ಅಕ್ಕಿಯಲ್ಲೂ ಬಂತು “Non-Vegetarian” rice  – ರೈಸ್ ಟೇಸ್ಟ್ ಹೇಗಿದೆ ಗೊತ್ತಾ?

ಅಕ್ಕಿಯಲ್ಲೂ ಬಂತು “Non-Vegetarian” rice  – ರೈಸ್ ಟೇಸ್ಟ್ ಹೇಗಿದೆ ಗೊತ್ತಾ?

ಸಾಮಾನ್ಯವಾಗಿ ನಾವು ವೈಟ್ ರೈಸ್, ಬಾಯಿಲ್ಡ್ ರೈಸ್, ಕೆಂಪಕ್ಕಿ, ಹೀಗೆ ಹಲವು ವೆರೈಟಿಯ ಅಕ್ಕಿಗಳನ್ನು ಕೇಳಿದ್ದೇವೆ.. ಡಯಟ್ ಮಾಡುವವರು ಬ್ರೌನ್ ರೈಸ್ ಕೂಡ ತಿಂತಾರೆ. ಆದ್ರೆ ಯಾವತ್ತಾದ್ರೂ ನಾನ್ವೆಜ್ ರೈಸ್ ಬಗ್ಗೆ ಕೇಳಿದ್ದೀರಾ? ಇದೀಗ ವಿಜ್ಞಾನಿಗಳು ಮಾಂಸಹಾರಿ ಅಕ್ಕಿಯನ್ನು ಕಂಡುಹಿಡಿದಿದ್ದಾರೆ.

ಮನುಷ್ಯರನ್ನು ವೆಜ್ ತಿನ್ನೋರು, ನಾನ್ ವೆಜ್ ತಿನ್ನೊರು ಅಂತ ನಮ್ಮಲ್ಲಿ ವಿಂಗಡಿಸೋದು ಸಾಮಾನ್ಯ. ಚಿಕನ್, ಮಟನ್ ಎಗ್, ಫಿಶ್ ತಿನ್ನುವ ನಾನ್ ವೆಜ್‌ ಪ್ರಿಯರೇ ಆಗಿರಲಿ, ಸೊಪ್ಪು‌ಸಾರು, ಪಲ್ಯ ತಿನ್ನುವ ವೆಜ್ಜಿಗಳೇ ಆಗಿರಲಿ, ಎಲ್ಲರೂ ತಿನ್ನೋದು ಅನ್ನವನ್ನೇ.  ರೆಸ್ಟೋರೆಂಟ್ ಗಳಲ್ಲಿ ಅಥವಾ ಫಂಕ್ಷನ್ ಗಳಲ್ಲಿ ವೈಟ್, ಬಾಯಿಲ್ಡ್ ಅಂತ ಮಾತ್ರ  ಅನ್ನದಲ್ಲಿ ವ್ಯತ್ಯಾಸ ಇರೋಕೆ ಸಾಧ್ಯ.. ಆದ್ರೆ ಈಗ ವಿಜ್ಞಾನಿಗಳು ನಾನ್ವೆಜ್ ರೈಸ್ ಕಂಡುಹಿಡಿದಿದ್ದಾರೆ. ಇದರಿಂದ ಮಾಡಿದ ಅನ್ನ ಸಂಪೂರ್ಣ  ಮಾಂಸಭರಿತ ರುಚಿಯನ್ನ ಹೊಂದಿರುತ್ತದೆಯಂತೆ! ಇದು ಮಾಂಸದ ಅಕ್ಕಿ. ಇದನ್ನು ಬಿರಿಯಾನಿಯಂತೆ ತಿನ್ನಬಹುದು. ಇದನ್ನು ತಯಾರಿಸಿದರೆ ನೀವು ಪ್ರತ್ಯೇಕವಾಗಿ ಮಾಂಸದ ಅಡುಗೆ ಮಾಡುವ  ಅಗತ್ಯವಿಲ್ಲ. ಇದರ ರುಚಿಯಂತೂ ಅದ್ಭುತವಾಗಿದೆಯಂತೆ. ವಿಜ್ಞಾನಿಗಳು ಇದನ್ನು ಮಾಂಸಾಹಾರಿ ಅಕ್ಕಿ ಎಂದು ಕರೆಯುತ್ತಾರೆ. ಇದು ತುಂಬಾನೆ ಉತ್ತಮ ಕ್ವಾಲಿಟಿಯ ಅಕ್ಕಿಯಾಗಿದೆ.

