ಹ್ವಾಯ್ ಬನ್ನಿ.. ಕೊಡಿ ಹಬ್ಬಕ್ಕೆ ಹ್ವಾಪ – ಕೋಟೇಶ್ವರ ಕೊಡಿ ಹಬ್ಬ ಕಾಣಲು ಕಣ್ಣೆರಡು ಸಾಲದು..!

ಹ್ವಾಯ್ ಬನ್ನಿ.. ಕೊಡಿ ಹಬ್ಬಕ್ಕೆ ಹ್ವಾಪ – ಕೋಟೇಶ್ವರ ಕೊಡಿ ಹಬ್ಬ ಕಾಣಲು ಕಣ್ಣೆರಡು ಸಾಲದು..!

ಕರಾವಳಿಯಲ್ಲಿ ನಡೆಯುವ ಜಾತ್ರೆಗಳಲ್ಲಿ ಕೊಡಿ ಹಬ್ಬವೂ ಒಂದು. ಶ್ರೀ ಕೋಟಿಲಿಂಗೇಶ್ವರ ದೇವರ ರಥೋತ್ಸವ ಕರಾವಳಿ ಕರ್ನಾಟಕದ ರಥೋತ್ಸವಗಳಲ್ಲಿ ಹಿರಿದು ಎಂಬ ಪ್ರಸಿದ್ದಿಯಿದೆ. ಇತಿಹಾಸ ಪ್ರಸಿದ್ಧ ಈ ಜಾತ್ರೆಗೆ ಜನಸಾಗರವೇ ಹರಿದು ಬರುತ್ತದೆ. ಕುಂದಾಪುರ ತಾಲೂಕು ಕೋಟೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯೇ ಈ ಕೊಡಿ ಹಬ್ಬ. ಕೊಡಿ ಹಬ್ಬದ ಸಂಭ್ರಮ ಶುರುವಾಗಿದ್ದು, ಡಿಸೆಂಬರ್ 5ಕ್ಕೂ ಕೂಡಾ ಈ ಹಬ್ಬದ ಸಂಭ್ರಮ ಮುಂದುವರೆಯಲಿದೆ.

ಇದನ್ನೂ ಓದಿ:ರಾಜ್ಯದ ಜನರಿಗೆ ಚಳಿ ಜೊತೆಗೆ ತರಕಾರಿ ಬೆಲೆ ಏರಿಕೆಯ ಬಿಸಿ! – 1 ಕೆಜಿ ನುಗ್ಗೆ ಬೆಲೆ 700 ರೂಪಾಯಿ!

ಕೋಟೆಶ್ವರ ಕೊಡಿ ಹಬ್ಬ. ಕುಂದಾಪುರ ಭಾಗದ ಜನರ ಸಂಭ್ರಮದ ಹಬ್ಬ. ಕೋಟೆಶ್ವರ ಕೊಡಿ ಹಬ್ಬಕ್ಕೆ ಹೋಗಿ, ಕಬ್ಬಿನ ಕೊಡಿ ತರುವ ಹಬ್ಬವೇ ಈ ಕೊಡಿ ಹಬ್ಬ. ಕೊಡಿ ಅಂದರೆ ಕಬ್ಬು. ನವದಂಪತಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷ. ನವದಂಪತಿ ಕೊಡಿ ಹಬ್ಬಕ್ಕೆ ಬಂದು ಕಬ್ಬಿನ ಕೊಡಿ ಹಿಡಿದುಕೊಂಡು ಮನೆಗೆ ಬಂದರೆ ಅವರ ಬದುಕಲ್ಲಿ ವಂಶದ ಕುಡಿ ಅರಳುತ್ತೆ ಎಂಬ ನಂಬಿಕೆಯೂ ಇದೆ. ಅಂದರೆ, ಕೊಡಿ ಹಬ್ಬಕ್ಕೆ ಬಂದು ಜೋಡಿ ಕಬ್ಬಿನ ಕೊಡಿ ಕೊಂಡರೆ, ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಹೊಸ ಮದುಮಕ್ಕಳ ಹಬ್ಬದಲ್ಲಿ ಮದುಮಕ್ಕಳದ್ದೇ ಕಲರವ. ಈ ಕೊಡಿಹಬ್ಬದಲ್ಲಿ ಅದ್ದೂರಿ ರಥೋತ್ಸವ ಕೂಡಾ ನಡೆಯುತ್ತದೆ. ರಥದಲ್ಲಿ ವಿರಾಜಮಾನನಾದ ಕೋಟಿಲಿಂಗೇಶ್ವರನಿಗೆ ಬರುವ ಭಕ್ತಾದಿಗಳು ಹಣ್ಣು ಕಾಯಿ ಸಮರ್ಪಿಸುತ್ತಾರೆ. ಕೃಷಿಕರಿಗೂ ಕೂಡಾ ಕೊಡಿ ಹಬ್ಬ ಎಂದರೆ ಸಂಭ್ರಮ. ಕೊಡಿ ಹಬ್ಬಕ್ಕೆ ಹೋಗಿ ಕಬ್ಬಿನ ಕೊಡಿ ತಂದರೆ ಕೃಷಿಯಲ್ಲೂ ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಕೊಡಿ ಹಬ್ಬದ ಇತಿಹಾಸದ ಬಗ್ಗೆ ಹೇಳುವುದಾದರೆ, ಬಸ್ರೂರಿನ ರಾಜ ವಸು ಚಕ್ರವರ್ತಿಗೆ ಮಕ್ಕಳಾಗದಿದ್ದಾಗ, ಕೋಟಿಲಿಂಗೇಶ್ವರ ದೇವಸ್ಥಾನವನ್ನು ಪುನರ್ನಿರ್ಮಿಸುವ ಹರಕೆ ಹೊರುತ್ತಾನೆ. ಸಂತಾನ ಪ್ರಾಪ್ತಿಯಾದ ಬಳಿಕ ದೇವಾಲಯ ನಿರ್ಮಾಣಕ್ಕೆ ಮುಂದಾದಾಗ, ಬ್ರಹ್ಮರಥ ಸಿದ್ಧವಾಗದ ಕಾರಣ, ಬಿದಿರು ಮತ್ತು ಕಬ್ಬಿನ ಬಗಸೆಯಿಂದ ತಾತ್ಕಾಲಿಕ ರಥವನ್ನು ಮಾಡಿ ಉತ್ಸವ ನಡೆಸಲಾಗುತ್ತದೆ. ಈ ಘಟನೆಯ ನೆನಪಿಗಾಗಿ, ಪ್ರತಿ ವರ್ಷ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಕಬ್ಬನ್ನು ಬಳಸಿ ಉತ್ಸವ ನಡೆಸಲಾಗುತ್ತದೆ, ಈ ಕಾರಣಕ್ಕಾಗಿಯೇ ಈ ಹಬ್ಬಕ್ಕೆ ಕೊಡಿ ಹಬ್ಬ ಎಂಬ ಹೆಸರು ಬಂದಿದೆ.

ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಕೋಟಿತೀರ್ಥ ಪುಷ್ಕರಣಿಯಿದೆ. ಇದು ಕೂಡಾ ಕರ್ನಾಟಕದ ಅತಿ ದೊಡ್ಡ ಪುಷ್ಕರಣಿ ಎಂದು ಪ್ರಸಿದ್ಧಿ ಪಡೆದಿದೆ.

Sulekha