ದೆಹಲಿಗೆ ಹೋಗಲು ಸಿದ್ಧರಾಮಯ್ಯ ಸಿದ್ಧತೆ – ನಾನು ಹೋಗಲ್ಲ ಎಂದು ಡಿಕೆಶಿ ಹೇಳಿದ್ದು ಯಾಕೆ?

ದೆಹಲಿಗೆ ಹೋಗಲು ಸಿದ್ಧರಾಮಯ್ಯ ಸಿದ್ಧತೆ – ನಾನು ಹೋಗಲ್ಲ ಎಂದು ಡಿಕೆಶಿ ಹೇಳಿದ್ದು ಯಾಕೆ?

ಬೆಂಗಳೂರು: ರಾಜ್ಯದ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ಭಾರಿ ಪೈಪೋಟಿ ನಡೆಯುತ್ತಿದೆ. ಮುಂದಿನ ಸಿಎಂ ಆಯ್ಕೆಯನ್ನು ಹೈಕಮಾಂಡ್‌ ಗೆ ಬಿಟ್ಟುಕೊಡಲಾಗಿದೆ. ಇಂದು ದೆಹಲಿಯಲ್ಲಿ ಮುಂದಿನ ಸಿಎಂ ಆಯ್ಕೆ ನಡೆಯಲಿದೆ. ಆದರೆ ತಾನು ದೆಹಲಿಗೆ ಹೋಗುವ ಇನ್ನು ತೀರ್ಮಾನ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇಂದು ರಾತ್ರಿಯೊಳಗೆ ಮುಖ್ಯಮಂತ್ರಿ ಆಯ್ಕೆ – ಯಾರಿಗೆ ಸಿಗಲಿದೆ ಸಿಎಂ ಪಟ್ಟ?

ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ಅಭಿಮಾನಿಗಳು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಅಲ್ಲದೇ ಪೂಜೆ ಪುನಸ್ಕಾರಗಳು ಇವೆ. ಹೀಗಾಗಿ ದೆಹಲಿಗೆ ಹೋಗುವ ಬಗ್ಗೆ ತೀರ್ಮಾನಿಸಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ರಾಜ್ಯದ ಜನತೆ ಈಗಾಗಲೇ ಬರ್ತ್‌ ಡೇ ಗಿಫ್ಟ್‌ ಕೊಟ್ಟಿದ್ದಾರೆ. ನನ್ನ ನೇತೃತ್ವದ ಬಗ್ಗೆ ವಿಶ್ವಾಸವಿಟ್ಟು ಕಾಂಗ್ರೆಸ್‌ ಗೆ ಬಹುಮತ ನೀಡಿದ್ದಾರೆ. ಆದರೆ ಹೈಕಮಾಂಡ್‌ ಬರ್ತ್‌ ಡೇ ಗಿಫ್ಟ್‌ ಕೊಡುತ್ತೋ, ಇಲ್ಲವೋ ಎಂಬುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಡಿಕೆಶಿ ಭಾಗಿಯಾಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಸಿದ್ದರಾಮಯ್ಯ ಮಾತ್ರ 1.45 ರ ವಿಮಾನದಲ್ಲಿ ದೆಹಲಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದಾರೆ.

suddiyaana