ದೆಹಲಿಯಲ್ಲಿ ಕೊಹ್ಲಿ Vs ರಾಹುಲ್ ಫೈಟ್ – ಯಾರಿಗೆ ಸಪೋರ್ಟ್ ಮಾಡ್ತಾರೆ ಕನ್ನಡಿಗರು?

ಭಾನುವಾರ ರಾತ್ರಿ ನಡೆಯಲಿರೋ ಬೆಂಗಳೂರು ವರ್ಸಸ್ ಡೆಲ್ಲಿ ಮ್ಯಾಚ್ ಬರೀ ಸೋಲು ಗೆಲುವಿನ ಮ್ಯಾಚ್ ಅಲ್ವೇ ಅಲ್ಲ. ರಿವೇಂಜ್ ಮ್ಯಾಚ್. ಚಿನ್ನಸ್ವಾಮಿಯಲ್ಲಿನ ಸೋಲಿಗೆ ಅರುಣ್ ಜೇಟ್ಲಿಯಲ್ಲಿ ರೆಡ್ ಆರ್ಮಿ ತಿರುಗೇಟು ಕೊಡ್ಬೇಕು. ಬಟ್ ಅದಕ್ಕಿಂತ್ಲೂ ದೊಡ್ಡ ಚರ್ಚೆಯಾಗ್ತಿರೋದು ಇದು ವಿರಾಟ್ ಕೊಹ್ಲಿ ವರ್ಸಸ್ ಕೆಎಲ್ ರಾಹುಲ್ ನಡುವಿನ ಫೈಟ್ ಅಂತಾ. ಬೆಂಗಳೂರಲ್ಲಿ ರಾಹುಲ್ ಮಾಡಿದ್ದ ಸೆಲೆಬ್ರೇಷನ್ಗೆ ಕೊಹ್ಲಿ ಫ್ಯಾನ್ಸ್ ಗರಂ ಆಗಿದ್ರು. ಕೊಟ್ಟಿದ್ದನ್ನ ಇಟ್ಕೊಂಡು ಕೊಹ್ಲಿಗೆ ಅಭ್ಯಾಸನೇ ಇಲ್ಲ ಗುರು ವಾಪಸ್ ಕೊಟ್ಟೇ ಕೊಡ್ತಾರೆ ಇರು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಶುರು ಮಾಡಿದ್ರು. ಇದೀಗ ಆ ಟೈಂ ಬಂದಿದೆ.
ಇದನ್ನೂ ಓದಿ : ತವರಿನಲ್ಲಿ ಮತ್ತೆ ಸೋತ ಚೆನ್ನೈ – ಪ್ಲೇ-ಆಫ್ ಕನಸು ಕೈಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್ನಲ್ಲಿ ಆರ್ಸಿಬಿ ಒಂದೂ ಸಲವೂ ಕಪ್ ಗೆಲ್ಲದೇ ಇದ್ರೂ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರೋ ಟೀಂ ಆಗಿದೆ. ಇದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಕಿಂಗ್ ವಿರಾಟ್ ಕೊಹ್ಲಿ. ನಮಗೆ ಐಪಿಎಲ್ ಕಪ್ ಸಿಗ್ದೇ ಇದ್ರೂ ಪರ್ವಾಗಿಲ್ಲ ಕೊಹ್ಲಿಯನ್ನ ಬಿಟ್ಟು ಕೊಡೋ ಮಾತೇ ಇಲ್ಲ ಅಂತಾ ಸಪೋರ್ಟ್ ಮಾಡ್ತಿದ್ದಾರೆ. ಅವ್ರ ಈ ಲಾಯಲ್ಟಿ ಕಂಡೇ ಕೊಹ್ಲಿ ಕೂಡ ಬೆಂಗಳೂರು ಟೀಂ ಬಿಟ್ಟು ಹೋಗಿಲ್ಲ. ಸೋ ಕರ್ನಾಟಕದ ಜನರ ಪಾಲಿಗೆ ಕೊಹ್ಲಿ ದತ್ತು ಪುತ್ರನೇ ಆಗಿದ್ದಾರೆ. ಆದ್ರೆ ದತ್ತು ಪುತ್ರನ ಎದುರಲ್ಲಿ ಮನೆ ಮಗ ಕೆಎಲ್ ರಾಹುಲ್ ಮಾಡಿದ್ದ ಸಂಭ್ರಮ ಕೆಲವರ ಕಣ್ಣನ್ನ ಕೆಂಪಾಗಿಸಿದೆ.
