದರೆ, ಈ ಇಬ್ಬರೂ ನ್ಯೂಹಾರಿಜನ್ ಕಾಲೇಜ್‌ನಲ್ಲಿ ಬಿ.ಟೆಕ್ ಓದುವಾಗಲೇ ಇಬ್ಬರ ನಡುವೆ ಲವ್ ಆಗಿದೆ. ಬಿ.ಟೆಕ್ ಮುಗಿಸಿ ಇಬ್ಬರು ಕೆಲಸಕ್ಕೆ ಸೇರಿಕೊಂಡು ಲಿವ್ ಇನ್ ರಿಲೇಷನ್‌ನಲ್ಲಿದ್ದರು. ನಂತರ ಕೆಲಸ ಬಿಟ್ಟ ಇವರಿಬ್ಬರು, ಸ್ವಂತ ಉದ್ಯಮ ಪ್ರಾರಂಭಿಸಲು ಪ್ಲಾನ್ ಮಾಡಿ ಪೋಷಕರ ಹೆಸರಿನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 32 ಲಕ್ಷ ಹಣ ಸಾಲ ಪಡೆದಿರುತ್ತಾರೆ. 32 ಲಕ್ಷ ಸಾಲದ ಬಡ್ಡಿಯಾಗಲಿ ಏನು ಕೂಡ ಕಟ್ಟದ ಕಾರಣ ಪೋಷಕರಿಗೆ ನೋಟಿಸ್ ಹೋಗಿರುತ್ತದೆ. ಅಲ್ಲಿಯ ತನಕ ಆರೋಪಿಗಳು ಸಾಲ ತಗೆದುಕೊಂಡಿರುವ ವಿಚಾರ ಪೋಷಕರಿಗೆ ಗೋತ್ತಿರುವುದಿಲ್ಲ. ಯಾವಾಗ ಬ್ಯಾಂಕ್‌ನಿಂದ ನೋಟಿಸ್ ಬರುತ್ತೋ ಆಗ ವಿಷಯ ತಿಳಿದ ಶ್ವೇತಾ ಪೋಷಕರು ಸೀದಾ ಮನೆಗೆ ಬಂದು ಪ್ರಶ್ನೆ ಮಾಡಿದ್ದರು. ಜೊತೆಗೆ ಈ ಇಬ್ಬರೂ ಜೊತೆಯಲ್ಲಿರುವುದು ತಿಳಿಯುತ್ತಂದೆ ಶ್ವೇತಾ ತಾಯಿ ಮಗಳನ್ನು ಮನೆಗೆ ಕರೆಸಿಕೊಂಡು ಬುದ್ದಿ ಕೂಡಾ ಹೇಳಿದ್ದರಂತೆ.

ಇತ್ತ ಕೆನತ್ ಪೋಷಕರಿಗೂ ಕೂಡಾ ಮಗ ಲಿವ್ ಇನ್ ರಿಲೇಷನ್‌ನಲ್ಲಿರುವ ವಿಚಾರ ತಿಳಿದಿರಲಿಲ್ಲ. ಕೆನತ್ ತಂದೆ ಹೆಚ್‌ಎಎಲ್ ನೌಕರರಾಗಿರುತ್ತಾರೆ. ಪೋಷಕರ ಸಹಕಾರ ಸಿಗದೆ ಇದ್ದ ಕಾರಣಕ್ಕೆ ಆರೋಪಿ ಕೆನತ್ ಅಸಮಾಧಾನಗೊಂಡಿದ್ದ ಎಂದು  ಹೇಳಲಾಗುತ್ತಿದೆ

Sulekha

Leave a Reply

Your email address will not be published. Required fields are marked *