ತಮಿಳುನಾಡಿನಲ್ಲಿ ವಿಜಯ ಪರ್ವ – ಕಾಲಿವುಡ್ ನಟರಿಂದ ವಿಜಯ್ ದಳಪತಿಗೆ ಶುಭಾಶಯ

ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ತಮಿಳು ಚಿತ್ರರಂಗದ ದಳಪತಿ ವಿಜಯ್ಗಾರು ತಮಿಳುನಾಡು ಚುನಾವಣೆಯಲ್ಲಿ ಹೊಸ ಪರ್ವ ಆರಂಭಿಸಿದ್ದಾರೆ. ವಿಜಯ್ಗೆ ತಮಿಳು ಚಿತ್ರರಂಗದ ನಟ, ನಟಿಯರು ಶುಭಾಶಯ ಕೋರುತ್ತಿದ್ದಾರೆ.
ಇದನ್ನೂ ಓದಿ:ಮೋದಿ, ಅಮಿತ್ ಶಾ ರಣತಂತ್ರಕ್ಕೆ ದೀದಿ ಕೋಟೆ ಛಿದ್ರ – ಪಶ್ಚಿಮ ಬಂಗಾಳದಲ್ಲಿ ಇನ್ನೇನಿದ್ರೂ ಬಿಜೆಪಿಯದ್ದೇ ರಾಜ್ಯಭಾರ!
ತಮಿಳುನಾಡಿನ ರಾಜಕಾರಣದಲ್ಲಿ ವಿಜಯ್ ದಳಪತಿ ಪೊಲಿಟಿಕಲ್ ಸ್ಟಾರ್ ಆಗಿ ಮೆರೆದಿದ್ದಾರೆ. ಚುನವಾಣೆಯಲ್ಲಿ ವಿಜಯ್ ಪಕ್ಷ ಗೆಲುವು ದಾಖಲಿಸುತ್ತಿದ್ದಂತೆ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ. ನಟ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರನ್ನು ಅಭಿನಂದಿಸಿದ್ದಾರೆ. ತನ್ನ ಚೊಚ್ಚಲ ಚುನಾವಣೆಯಲ್ಲಿ, ಟಿವಿಕೆ ಟ್ರೆಂಡ್ಗಳಲ್ಲಿ 100 ಸ್ಥಾನಗಳ ಗಡಿ ದಾಟಿಸಿದ ವಿಜಯ್ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟರಾದ ನಾನಿ, ನಿಖಿಲ್ ಸಿದ್ಧಾರ್ಥ, ಅಜು ವರ್ಗೀಸ್ ಮತ್ತು ಸಿಬಿ ಸತ್ಯರಾಜ್, ಜೊತೆಗೆ ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು ಅವರು ಶುಭಾಶಯಗಳನ್ನು ಪೋಸ್ಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
ಅಭಿನಂದನೆಗಳು ವಿಜಯ್ ಸರ್. ಮೊದಲು ಅನುಮಾನಿಸಿದರು. ಈಗ ಕಿರೀಟ ಧರಿಸಿದರು. ನಮ್ಮ ಮನೆಯಲ್ಲಿ ನಡೆದಿದ್ದು ಈಗ ಅದು ನಮ್ಮ ನೆರೆ ಮನೆಯಲ್ಲಿ ನಡೆಯುತ್ತಿದೆ. ಗೆಲ್ಲಲ್ಲ ಎಂದುಕೊಂಡವರ ಗೆಲುವು ಯಾವಾಗಲೂ ಸಂಪೂರ್ಣ ಎಂದು ಬರೆದಿದ್ದಾರೆ. ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ ತಮಿಳುನಾಡಿನ ಜನರಿಗೆ ಒಳ್ಳೆಯದೇ ಬರಲಿ ಎಂದು ಆಶಿಸುತ್ತೇನೆ ಎಂದು ನಾನಿ ಬರೆದಿದ್ದಾರೆ.
ನಿಖಿಲ್ ಸಿದ್ಧಾರ್ಥ ಕೂಡ ವಿಜಯ್ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. ನಮ್ಮ ಭಾರತೀಯ ಸಿನಿಮಾ ಉದ್ಯಮದ ದಳಪತಿ ವಿಜಯ್ಗಾರು ತಮಿಳುನಾಡು ರಾಜಕೀಯದಲ್ಲಿ ಭಾರಿ ಛಾಪು ಮೂಡಿಸುತ್ತಿರುವುದನ್ನು ಮತ್ತು ಏಕೈಕ ಅತಿದೊಡ್ಡ ಪಕ್ಷದ ಐತಿಹಾಸಿಕ ಸಾಧನೆಯಾಗಿ ಹೊರಹೊಮ್ಮುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತದೆ ಎಂದು ಅವರು ಬರೆದಿದ್ದಾರೆ.
ಅದೃಷ್ಟ ಧೈರ್ಯಶಾಲಿಗಳಿಗೆ ಅನುಕೂಲಕರವಾಗಿದೆ ಎನ್ನುವುದರ ಐತಿಹಾಸಿಕ ಉದಾಹರಣೆ! ಎಂದು ಅಜು ವರ್ಗೀಸ್ ಟ್ವೀಟ್ ಮಾಡಿದ್ದಾರೆ. ವಿಜಯ್ ಅವರ ಮುಖವಿರುವ ಧ್ವಜವನ್ನು ಹಂಚಿಕೊಂಡ ವೆಂಕಟ್ ಪ್ರಭು, “ಎಲ್ಲಾ ಕಾಲದಲ್ಲೂ ಶ್ರೇಷ್ಠ” ಎಂದು ಬರೆದಿದ್ದಾರೆ. ನಟ ಸಿಬಿ ಸತ್ಯರಾಜ್ ಕೂಡ ವಿಜಯ್ ಅವರಿಗೆ ಶುಭ ಹಾರೈಸಿದರು. ಒಂದು ಟ್ವೀಟ್ನಲ್ಲಿ, ಅವರು “ಬ್ಲಾಸ್ಟು! ಬ್ಲಾಸ್ಟು!” ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ,”ನಾವು ಚೆನ್ನಾಗಿದ್ದೇವೆ, ನಾವು ಚೆನ್ನಾಗಿರುತ್ತೇವೆ, ನಾವೆಲ್ಲರೂ ಚೆನ್ನಾಗಿರುತ್ತೇವೆ!” ಎಂದು ಹೇಳಿದರು. ಇದು ವಿಜಯ್ ಅವರು ಭಾಷಣಗಳಲ್ಲಿ ಬಳಸಿದ ಡೈಲಾಗ್ ಆಗಿತ್ತು.
ನಟ ಚಿಯಾನ್ ವಿಕ್ರಮ್ ಅವರು ವಿಶ್ ಮಾಡಿ ಕಂಗ್ರಾಟ್ಸ್ ನನ್ಬ ಎಂದು ಬರೆದು ವಿಜಯ್ ಜೊತೆಗಿನ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ನೀವಿವತ್ತು ಚರಿತ್ರೆ ಸೃಷ್ಟಿಸಿದ್ದೀರಿ ಎಂದು ಕೂಡಾ ವಿಕ್ರಮ್ ಬರೆದಿದ್ದಾರೆ.

ನೋಡಿರಿ

