ವಿದ್ಯಾರ್ಥಿಗಳ ಆತ್ಮಹತ್ಯೆ ತಪ್ಪಿಸಲು ಮಾಸ್ಟರ್ ಪ್ಲಾನ್ – ಪಿಜಿ, ಹಾಸ್ಟೆಲ್‌ಗಳಿಗೆ ಜಿಲ್ಲಾಡಳಿತದಿಂದ ವಿಚಿತ್ರ ಆದೇಶ!
ಪಿಜಿ, ಹಾಸ್ಟೇಲ್‌ಗಳಲ್ಲಿ ವಿದ್ಯಾರ್ಥಿಗಳು ಕುಗ್ಗುತ್ತಿದ್ದಾರೆ. ಮನೋಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಇದೀಗ ರಾಜಸ್ಥಾನದ ಕೋಟದಲ್ಲಿನ ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಜಿಲ್ಲಾಡಳಿತ ಹೊಸ ಪ್ಲಾನ್ ವೊಂದನ್ನು ಮಾಡಿದ್ದು, ಪಿಜಿ, ಹಾಸ್ಟೆಲ್ ಗಳಿಗೆ ನೋಟಿಸ್‌ವೊಂದನ್ನು ಕಳುಹಿಸಿದೆ.
ಇದನ್ನೂ ಓದಿ: ಸಾಕು ನಾಯಿಗಳು ಕಚ್ಚಾಡಿಕೊಂಡಿತೆಂದು ಮಾಲೀಕರ ಜಗಳ! – ನಡೆದೇ ಹೋಯ್ತು ಘೋರ ದುರಂತ!
ಪ್ರವೇಶಾತಿ ಪರೀಕ್ಷಾ ತರಬೇತಿ ಕೇಂದ್ರವಾದ ಕೋಟದಲ್ಲಿ ಈ ವರ್ಷದಲ್ಲಿ 20 ವಿದ್ಯಾರ್ಥಿಗಳು ಹಾಸ್ಟೆಲ್, ಪಿಜಿಗಳಲ್ಲಿ ಫ್ಯಾನ್‌ಗಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆ ಹೆಚ್ಚಾಗುತ್ತಿದೆ. ಫ್ಯಾನ್ ಗಳನ್ನು ಬದಲಿಸಲಾಗುತ್ತಿಲ್ಲ ಎಂಬ ಹಲವು ದೂರುಗಳು ಆಡಳಿತ ಮಂಡಳಿ ವಿರುದ್ಧ ಕೇಳಿಬಂದಿದ್ದವು. ಇದೀಗ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು ಸ್ಪ್ರಿಂಗ್ ಇರುವ ಫ್ಯಾನ್‌ಗಳನ್ನು ಅಳವಡಿಸಬೇಕು ಎಂದು ಆದೇಶ ನೀಡಿದೆ. ಇದರಿಂದ ನೇಣು ಬಿಗಿದುಕೊಂಡರೂ ಸ್ಪಿಂಗ್ ಇರುವ ಕಾರಣ ಭಾರ ಬಿದ್ದಾಕ್ಷಣ ಫ್ಯಾನ್ ಕೆಳಕ್ಕೆ ಬೀಳಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ವರ್ಷ ಕೋಟ ತರಬೇತಿ ಕೇಂದ್ರದಲ್ಲಿ ಕನಿಷ್ಠ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.