ಈ ಸೀಸನ್ನಲ್ಲಿ ಅತೀ ಹೆಚ್ಚು ಹಲ್ಚಲ್ ಎಬ್ಬಿಸಿದ್ದ ಸೀನ್ಗಳಲ್ಲಿ ಇದೂ ಒಂದು. ನಾರ್ಮಲಿ ಕೆಎಲ್ ರಾಹುಲ್ ಕ್ಲಾಸಿಕ್ ಪ್ಲೇಯರ್. ಎಂಥದ್ದೇ ಸಿಚುಯೇಷನ್ ಇದ್ರೂ ಕೂಲ್ ಌಂಡ್ ಕಾಮ್ ಆಗಿ ಫೇಸ್ ಮಾಡೋ ಜೆಂಟಲ್ಮೆನ್. ಆನ್ ದಿ ಫೀಲ್ಡ್, ಆಫ್ ದಿ ಫೀಲ್ಡ್ ಅಗ್ರೆಸ್ಸಿವ್ ಆಗಿ ಕಂಡಿದ್ದೇ ಇಲ್ಲ. ಬಟ್ ಏಫ್ರಿಲ್ 10ರಂದು ಬೆಂಗಳೂರಲ್ಲಿ ನಡೆದಿದ್ದ ಬೆಂಗಳೂರು ವರ್ಸಸ್ ಡೆಲ್ಲಿ ಮ್ಯಾಚಲ್ಲಿ ರಾಹುಲ್ ಬೇರೆಯದ್ದೇ ರೀತಿಯಲ್ಲಿ ಕಂಡಿದ್ರು. ಫಸ್ಟ್ ಬ್ಯಾಟಿಂಗ್ ಮಾಡಿ ಆರ್ಸಿಬಿ 163 ರನ್ ಕಲೆ ಹಾಕಿತ್ತು. ಈಸಿ ಟಾರ್ಗೆಟ್ ಬೆನ್ನತ್ತಿದ ಡಿಸಿಗೂ ಆಘಾತ ಎದುರಾಗಿತ್ತು. 3 ಓವರ್ಗಳಲ್ಲೇ 3 ವಿಕೆಟ್, 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದ್ರೆ ಯಾವಾಗ ಕೆಎಲ್ ರಾಹುಲ್ ಕ್ರೀಸ್ ಕಚ್ಚಿ ನಿಂತ್ರೋ ಅವ್ರನ್ನ ತಡೆಯೋರೇ ಇರ್ಲಿಲ್ಲ. 53 ಬಾಲ್ಗಳನ್ನು ಎದುರಿಸಿದ ರಾಹುಲ್ 6 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ, 175 ಸ್ಟ್ರೈಕ್ ರೇಟ್ ನಲ್ಲಿ ಅಜೇಯ 93 ರನ್ ಗಳಿಸಿ ತಂಡವನ್ನು ಗೆಲ್ಲಿಸಿಬಿಟ್ಟಿದ್ರು. ಡೆಲ್ಲಿ ಟೀಂ ಗೆದ್ದಾದ್ಮೇಲೆ ಅವ್ರ ಸೆಲೆಬ್ರೇಷನ್ನೇ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಮೈದಾನದಲ್ಲಿ ಬ್ಯಾಟ್ನಲ್ಲೇ ವೃತ್ತ ಬರೆದು ಬ್ಯಾಟ್ನಿಂದ ನೆಲಕ್ಕೆ ಕುಟ್ಟಿ ಎದೆ ಮುಟ್ಟಿಕೊಂಡು ಇದು ನನ್ನ ಮನೆ ಎನ್ನುವಂತೆ ಸನ್ನೆ ಮಾಡಿದ್ರು.