ಇದನ್ನೂ ಓದಿ: ವಿವಾದಗಳ ಸುಳಿಯಲ್ಲಿ ಡಿಬಾಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸ್ ದಾಖಲು

ದಕ್ಷಿಣ ಕೊರಿಯಾದ ಯೋನ್ಸೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಹೈಬ್ರಿಡ್ ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ್ದಾರೆ. ಇದಕ್ಕೆ ಅನೇಕ ರೀತಿಯ ಮಾಂಸವನ್ನು ಸೇರಿಸಲಾಗಿದೆ. ಜೊತೆಗೆ, ಮೀನಿನ ರುಚಿಯನ್ನೂ ಬೆರೆಸಲಾಗಿದೆ.

ಸಂಶೋಧಕರ ಪ್ರಕಾರ, ಇದು ನೋಡಲು ಸಾಮಾನ್ಯ ಅಕ್ಕಿಯಂತೆ ಕಾಣುತ್ತದೆ, ಆದರೆ ಇದು ಸಾಮಾನ್ಯ ಮಾಂಸಕ್ಕಿಂತ 8% ಹೆಚ್ಚು ಪ್ರೋಟೀನ್ ಮತ್ತು 7% ಹೆಚ್ಚು ಕೊಬ್ಬನ್ನು ಹೊಂದಿರುತ್ತದೆ. ವಿಶೇಷವೆಂದರೆ ಇದು 11 ದಿನಗಳವರೆಗೆ ಹಾಳಾಗುವುದಿಲ್ಲ ಮತ್ತು ಇದನ್ನು ಸಾಮಾನ್ಯ ತಾಪಮಾನದಲ್ಲಿ ಸುಲಭವಾಗಿ ಸಂಗ್ರಹಿಸಬಹುದು. ಅಷ್ಟೇ ಅಲ್ಲ ಈ ಅಕ್ಕಿ ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನು ಈ ಅಕ್ಕಿಯನ್ನು ಯುದ್ಧ ಅಥವಾ ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಬಳಸಬಹುದು. ಸೈನ್ಯಗಳ ಬಳಕೆಗಾಗಿ ಸಹ ನೀಡಬಹುದು. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇದು ತುಂಬಾ ಪರಿಣಾಮಕಾರಿ ಅಕ್ಕಿಯಾಗಿದೆ ಎಂದು ಸಹ ಸಂಶೋಧಕರು ತಿಳಿಸಿದ್ದಾರೆ. ಇದು ಪ್ರೋಟೀನ್ ನ ಪರ್ಯಾಯವಾಗಬಹುದು.

ಇನ್ನು ಮಾಂಸದ ಅಕ್ಕಿಯ ಉತ್ಪಾದನಾ ವಿಧಾನವು ತುಂಬಾ ಸರಳವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗಿದ್ದರೂ ಇದನ್ನು ಉತ್ಪಾದಿಸುವ ಸಂಪೂರ್ಣ ವಿವರ ಇನ್ನೂ ಸಿಕ್ಕಿಲ್ಲ..  ಮಾರುಕಟ್ಟೆಗೆ ಈ‌ ಅಕ್ಕಿ ಬಂದರೆ ಇದಕ್ಕೆ ಡಿಮ್ಯಾಂಡ್ ಹೇಗಿರಲಿದೆ ಅಂತ ಗೊತ್ತಿಲ್ಲ.. ಸದ್ಯಕ್ಕಿದು ಜಾನುವಾರುಗಳ ಟಿಶ್ಯು ಬೆರೆಸಿ ತಯಾರಿಸುವ ಅಕ್ಕಿ ಅಂತಷ್ಟೇ ಗೊತ್ತಾಗಿದೆ‌. ಅಲ್ಲದೆ ಈ ಅಕ್ಕಿಯಿಂದಾಗಿ, ಕಾರ್ಬನ್‌ ಡೈ ಆಕ್ಸೈಡ್ ಉತ್ಪಾದನೆ ಕಡಿಮೆ ಆಗಲಿದ್ಯಂತೆ. ಹೀಗಾಗಿ ಇದೊಂದು ಇಕೋ‌ ಫ್ರೆಂಡ್ಲಿ ಅಕ್ಕಿ ಅಂತಾನೂ ಸಂಶೋಧಕರು ಹೇಳಿಕೊಂಡಿದ್ದಾರೆ.

Shwetha M