ಕೊಹ್ಲಿಗೆ ಕ್ಯಾರೇ ಎನ್ನದ ಶ್ರೇಯಸ್ – ಸಿರಾಜ್ ಗೆ ಬೌಲಿಂಗ್ ನಿರಾಕರಿಸಿದ್ದೇಕೆ?
DSP ಅಂದ್ರೆ ಗಂಭೀರ್ ಗೇಕೆ ಉರಿ?

ಕೊಹ್ಲಿಗೆ ಕ್ಯಾರೇ ಎನ್ನದ ಶ್ರೇಯಸ್ – ಸಿರಾಜ್ ಗೆ ಬೌಲಿಂಗ್ ನಿರಾಕರಿಸಿದ್ದೇಕೆ?DSP ಅಂದ್ರೆ ಗಂಭೀರ್ ಗೇಕೆ ಉರಿ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯನ್ನ ಭಾರತ ಗೆದ್ದಿದೆ. ಭಾನುವಾರ ಸರಣಿಯ ಕೊನೇ ಪಂದ್ಯದಲ್ಲಿ ಗೆಲ್ಲೋ ಮೂಲಕ ಸಿರೀಸ್​ನ ಸೀಲ್ ಮಾಡಿಕೊಳ್ತು. ಆದ್ರೆ ಪಂದ್ಯದ ವೇಳೆ ನಡೆದ ಅದೊಂದು ಮೂಮೆಂಟ್ ಬಾರೀ ಚರ್ಚೆಯಾಗ್ತಿದೆ. ಶ್ರೇಯಸ್ ಅಯ್ಯರ್ ವರ್ತನೆಗೆ ಟೀಕೆಗಳು ವ್ಯಕ್ತವಾಗ್ತಿವೆ. ವಿರಾಟ್ ಕೊಹ್ಲಿಗೆ ಅನುಭವವೂ ಬೆಲೆ ಇಲ್ವಾ ಅನ್ನೋ ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ : ಕೋಟಿ ಕೊಟ್ರೂ ಕೈಕೊಟ್ಟ ಸ್ಟಾರ್ಸ್ – ದುಬಾರಿ ಪ್ಲೇಯರ್ ಗಳಿಗೆ ಗೇಟ್ ಪಾಸ್

ಶ್ರೇಯಸ್ ಅಯ್ಯರ್ ಪ್ರಸ್ತುತ ಭಾರತ ಟಿ-20ಐ ತಂಡದ ನಾಯಕ. ಹಾಗೇ ಶುಭ್​ಮನ್ ಗಿಲ್ ಆಬ್ಸೆನ್ಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಕ್ಯಾಪ್ಟನ್ ಆಗಿ ಲೀಡ್ ಮಾಡಿದ್ರು. ನಾಲ್ಕನೇ ಪಂದ್ಯದಲ್ಲಿ ಸೋತ್ರೆ ಕೊನೇ ಪಂದ್ಯವನ್ನ ಗೆಲ್ಲೋ ಮೂಲಕ  ಸರಣಿ ಕೈವಶ ಮಾಡಿಕೊಂಡ್ರು. ಆದ್ರೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮಾತಿಗೆ ಕ್ಯಾರೇ ಅನ್ನದ ಶ್ರೇಯಸ್ ಌಟಿಟ್ಯೂಡ್​ ಬಾರೀ ವೈರಲ್ ಆಗಿದೆ.

ಸಿರಾಜ್ ಗೆ ಬೌಲಿಂಗ್ ಕೊಡಿ ಎಂದ ಕೊಹ್ಲಿ.. ಕೇರ್ ಮಾಡದ ಶ್ರೇಯಸ್!

ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ 209 ರನ್​ಗಳಿಗೆ ಆಲೌಟ್ ಆಗಿತ್ತು. 210 ರನ್​ಗಳ ಸಾಧಾರಣ ಟಾರ್ಗೆಟ್ ಇದ್ದ ಕಾರಣ ನ್ಯೂಜಿಲೆಂಡ್​ ಪಡೆಯನ್ನ ಬೌಲಿಂಗ್​ನಲ್ಲೇ ಕಟ್ಟಿಹಾಕಬೇಕಾದ ಅನಿವಾರ್ಯತೆ ಭಾರತದ ಮುಂದಿತ್ತು. ಹೀಗಾಗಿ ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ  ನಾಯಕ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಮೈದಾನದಲ್ಲಿ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವಿರಾಟ್ ಕೊಹ್ಲಿ, ಬೌಲಿಂಗ್ ಬದಲಾವಣೆ ಕುರಿತು ಅಂದ್ರೆ ಮೊಹಮ್ಮದ್ ಸಿರಾಜ್ ಅವರಿಗೆ ಬೌಲಿಂಗ್ ನೀಡುವ ಬಗ್ಗೆ ಸಲಹೆ ನೀಡಿದ್ರು. ಆದ್ರೆ ಕೊಹ್ಲಿ ತಮ್ಮ ಮಾತನ್ನ ಕಂಪ್ಲೀಟ್ ಮಾಡೋ ಮೊದಲೇ ಶ್ರೇಯಸ್ ಅಯ್ಯರ್ ಇಲ್ಲ ಎನ್ನುವಂತೆ ತಲೆಯಾಡಿಸಿ, ಅಲ್ಲಿಂದ ಫೀಲ್ಡಿಂಗ್ ಸೆಟ್ ಮಾಡಲು ಮುಂದೆ ನಡೆದರು. ಆ ನಂತ್ರದ ಓವರ್​ನಲ್ಲಿ ಔಕಿಬ್ ನಬಿಗೆ ಬೌಲಿಂಗ್ ಮಾಡಲು ನೀಡಿದ್ರು. ಇದೇ ವಿಡಿಯೋ ಫುಲ್ ವೈರಲ್ ಆಗಿದೆ. ಕಿಂಗ್ ಕೊಹ್ಲಿ ಮಾತಿಗೆ ಬೆಲೆ ನೀಡದ ಶ್ರೇಯಸ್ ನಡೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಶ್ರೇಯಸ್ ಅಯ್ಯರ್ ಕನಿಷ್ಠ ನಿಂತು ಅವ್ರ ಸಜೇಷನ್ ಕೇಳಬೇಕಿತ್ತು. ಇಷ್ಟೊಂದು ಅಹಂಕಾರ ಏಕೆ ಎಂದು ಪ್ರಶ್ನಿಸಿದ್ದಾರೆ. ಅಯ್ಯರ್ ಅವರ ಬಾಡಿ ಲಾಂಗ್ವೇಜ್ ಬಗ್ಗೆ ಟೀಕೆ ಮಾಡಿದ್ದಾರೆ. ಹಾಗಂತ ಇಲ್ಲಿ ಕೊಹ್ಲಿ ಮಾತಿಗೆ ಬೆಲೆ ಕೊಡ್ತಿಲ್ಲ ಅನ್ನೋದಕ್ಕಿಂತ ಜಾಸ್ತಿ ಮೊಹಮ್ಮದ್ ಸಿರಾಜ್​ರನ್ನೇ ತಂಡದಿಂದ ಸೈಡ್​ಲೈನ್ ಮಾಡ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

ಕೊಹ್ಲಿ , ರೋಹಿತ್ ನಾಯಕತ್ವದಲ್ಲಿ ಹೀರೋ ಈಗ ಸೈಡ್ ಲೈನ್!

