ಕೊಪ್ಪಳದಲ್ಲಿ ಅಮಾನವೀಯ ಘಟನೆ – ಖಾಸಗಿ ಕ್ಷಣದ ವಿಡಿಯೋ ಇಟ್ಟುಕೊಂಡು ಅಪ್ರಾಪ್ತೆ ಮೇಲೆ 7 ಜನರಿಂದ ಅತ್ಯಾ*ಚಾರ

ಕೊಪ್ಪಳದಲ್ಲಿ ಅಮಾನವೀಯ ಘಟನೆ – ಖಾಸಗಿ ಕ್ಷಣದ ವಿಡಿಯೋ ಇಟ್ಟುಕೊಂಡು ಅಪ್ರಾಪ್ತೆ ಮೇಲೆ 7 ಜನರಿಂದ ಅತ್ಯಾ*ಚಾರ

ಕೊಪ್ಪಳ ತಾಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿಯನ್ನ 7 ಜನ ಅತ್ಯಾಚಾರ ನಡೆಸಿದ್ದಾರೆ. ತಾಲೂಕಿನ ಗ್ರಾಮದ ಯುವಕನೊಬ್ಬನ ಜೊತೆ 9ನೇ ತರಗತಿಯ ಬಾಲಕಿಗೆ ಕಳೆದ ವರ್ಷ ಪರಿಚಯವಾಗಿತ್ತು. ಈ ವೇಳೆ ಆ ಯುವಕ ನಿನ್ನನ್ನು ಪ್ರೀತಿ ಮಾಡೋದಾಗಿ ಅಪ್ರಾಪ್ತ ಬಾಲಕಿಯನ್ನು ನಂಬಿಸಿದ್ದ. ನಂತ್ರ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪಾಪಿ, ಅದ್ದನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ.

ಇದನ್ನೂ ಓದಿ:  ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಈ ಪನ್ನೀರು ರಾಜ್ಯದಲ್ಲಿ ಒಂದು ವರ್ಷ ಬ್ಯಾನ್‌

ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗುವ ವಿಡಿಯೋವನ್ನು ತನ್ನ ಸ್ನೇಹಿತರಿಗೆ ಆ ಯುವಕ ಶೇರ್ ಮಾಡಿದ್ದಾನೆ. ಆ ವಿಡಿಯೋವನ್ನು ಇಟ್ಟುಕೊಂಡು ಆತನ 7 ಮಂದಿ ಸ್ನೇಹಿತರು ಬಾಲಕಿಗೆ ತೋರಿಸಿದ್ದು, ನಮಗೆ ಸಹಕಾರ ನೀಡದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಾ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಸ್ನೇಹಿತ ಕಳುಹಿಸಿದ ವಿಡಿಯೋವನ್ನು ದುರುಪಯೋಗಪಡಿಸಿಕೊಂಡ ಏಳು ಮಂದಿ ಆತನ ಸ್ನೇಹಿತರು ಅಪ್ರಾಪ್ತ ಬಾಲಕಿಯ ಮೇಲೆ ಬೇರೆ ಬೇರೆ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದ್ದು, ಸದ್ಯ ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಕೊಪ್ಪಳ ಗ್ರಾಮೀಣ ಠಾಣೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Kishor KV

Leave a Reply

Your email address will not be published. Required fields are marked *