ಆವತ್ತು ರಾಹುಲ್ ಮಾಡಿದ್ದ ಸೆಲೆಬ್ರೇಷನ್ಗೆ ಕೊಹ್ಲಿ ಯಾವ್ದೇ ಥರ ರಿಯಾಕ್ಟ್ ಮಾಡಿರಲಿಲ್ಲ. ಬಟ್ ನಾರ್ಮಲಿ ಕೊಹ್ಲಿ ಈ ಥರ ಟ್ರಿಗರ್ ಆದಾಗ ಅದನ್ನ ವಾಪಸ್ ಕೊಟ್ಟು ತಾವೂ ಸೆಲೆಬ್ರೇಟ್ ಮಾಡ್ತಾರೆ. ಸೋ ಈ ಪಂದ್ಯದಲ್ಲಿ ಕೊಹ್ಲಿ ಮೇಲೆಯೇ ಎಲ್ಲರ ಕಣ್ಣಿದೆ. ದೆಹಲಿ ಮೈದಾನ ಕಿಂಗ್ ಕೊಹ್ಲಿ ಹೋಮ್ ಗ್ರೌಂಡ್. ಆಟ ಇಲ್ಲಿಗೆ ನಿಂತಿಲ್ಲ. ಈಗ ಶುರುವಾಗಿದೆ, ನೀವು ಶುರು ಮಾಡಿದ್ದೀರಾ, ನಾವು ಮುಗಿಸ್ತೀವಿ. ಈ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿ, ರಾಹುಲ್ರಂತೆಯೇ ಸಂಭ್ರಮಾಚರಣೆ ಮಾಡ್ತಾರೆ ಎನ್ನುತ್ತಿದ್ದಾರೆ. ಹೇಳಿ ಕೇಳಿ ಕೊಹ್ಲಿ ದೆಹಲಿಯವರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಇದು ಅವರಿಗೆ ಮನೆಯ ಮೈದಾನದಂತೆ. ಹೀಗಾಗಿ ಎಲ್ಲರ ಚಿತ್ತ ಕೊಹ್ಲಿಯತ್ತ ನೆಟ್ಟಿದೆ.
ಆರ್ ಸಿಬಿ ವರ್ಸಸ್ ಡಿಸಿ ಮ್ಯಾಚ್ನಲ್ಲಿ ಕನ್ನಡಿಗರು ಕೂಡ ಕನ್ಫ್ಯೂಷನ್ನಲ್ಲಿದ್ದಾರೆ. ಯಾರಿಗೆ ಸಪೋರ್ಟ್ ಮಾಡೋದು ಅಂತಾ ತಲೆ ಕೆಡಿಸಿಕೊಳ್ತಿದ್ದಾರೆ. ಡೆಲ್ಲಿ ಪರ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಆರ್ ಸಿಬಿ ನಮ್ಮ ಹೋಂ ಟೀಂ. ಆರ್ ಸಿಬಿ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಮನೋಜ್ ಬಾಂಢಗೆ ಆಡ್ತಿದ್ದಾರೆ. ಹೀಗಾಗಿ ನಾವು ನಮ್ಮ ಕನ್ನಡಿಗರ ಧ್ವನಿಯಾಗಿರೋ ಆರ್ಸಿಬಿಗೆ ಸಪೋರ್ಟ್ ಮಾಡೋದಾ ಅಥವಾ ನಮ್ಮ ಕನ್ನಡಿಗ ಕ್ರಿಕೆಟರ್ಸ್ಗೆ ಅವಕಾಶ ಕೊಟ್ಟಿರೋ ಡಿಸಿಗೆ ಸಪೋರ್ಟ್ ಮಾಡೋದಾ ಅಂತಾ ಡೌಟ್ನಲ್ಲಿದ್ದಾರೆ.