ಭಾರತದ ಪರ ಸಾಕಷ್ಟು ಪಂದ್ಯಗಳಲ್ಲಿ ಗೇಮ್ ಚೇಂಜರ್ ಆಗಿರೋ ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಭಾರತದ ಪರ ಆಗೊಂದು ಈಗೊಂದು ಪಂದ್ಯಗಳನ್ನಷ್ಟೇ ಆಡ್ತಿರೋದು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದಾಗ ಸಿರಾಜ್ ಪರ್ಫಾಮೆನ್ಸ್ ಮತ್ತು ಪ್ರಸೆನ್ಸ್ ಪೀಕ್​ನಲ್ಲಿತ್ತು. ಆದ್ರೆ ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಸಿರಾಜ್​​ಗೆ ಅವಕಾಶಗಳೂ ಕಮ್ಮಿಯಾಗಿದೆ. 2023ರಲ್ಲಿ ಒಂದೇ ವರ್ಷ 25 ಏಕದಿನ ಪಂದ್ಯಗಳಲ್ಲಿ 44 ವಿಕೆಟ್ಗಳನ್ನ ಬೇಟೆಯಾಡಿದ್ದ ಸಿರಾಜ್​ಗೆ 2024ರಿಂದ ಈಚೆಗೆ ಏಕದಿನ ಕ್ರಿಕೆಟ್​ನಲ್ಲಿ ಕೇವಲ 11 ಪಂದ್ಯಗಳನ್ನಷ್ಟೇ ಆಡಲು ಅವಕಾಶ ಸಿಕ್ಕಿದೆ. ಕಿವೀಸ್ ಟೂರ್​ನಲ್ಲಿ ತಂಡದಲ್ಲಿದ್ರೂ ಮೊದಲ ನಾಲ್ಕೂ ಪಂದ್ಯಗಳಲ್ಲೂ ಬೆಂಚ್ ಕಾದಿದ್ದ ಸಿರಾಜ್​ ಕೊನೇ ಪಂದ್ಯಕ್ಕೆ ಅನಿವಾರ್ಯವಾಗಿ ಆಡಲೇಬೇಕಿತ್ತು.  ಹೀಗಾಗಿ ಚಾನ್ಸ್ ಕೊಟ್ಟಿದ್ರು. ಸಿಕ್ಕ ಅವಕಾಶದಲ್ಲಿ ಬ್ಯಾಟಿಂಗ್​ನಲ್ಲಿ ಕ್ರೂಶಿಯಲ್ ಆಗಿ 14 ರನ್​ಗಳನ್ನ ಕಲೆ ಹಾಕಿದ್ದ ಸಿರಾಜ್ ಬೌಲಿಂಗ್​ನಲ್ಲೂ 2 ವಿಕೆಟ್ಸ್ ಬೇಟೆಯಾಡಿದ್ರು. ವಿಪರ್ಯಾಸ ಅಂದ್ರೆ ಹೆಡ್​ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್​ಮೆಂಟ್​ನ ನಡೆ ನೋಡ್ತಿದ್ರೆ ನೆಕ್ಸ್​ಟ್ ಟೆಸ್ಟ್ ಸಿರೀಸ್​ನಲ್ಲೂ ಚಾನ್ಸ್ ಕೊಡ್ತಾರಾ ಇಲ್ವಾ ಅನ್ನೋ ಡೌಟ್ಸ್ ಇದೆ.

ಡಿಎಸ್ ಪಿ ಸಿರಾಜ್ ಗಿಲ್ಲ ಚಾನ್ಸ್!

2023ರ ಏಕದಿನ ವಿಶ್ವಕಪ್ ಬಳಿಕ ಸಿರಾಜ್‌ ಗೆ ನಿಯಮಿತ ಅವಕಾಶ ಸಿಕ್ಕಿಲ್ಲ

2025ರ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಅವರಿಗೆ ಸ್ಥಾನ ಸಿಗಲಿಲ್ಲ

ಅರ್ಷದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಆನ್ಶುಲ್ ಕಾಂಬೋಜ್ ಸೇರಿ ಪೈಪೋಟಿ

2027ರ ವಿಶ್ವಕಪ್ ದೃಷ್ಟಿಯಿಂದ ಹೊಸ ಬೌಲರ್‌ ಗಳಿಗೂ ಅವಕಾಶದ ನೆಪ

Shantha Kumari

Leave a Reply

Your email address will not be published. Required fields are marked *