ಪೇಮೆಂಟ್ ಕೊಟ್ಟಿಲ್ಲ.. ಕಾಲ್ ರಿಸೀವ್ ಮಾಡ್ತಿಲ್ಲ.. – ಯಶ್ ತಾಯಿ ವಿರುದ್ಧ ಕೊತ್ತಲವಾಡಿ ಚಿತ್ರದ ಕಲಾವಿದನಿಂದ ಆರೋಪ!

ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಕೊತ್ತಲವಾಡಿ ಸಿನಿಮಾ ನಿರ್ಮಾಣ ಮಾಡಿದ್ರು. ಕಳೆದ ಆಗಸ್ಟ್ 1 ರಂದು ಸಿನಿಮಾ ರಿಲೀಸ್ ಆಗಿದ್ದು, ಅಂದುಕೊಂಡಷ್ಟು ರೆಸ್ಪಾನ್ಸ್ ಸಿಕ್ಕಿಲ್ಲ. ಇದೀಗ ಯಶ್ ತಾಯಿ ವಿರುದ್ಧ ಕೊತ್ತಲವಾಡಿ ಸಿನಿಮಾದ ಕಲಾವಿದರು ಆರೋಪ ಮಾಡಿದ್ದಾರೆ. ಕೆಲವು ಕಲಾವಿದರಿಗೆ ಪೇಮೆಂಟ್ ಕೊಟ್ಟಿಲ್ಲ ಎಂದು ವಿಡಿಯೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಸೋತ ಪಾಕಿಸ್ತಾನದ ತಲೆ ಗಿರ ಗಿರ – ಪಾಕ್ ಕ್ರಿಕೆಟ್ ತಂಡದ ನಿರ್ದೇಶಕನಿಗೆ ಗೇಟ್‌ಪಾಸ್
ಯಶ್ ತಾಯಿ ನಿರ್ಮಾಣದ ಸಿನಿಮಾ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಸಿನಿಮಾಗೆ ಅಂದುಕೊಂಡಷ್ಟು ರೆಸ್ಪಾನ್ಸ್ ಸಿಕ್ಕಿಲ್ಲ. ಈಗಾಗಲೇ ಈ ಸಿನಿಮಾ ಒಟಿಟಿಗೂ ಕಾಲಿಟ್ಟಿದೆ. ಆದರೆ, ಕೆಲವು ಕಲಾವಿದರಿಗೆ ಇನ್ನೂ ಪೇಮೆಂಟ್ ಆಗಿಲ್ಲವೆಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಚಿತ್ರದ ಕಲಾವಿದ ಮಹೇಶ್ ಗುರು ಅವರು ವಿಡಿಯೋ ಮಾಡಿ ದೂರಿದ್ದಾರೆ. ಯಶ್ ತಾಯಿಗೆ ಈ ವಿಚಾರ ತಲುಪಬೇಕು ಎಂದು ತಿಳಿಸಿದ್ದಾರೆ.
ಕಲಾವಿದನ ವಿಡಿಯೋದಲ್ಲಿ ಏನಿದೆ?
ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ಕೊತ್ತಲವಾಡಿ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬರ್ ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. ಮೂರು ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್ನಲ್ಲಿ ಭಾಗಿ ಆಗಿದ್ದೆ. ಆ ಬಳಿಕ ಕರೆ ಮಾಡಿದ್ರೆ ಕಾಲ್ ಎತ್ತಲಿಲ್ಲ. ಟೀಸರ್, ಟ್ರೇಲರ್ ಈವೆಂಟ್ ಆದರೂ ನಮಗೆ ಆಹ್ವಾನವೇ ಕೊಡಲಿಲ್ಲ. ಈಗ ಸಿನಿಮಾ ಒಟಿಟಿಗೆ ಬಂದಿದೆ. ಆದರೂ ನಮಗೆ ಪೇಮೆಂಟ್ ಆಗಿಲ್ಲ. ನಿರ್ಮಾಪಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಡಿಯೋ ಮಾಡಿದ್ದೇನೆ. ಇದು ಪುಷ್ಪಾ ಅವರಿಗೂ ಗೊತ್ತಾಗಲಿ ಎಂದು ಮಹೇಶ್ ಗುರು ಹೇಳಿದ್ದಾರೆ. ಅನೇಕರು ಈ ವಿಡಿಯೋಗೆ ಯಶ್ ತಾಯಿಗೆ ತಲುಪೋವರೆಗೂ ಶೇರ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಆಗಿದೆ.

ನೋಡಿರಿ

